»   » 'ಕ್ಯಾಪ್ಟನ್' ಆದ ಸುದೀಪ್: ಲಾರ್ಡ್ಸ್ ಮೈದಾನದಲ್ಲಿ ಕಿಚ್ಚ ಮುನ್ನಡೆಸಲಿರುವ ತಂಡ ಯಾವುದು?

'ಕ್ಯಾಪ್ಟನ್' ಆದ ಸುದೀಪ್: ಲಾರ್ಡ್ಸ್ ಮೈದಾನದಲ್ಲಿ ಕಿಚ್ಚ ಮುನ್ನಡೆಸಲಿರುವ ತಂಡ ಯಾವುದು?

Posted By:
Subscribe to Filmibeat Kannada

ಅಭಿನವ ಚಕ್ರವರ್ತಿ ಕಿಚ್ಚ ಸುದೀಪ್ ಗೆ ಲಂಡನ್ ನಿಂದ ಕ್ರಿಕೆಟ್ ಆಡಲು ಆಹ್ವಾನ ಬಂದಿದೆ. ಹೀಗಾಗಿ ಸುದೀಪ್ ಇಂಗ್ಲೆಂಡ್ ನ ಲಾರ್ಡ್ಸ್ ಮೈದಾನದಲ್ಲಿ ಬ್ಯಾಟ್ ಹಿಡಿದು ಅಖಾಡಕ್ಕೆ ಇಳಿಯಲಿದ್ದಾರೆ ಎಂಬ ಸುದ್ದಿ ಹೇಳಿದ್ವಿ.

ಇದೀಗ ಬಂದಿರುವ ಲೇಟೆಸ್ಟ್ ಮಾಹಿತಿ ಏನಪ್ಪಾ ಅಂದ್ರೆ, ಸುದೀಪ್ ಬರಿ ಆಟಗಾರನಾಗಿ ಮಾತ್ರ ಆಡುತ್ತಿಲ್ಲ. ಬದಲಾಗಿ ಕ್ರಿಕೆಟ್ ಟೂರ್ನಿಯಲ್ಲಿ ಒಂದು ತಂಡವನ್ನ ಮುನ್ನೆಡಸುತ್ತಿದ್ದಾರೆ. ಅರ್ಥಾಥ್ ಒಂದು ತಂಡದ ನಾಯಕತ್ವ ವಹಿಸಿಕೊಂಡಿದ್ದಾರೆ.[ಕಿಚ್ಚ ಸುದೀಪ್ ಗೆ ಲಂಡನ್‌ನಿಂದ ಬಂದಿದೆ ಸಿಹಿ ಸುದ್ದಿ; ಏನದು?]

ಹಾಗಾದ್ರೆ, ಸುದೀಪ್ ಆಡಲಿರುವ ತಂಡ ಯಾವುದು? ಕಿಚ್ಚನ ಟೀಮ್ ನಲ್ಲಿ ಯಾರೆಲ್ಲ ಆಟಗಾರರು ಇರಲಿದ್ದಾರೆ ಎಂಬ ಸುದ್ದಿ ತಿಳಿದುಕೊಳ್ಳಲು ಮುಂದೆ ಓದಿ..........

ಲಂಡನ್ ಟೂರ್ನಿಯಲ್ಲಿ ಸುದೀಪ್ ನಾಯಕ!

ಇಂಗ್ಲೆಂಡ್ ನಲ್ಲಿ ನಡೆಯುತ್ತಿರುವ `ಕಾರ್ಪೋರೇಟರ್ ಕ್ರಿಕೆಟ್‌ ಡೇ' ಟೂರ್ನಿಯಲ್ಲಿ ಸುದೀಪ್ ತಂಡವೊಂದನ್ನ ಮುನ್ನೆಡಸುತ್ತಿದ್ದಾರೆ. ಸುದೀಪ್ ಮುನ್ನಡೆಸುತ್ತಿರುವ ತಂಡದ ಲೋಗೋ ಮತ್ತು ಹೆಸರನ್ನ ಸ್ವತಃ ಸುದೀಪ್ ಅವರೇ ತಮ್ಮ ಟ್ವಿಟ್ಟರ್ ಅಕೌಂಟ್ ನಲ್ಲಿ ಹಂಚಿಕೊಂಡಿದ್ದಾರೆ.[ಸಿಸಿಎಲ್ ಮ್ಯಾಚ್ ನಿಂದ ಕಿಚ್ಚ ಅವರಿಗೆ ಸಿಗುವ ಸಂಭಾವನೆ ಎಷ್ಟು]

ಕಿಚ್ಚನ ತಂಡದ ಲೋಗೋ ಇಲ್ಲಿದೆ ನೋಡಿ!

