»   » ರಕ್ಷಿತ್ ಶೆಟ್ಟಿ 'ಥಗ್ಸ್ ಆಫ್ ಮಾಲ್ಗುಡಿ' ಬಗ್ಗೆ ಸುದೀಪ್ ಬ್ರೇಕಿಂಗ್ ನ್ಯೂಸ್!

ರಕ್ಷಿತ್ ಶೆಟ್ಟಿ 'ಥಗ್ಸ್ ಆಫ್ ಮಾಲ್ಗುಡಿ' ಬಗ್ಗೆ ಸುದೀಪ್ ಬ್ರೇಕಿಂಗ್ ನ್ಯೂಸ್!

Posted By:
Subscribe to Filmibeat Kannada

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಮತ್ತು ರಕ್ಷಿತ್ ಶೆಟ್ಟಿ ಕಾಂಬಿನೇಷನ್ ನಲ್ಲಿ, ರಕ್ಷಿತ್ ಶೆಟ್ಟಿ ನಿರ್ದೇಶನದಲ್ಲಿ ಮೂಡಿಬರಲಿರುವ 'ಥಗ್ಸ್ ಆಫ್ ಮಾಲ್ಗುಡಿ' ಚಿತ್ರ ಮುಂಬರುವ ಜೂನ್ ತಿಂಗಳಲ್ಲಿ ಸೆಟ್ಟೇರಲಿದೆ ಎಂಬ ಸುದ್ದಿ ಎಲ್ಲೆಡೆ ಹರಿದಾಡಿತ್ತು. ಅಲ್ಲದೇ ಚಿತ್ರ ಯಾವಾಗ ಪ್ರಾರಂಭವಾಗಲಿದೆ ಎಂಬ ಅಭಿಮಾನಿಗಳ ಪ್ರಶ್ನೆಗೆ ಸ್ವತಃ ಕಿಚ್ಚ ಸುದೀಪ್ ಜೂನ್ ತಿಂಗಳಲ್ಲಿ ಎಂದು ಟ್ವಿಟರ್ ಮೂಲಕ ಉತ್ತರಿಸಿದ್ದರು. ಆದರೇ ಈಗ ಕಿಚ್ಚ ಸುದೀಪ್ ರವರೇ 'ಥಗ್ಸ್ ಆಫ್ ಮಾಲ್ಗುಡಿ' ಚಿತ್ರೀಕರಣ ಆರಂಭದ ಬಗ್ಗೆ ಹೊಸ ಅಪ್ ಡೇಟ್ ನೀಡಿದ್ದಾರೆ.['ಥಗ್ಸ್ ಆಫ್ ಮಾಲ್ಗುಡಿ' ಚಿತ್ರಕಥೆ ಬಿಚ್ಚಿಟ್ಟ ರಕ್ಷಿತ್ ಶೆಟ್ಟಿ]

'ಥಗ್ಸ್ ಆಫ್ ಮಾಲ್ಗುಡಿ' ಸಿನಿಮಾದ ಚಿತ್ರೀಕರಣ 70 ವರ್ಷಗಳ ಹಿಂದಿನ ಅನ್ ಟೋಲ್ಡ್ ಸ್ಟೋರಿಯನ್ನು ಹೇಳುವ ದೃಶ್ಯಗಳೊಂದಿಗೆ ಆರಂಭವಾಗಲಿದೆ ಎಂದು ರಕ್ಷಿತ್ ಶೆಟ್ಟಿ ಹೇಳಿದ್ದರು. ಈ ಹಿನ್ನೆಲೆಯಲ್ಲಿ ಕಿಚ್ಚನ ಅಭಿಮಾನಿಗಳಲ್ಲಿ ಸಿನಿಮಾ ಬಗ್ಗೆ ನಿರೀಕ್ಷೆ ಹೆಚ್ಚಾಗಿ, ಸುದೀಪ್ ಮತ್ತು ರಕ್ಷಿತ್ ಶೆಟ್ಟಿ ಕಾಂಬಿನೇಷನ್ ನ 'ಥಗ್ಸ್ ಆಫ್ ಮಾಲ್ಗುಡಿ' 100 ಕೋಟಿ ಬಜೆಟ್ ನಲ್ಲಿ ಮೂಡಿಬರಲಿದೆ ಎಂದು ಟ್ವೀಟ್ ಮಾಡಿದ್ದರು. ಇದಕ್ಕೆ ಉತ್ತರಿಸಿರುವ ಕಿಚ್ಚ ಸುದೀಪ್ ಹೇಳಿದ್ದೇನು ಗೊತ್ತಾ?

ಅನಿರ್ದಿಷ್ಟವಾಗಿ ಮುಂದೂಡಲಾಗಿದೆ...

