ಸಂಗೊಳ್ಳಿ ರಾಯಣ್ಣ ಟ್ರೇಲರ್ ನಲ್ಲಿ ಮಿಂಚಿದ ಸುದೀಪ್
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಮಹತ್ವಾಕಾಂಕ್ಷಿ ಬಿಗ್ ಬಜೆಟ್ ಚಿತ್ರ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಕ್ಟೋಬರ್ 19ರಂದು ನಿಮ್ಮ ನೆಚ್ಚಿನ ಚಿತ್ರಮಂದಿರಗಳಲ್ಲಿ ತೆರೆಕಾಣುತ್ತಿದೆ. ಈಗಾಗಲೆ ಬಿಡುಗಡೆಯಾಗಿರುವ ಈ ಚಿತ್ರದ ಟ್ರೇಲರ್ ಸಹ ಅಭಿಮಾನಿಗಳನ್ನು ಆಕರ್ಷಿಸುತ್ತಿದೆ.
ಸಂಗೊಳ್ಳಿ ರಾಯಣ್ಣ ಟ್ರೇಲರ್ ನಲ್ಲಿ ದರ್ಶನ್ ಜೊತೆಗೆ ಮಿಂಚಿರುವವರು ಕಿಚ್ಚ ಸುದೀಪ್. ಸಂಗೊಳ್ಳಿ ರಾಯಣ್ಣನ ಸಾಹಸ, ಶೌರ್ಯ, ತ್ಯಾಗ ಮತ್ತು ಹುತಾತ್ಮತೆಯನ್ನು ಸುದೀಪ್ ತಮ್ಮ ಕಂಚಿನ ಕಂಠದಲ್ಲಿ ವರ್ಣಿಸುವುದು ಅತ್ತ ದರ್ಶನ್ ಹಾಗೂ ಇತ್ತ ಸುದೀಪ್ ಅಭಿಮಾನಿಗಳಿಗೆ ಭರಪೂರ ಮನರಂಜನೆ ಒದಗಿಸಿದೆ.

ರಾಯಣ್ಣನ ತ್ಯಾಗ, ಬಲಿದಾನ ಸ್ವಾತಂತ್ರ್ಯ ಹೋರಾಟಗಾರರಿಗೆ ಸ್ಫೂರ್ತಿಯಾಗಿತ್ತು. ಆನಂದ ಅಪ್ಪುಗೋಳ್ ಅವರು ಈ ಚಿತ್ರದನ್ನು ಸುಮಾರು ರು.32 ಕೋಟಿ ಬಜೆಟ್ ನಲ್ಲಿ ನಿರ್ಮಿಸಿದ್ದಾರೆ. ಚಿತ್ರದಲ್ಲಿ ಜಯಪ್ರದಾ ಅವರು ಕಿತ್ತೂರು ರಾಣಿ ಚೆನ್ನಮ್ಮನಾಗಿ ಕಾಣಿಸಿದ್ದಾರೆ.
ಮಲ್ಲಮ್ಮನಾಗಿ ತಾರೆ ನಿಖಿತಾ ತುಕ್ರಲ್ ಅಭಿನಯಿಸಿದ್ದಾರೆ. ಪಾತ್ರವರ್ಗದಲ್ಲಿ ಶ್ರೀನಿವಾಸ ಮೂರ್ತಿ, ಉಮಾಶ್ರೀ, ಶಶಿಕುಮಾರ್, ಕರಿಬಸವಯ್ಯ ಹಾಗೂ ದಿವ್ಯಾ ಪರಮೇಶ್ವರನ್ ಅಭಿನಯಿಸಿದ್ದಾರೆ. ನಾಗಣ್ಣ ನಿರ್ದೇಶನದ ಚಿತ್ರಕ್ಕೆ ಯಶೋವರ್ಧನ್ ಅವರ ಸಂಗೀತ ಹಾಗೂ ಕೇಶವಾದಿತ್ಯ ಅವರ ಸಾಹಿತ್ಯ ಚಿತ್ರಕ್ಕಿದೆ. ಚಿತ್ರದ ಮೇಲೆ ಕ್ಲಿಕ್ಕಿಸಿ ಟ್ರೇಲರ್ ನೋಡಿ. (ಒನ್ಇಂಡಿಯಾ ಕನ್ನಡ)


Click it and Unblock the Notifications