`ಕಾರ್ಪೋರೇಟರ್ ಕ್ರಿಕೆಟ್‌ ಡೇ' ಟೂರ್ನಿಯಲ್ಲಿ ಸುದೀಪ್ 'ವಿಸನ್ಯಾಯ್ರ್' (Visionnaire) ಎಂಬ ತಂಡದ ನಾಯಕನಾಗಿದ್ದು, ತಂಡದ ಅಧಿಕೃತ ಚಿಹ್ನೆಯನ್ನ ಬಿಡುಗಡೆ ಮಾಡಲಾಗಿದೆ. ಆದ್ರೆ, ತಂಡದಲ್ಲಿ ಯಾರೆಲ್ಲ ಆಟಗಾರರು ಇರಲಿದ್ದಾರೆ ಎಂಬ ಮಾಹಿತಿ ಇನ್ನು ಬಹಿರಂಗವಾಗಿಲ್ಲ.[ಫೋಟೋ ಆಲ್ಬಂ: ತಮಿಳು ಸ್ಟಾರ್ ಕ್ರಿಕೆಟ್ ಲೀಗ್ ನಲ್ಲಿ ಕಿಚ್ಚ-ಶಿವಣ್ಣ ಭಾಗಿ]

ಪ್ರಾಕ್ಟೀಸ್ ನಲ್ಲಿ ನಿರತರಾಗಿರುವ ಕಿಚ್ಚ

ತಮ್ಮ ಕನಸಿನ ಲಾರ್ಡ್ಸ್ ಮೈದಾನದಲ್ಲಿ ಕ್ರಿಕೆಟ್ ಆಡಲು ಉತ್ಸುಕರಾಗಿರುವ ಸುದೀಪ್ ಈ ಟೂರ್ನಿಗಾಗಿ ಈಗಾಗಲೇ ಪ್ರಾಕ್ಟಿಸ್ ಮಾಡ್ತಿದ್ದಾರೆ. 'ಕರ್ನಾಟಕ ಇನ್ಸ್ ಟ್ಯೂಟ್ ಆಫ್ ಕ್ರಿಕೆಟ್'ನಲ್ಲಿ ಬ್ಯಾಟ್ ಹಿಡಿದು ಬೆವರಿಳಿಸುತ್ತಿದ್ದಾರೆ.[ಶುರುವಾಗುತ್ತಿದೆ ಸ್ಯಾಂಡಲ್ ವುಡ್ ನಲ್ಲಿ ಮತ್ತೊಂದು ಕ್ರಿಕೆಟ್ ಲೀಗ್]

ಮೇ 11 ರಿಂದ ಟೂರ್ನಿ ಶುರು!

ಅಂದ್ಹಾಗೆ, ಕ್ರಿಕೆಟ್ ಕಾಶಿ ಎಂದೇ ಖ್ಯಾತಿ ಪಡೆದಿರುವ ಇಂಗ್ಲೆಂಡಿನ ಲಾರ್ಡ್ಸ್ ಕ್ರೀಡಾಂಗಣದಲ್ಲಿ ಮೇ 11 ರಂದು `ಕಾರ್ಪೋರೇಟರ್ ಕ್ರಿಕೆಟ್‌ ಡೇ' ಟೂರ್ನಿ ನಡೆಯಲಿದೆ.[KPL ಕ್ರಿಕೆಟ್ ಲೀಗ್ ಗೆ ಬಾಯ್ ಬಾಯ್ ಹೇಳ್ತಾರ ಕಿಚ್ಚ ಸುದೀಪ್?]

ಕಿಚ್ಚನಿಗಿದೆ ನಾಯಕತ್ವದ ಅನುಭವ!

ಸುದೀಪ್ ಈಗಾಗಲೇ ಹಲವು ಕ್ರಿಕೆಟ್ ಟೂರ್ನಿಯಲ್ಲಿ ತಂಡವನ್ನ ಮುನ್ನಡೆಸಿದ್ದಾರೆ. 'ರಾಜ್ ಕಪ್', ಸಿಸಿಎಲ್ ನಲ್ಲಿ ಕರ್ನಾಟಕ ಬುಲ್ಡೋಜರ್ಸ್, ಆಲ್ ಸ್ಟಾರ್ಸ್ ತಂಡದ ನಾಯಕರಾಗಿ ಕಾರ್ಯನಿರ್ವಹಿಸಿದ್ದಾರೆ. ಈಗ ಲಾರ್ಡ್ಸ್ ಮೈದಾನದಲ್ಲೂ ಕ್ಯಾಪ್ಟನ್ ಆಗಿ ಕಣಕ್ಕಿಳಿಯಲಿದ್ದಾರೆ.

English summary
Kannada Actor Kiccha Sudeep gets invitation to participate in Cricket tournaments at London's Lord's Cricket Ground. Sudeep Shares his Team logo and Team Name in twitter

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada