For Quick Alerts
  ALLOW NOTIFICATIONS  
  For Daily Alerts

  ರವಿಶಂಕರ್ ಗೌಡ ಹುಟ್ಟುಹಬ್ಬಕ್ಕೆ ಸ್ಪೆಷಲ್ ಉಡುಗೊರೆ ಕಳುಹಿಸಿದ ಸುದೀಪ್

  |

  ಡಾ ವಿಠ್ಠಲ್ ರಾವ್.....ವೆರಿ ಫೇಮಸ್ ಇನ್ ಸರ್ಜರಿ & ಭರ್ಜರಿ.....ಎಂದೇಳುತ್ತ ಕನ್ನಡ ಕಲಾಭಿಮಾನಿಗಳನ್ನು ನಕ್ಕು ನಲಿಸಿದ ಪ್ರತಿಭಾನ್ವಿತ ಕಲಾವಿದ ಹಾಗೂ ಹಾಡುಗಾರ ರವಿಶಂಕರ್ ಗೌಡ ಅವರಿಗೆ ಇಂದು ಹುಟ್ಟುಹಬ್ಬ.

  Ayogya ಸಿನಿಮಾದಲ್ಲಿ Satish Neenasam ಕೆಂಡದ ಮೇಲೆ ಓಡಿದ್ದು ಹೇಗೆ ನೋಡಿ|Ayogya song Making| Oneindia Kannada

  ರವಿಶಂಕರ್ ಗೌಡ ಬರ್ತಡೇ ಪ್ರಯುಕ್ತ ಕಿಚ್ಚ ಸುದೀಪ್ ವಿಶೇಷವಾದ ಕೇಕ್ ಕಳುಹಿಸಿದ್ದಾರೆ. ಸದ್ಯ ಹೈದರಾಬಾದ್‌ನಲ್ಲಿ ಫ್ಯಾಂಟಮ್ ಸಿನಿಮಾದ ಚಿತ್ರೀಕರಣದಲ್ಲಿರುವ ಸುದೀಪ್, ಅಲ್ಲಿಂದಲೇ ಆತ್ಮೀಯ ಸ್ನೇಹಿತ ಹಾಗೂ ಆಪ್ತ ನಟನಿಗೆ ಕೇಕ್ ಕಳುಹಿಸಿಕೊಟ್ಟಿದ್ದಾರೆ.

  ಹೈದರಾಬಾದ್‌ನಿಂದ ಪ್ರೀತಿ ಪಾತ್ರರ ಹುಟ್ಟುಹಬ್ಬಕ್ಕೆ ಕೇಕ್ ಕಳುಹಿಸಿದ ಸುದೀಪ್ಹೈದರಾಬಾದ್‌ನಿಂದ ಪ್ರೀತಿ ಪಾತ್ರರ ಹುಟ್ಟುಹಬ್ಬಕ್ಕೆ ಕೇಕ್ ಕಳುಹಿಸಿದ ಸುದೀಪ್

  ಸುದೀಪ್ ಕಳುಹಿಸಿದ ಕೇಕ್‌ನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ರವಿಶಂಕರ್ ಗೌಡ ''ಸ್ನೇಹದ ಸಲುಗೆ ಎಷ್ಟೆ ಇದ್ದರು. ದೊಡ್ಡ ಗುಣವನ್ನು ಗೌರವಿಸಲೆಬೇಕು. ಕಿಚ್ಚನಿಂದ ಕುಚೇಲನ ಮನೆಗೆ ಸ್ನೇಹದ ಪ್ರತೀಕ. ಸಿಹಿ ಊರಣದ ಉಡುಗೊರೆ ರವಾನೆ. ಈ ಅಸೀಮ ಪ್ರೀತಿಗೆ ಧನ್ಯವಾದಗಳು ದೀಪು' ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

  ನಿನ್ನೆಯಷ್ಟೇ ಮುಂಚೆ ಕನ್ನಡ ಪ್ರದೀಪ್ ಅವರ ಸಹ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು. ಪ್ರದೀಪ್ ಗೂ ಸಹ ಕಿಚ್ಚ ಸುದೀಪ್ ಹೈದರಾಬಾದ್‌ನಿಂದ ಕೇಕ್ ಕಳುಹಿಸಿದ್ದರು.

  ಇನ್ನು ರವಿಶಂಕರ್ ಗೌಡ ಅವರ ಹುಟ್ಟುಹಬ್ಬಕ್ಕೆ ಕನ್ನಡದ ನಟ-ನಿರ್ದೇಶಕರು ವಿಶ್ ಮಾಡಿದ್ದಾರೆ. ನಿರೂಪ್ ಭಂಡಾರಿ, ರಿಷಬ್ ಶೆಟ್ಟಿ, ಪ್ರದೀಪ್, ಸಂತೋಷ್ ಆನಂದ್‌ರಾಮ್, ಗಣೇಶ್, ನಿರ್ಮಾಪಕ ಕಾರ್ತಿಕ್ ಗೌಡ, ಪ್ರಮೋದ್, ನೆನಪಿರಲಿ ಪ್ರೇಮ್, ಸಿಂಪಲ್ ಸುನಿ, ಧನಂಜಯ್, ಪವನ್ ಒಡೆಯರ್ ಸೇರಿದಂತೆ ಹಲವರು ಶುಭಕೋರಿದ್ದಾರೆ.

  English summary
  Kannada actor Kiccha Sudeep has sent birthday cake to sandalwood actor Ravishankar gowda.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X