ಚಿತ್ರದ ಬಜೆಟ್ ಬಗ್ಗೆ ಅಭಿಮಾನಿಗಳಿಗೆ ಇರುವ ಊಹಾಪೋಹಗಳಿಗೆ ಮತ್ತು ನಿರೀಕ್ಷೆಗಳಿಗೆ ಬ್ರೇಕ್ ಹಾಕಿರುವ ಕಿಚ್ಚ ಸುದೀಪ್, " 'ಥಗ್ಸ್ ಆಫ್ ಮಾಲ್ಗುಡಿ' ಚಿತ್ರವನ್ನು ಅನಿರ್ದಿಷ್ಟವಾಗಿ ಮುಂದೂಡಲಾಗಿದೆ" ಎಂದು ಟ್ವೀಟ್ ಮಾಡಿದ್ದಾರೆ.['ಥಗ್ಸ್ ಆಫ್ ಮಾಲ್ಗುಡಿ' ಚಿತ್ರಕಥೆ ಬಿಚ್ಚಿಟ್ಟ ರಕ್ಷಿತ್ ಶೆಟ್ಟಿ]

ಜೂನ್ ನಲ್ಲಿ ಚಿತ್ರೀಕರಣ ಆರಂಭವಾಗುವುದಿಲ್ಲ

" 'ಥಗ್ಸ್ ಆಫ್ ಮಾಲ್ಗುಡಿ' ಚಿತ್ರದ ಸ್ಕ್ರಿಪ್ಟ್ ರೆಡಿಮಾಡಲು ರಕ್ಷಿತ್ ಶೆಟ್ಟಿ ಗೆ ಹೆಚ್ಚು ಸಮಯ ಬೇಕಾಗಿರುವುದರಿಂದ ಸಿನಿಮಾ ಜೂನ್ ನಲ್ಲಿ ಸೆಟ್ಟೇರುವುದು ಭಾಗಶಃ ಡೌಟ್"- ಕಿಚ್ಚ ಸುದೀಪ್, ನಟ.[ಸುದೀಪ್ ಗೆ ರಕ್ಷಿತ್ ಶೆಟ್ಟಿ ಆಕ್ಷನ್ ಕಟ್: ಮುಹೂರ್ತ ಸಮಯ ಕೂಡಿ ಬಂತು.!]

ರಕ್ಷಿತ್ ಶೆಟ್ಟಿ ಚಿತ್ರೀಕರಣದಲ್ಲಿ ಬಿಜಿ

"ಪ್ರಸ್ತುತ ರಕ್ಷಿತ್ ಶೆಟ್ಟಿ 'ಅವನೇ ಶ್ರೀಮನ್ ನಾರಾಯಣ' ಚಿತ್ರದಲ್ಲಿ ವರ್ಕ್ ಮಾಡುತ್ತಿದ್ದಾರೆ. ಮುಂದಿನ ಸಿನಿಮಾ ಅವರ ಜೊತೆಯೇ. ರಕ್ಷಿತ್ ಶೆಟ್ಟಿ ಗೆ ನನ್ನ ವಿಶ್ ಸದಾಕಾಲ ಇರುತ್ತದೆ" ಎಂದು ಸುದೀಪ್ ಟ್ವೀಟಿಸಿದ್ದಾರೆ.

'ಥಗ್ಸ್ ಆಫ್ ಮಾಲ್ಗುಡಿ' ಬಜೆಟ್

ಅಂದಹಾಗೆ ರಕ್ಷಿತ್ ಶೆಟ್ಟಿ ತಾವು ನಿರ್ದೇಶನ ಮಾಡಲಿರುವ 'ಥಗ್ಸ್ ಆಫ್ ಮಾಲ್ಗುಡಿ' ಚಿತ್ರದ ಬಜೆಟ್ ಬಗ್ಗೆ ಇನ್ನೂ ಮಾಹಿತಿ ಬಿಟ್ಟುಕೊಟ್ಟಿಲ್ಲ. ಆದರೆ "ಬಜೆಟ್ ಸಮಸ್ಯೆಯಿಂದ ಈ ಪ್ರಾಜೆಕ್ಟ್ ಅನ್ನು ಎರಡು ವರ್ಷದಿಂದ ಮುಂದೂಡಿಕೊಂಡು ಬಂದಿದ್ದೆ. ಈಗ ಸುದೀಪ್ ಅವರು ನಾಯಕರಾಗಿ ಅಭಿನಯಿಸುವುದರಿಂದ ಈ ಸಮಸ್ಯೆ ಇಲ್ಲ ಎಂದು" ಈ ಹಿಂದೆ ಹೇಳಿದ್ದರು. ಈ ಹಿನ್ನೆಲೆಯಲ್ಲಿ ಹೇಳುವುದಾದರೇ ಚಿತ್ರ ಬಿಗ್ ಬಜೆಟ್ ನಲ್ಲೇ ಮೂಡಿಬರಲಿದೆ.

ಸುದೀಪ್ 'ದಿ ವಿಲನ್'ನಲ್ಲಿ ಬಿಜಿ

ಸದ್ಯದಲ್ಲಿ ಕಿಚ್ಚ ಸುದೀಪ್ ಜೋಗಿ ಪ್ರೇಮ್ ನಿರ್ದೇಶನದ 'ದಿ ವಿಲನ್' ಚಿತ್ರದ ಶೂಟಿಂಗ್ ನಲ್ಲಿ ಬಿಜಿಯಾಗಿದ್ದಾರೆ.

English summary
Kannada Actor Kiccha Sudeep tweeted about his next movie with Rakshit Shetty direction as " 'Thugs Of Malgudi' has been indefinetly postponed".

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada