For Quick Alerts
  ALLOW NOTIFICATIONS  
  For Daily Alerts

  'ದಿ ವಿಲನ್' ಹೊಸ ಪೋಸ್ಟರ್ ಔಟ್: ಒಬ್ಬೊಬ್ಬರದ್ದು ಒಂದೊಂದು ಅವತಾರ.!

  By Harshitha
  |
  TheVillain : ದಿ ವಿಲನ್ ಪೋಸ್ಟರ್ ಬಿಡುಗಡೆ ಮಾಡಿದ ಪ್ರೇಮ್..! | Filmibeat Kannada

  ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಹಾಗೂ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಬಹು ನಿರೀಕ್ಷಿತ ಸಿನಿಮಾ 'ದಿ ವಿಲನ್' ಬಿಡುಗಡೆ ದಿನಾಂಕ ಇನ್ನೂ ನಿಗದಿ ಆಗಿಲ್ಲ. ಆದ್ರೆ, ಆಗಸ್ಟ್ 19 ರಂದು (ಭಾನುವಾರ) ಸಂಜೆ 5 ಗಂಟೆಗೆ ಬೆಂಗಳೂರಿನ ಮಾನ್ಯತಾ ಟೆಕ್ ಪಾರ್ಕ್ ಬಳಿ ಇರುವ ವೈಟ್ ಆರ್ಕಿಡ್ ನಲ್ಲಿ 'ದಿ ವಿಲನ್' ಆಡಿಯೋ ರಿಲೀಸ್ ಸಮಾರಂಭ ಹಮ್ಮಿಕೊಳ್ಳಲಾಗಿದೆ.

  ಆಗಸ್ಟ್ 24 ರಂದು ದುಬೈನಲ್ಲಿ 'ದಿ ವಿಲನ್' ಆಡಿಯೋ ಸಕ್ಸಸ್ ಮೀಟ್ ನಡೆಯಲಿದೆ. ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸ ಭರದಿಂದ ಸಾಗುತ್ತಿರುವಾಗಲೇ, 'ದಿ ವಿಲನ್' ಚಿತ್ರದ ಹೊಚ್ಚ ಹೊಸ ಪೋಸ್ಟರ್ ಬಿಡುಗಡೆ ಆಗಿದೆ.

  'ದಿ ವಿಲನ್' ಟೀಸರ್ ನೋಡಿ ಶಾನ್ವಿ ಮಾಡಿರುವ ಕಾಮೆಂಟ್ ಏನು.?'ದಿ ವಿಲನ್' ಟೀಸರ್ ನೋಡಿ ಶಾನ್ವಿ ಮಾಡಿರುವ ಕಾಮೆಂಟ್ ಏನು.?

  ಈ ಪೋಸ್ಟರ್ ನಲ್ಲಿ ಸುದೀಪ್, ಆಮಿ ಜಾಕ್ಸನ್ ಹಾಗೂ ಶಿವರಾಜ್ ಕುಮಾರ್... ಒಬ್ಬೊಬ್ಬರು ಒಂದೊಂದು ಅವತಾರದಲ್ಲಿ ಕಾಣುತ್ತಾರೆ.

  ನಾಟ್ಟಿಂಗ್ಹ್ಯಾಮ್ ಟ್ರೆಂಚ್ ಕೋಟು.. ಬೂಟು.. ತಲೆಗೆ ಟೋಪಿ ಧರಿಸಿ, ಉದ್ದ ಕೂದಲು ಬಿಟ್ಟು ಸೂಪರ್ ಸ್ಟೈಲಿಶ್ ವಿಲನ್ ಲುಕ್ ನಲ್ಲಿ ಸುದೀಪ್ ಕಾಣಿಸಿಕೊಂಡಿದ್ದರೆ, ಇತ್ತ ಶಿವಣ್ಣ ಲುಕ್ ವಿಚಿತ್ರ. ವಿಭಿನ್ನವಾಗಿದೆ.

  ಹಸಿರು ಪಂಚೆ.. ಪಿಂಕ್ ಕೋಟು.. ಧರಿಸಿ ಪಕ್ಕಾ ದೇಸಿ ಲುಕ್ ನಲ್ಲಿ ಶಿವಣ್ಣ ಮಿಂಚಿದ್ದಾರೆ. ಇವರಿಬ್ಬರ ಮಧ್ಯೆ ನಿಂತಿರುವ ಆಮಿ ಜಾಕ್ಸನ್ ಮಾತ್ರ ಅಲ್ಟ್ರಾ ಮಾಡರ್ನ್.

  ನಿರ್ದೇಶಕ ಪ್ರೇಮ್ ವಿರುದ್ಧ 'ಶಿವ'ಭಕ್ತರು ಸಿಡಿಸಿದ 7 ಸಿಡಿಗುಂಡುಗಳು.!ನಿರ್ದೇಶಕ ಪ್ರೇಮ್ ವಿರುದ್ಧ 'ಶಿವ'ಭಕ್ತರು ಸಿಡಿಸಿದ 7 ಸಿಡಿಗುಂಡುಗಳು.!

  'ದಿ ವಿಲನ್' ಸಿನಿಮಾದಲ್ಲಿ ವಿಲನ್ ಯಾರು, ಹೀರೋ ಯಾರು ಅನ್ನೋದಿನ್ನೂ ಸೀಕ್ರೆಟ್ ಆಗಿಯೇ ಉಳಿದಿದೆ. ಪೋಸ್ಟರ್ ನಲ್ಲಿಯೂ ನಿರ್ದೇಶಕ ಪ್ರೇಮ್ ಯಾವುದೇ ಕ್ಲೂ ಕೊಟ್ಟಿಲ್ಲ. ಆದ್ರೆ, ಮೂರ್ನಾಲ್ಕು ವಿಭಿನ್ನ ಲುಕ್ ಗಳಲ್ಲಿ ಸುದೀಪ್, ಶಿವಣ್ಣ ಕಾಣಿಸಿಕೊಳ್ಳುವುದು ಮಾತ್ರ ಪಕ್ಕಾ.

  English summary
  Kiccha Sudeep and Shiva Rajkumar starrer 'The Villain' new poster is out.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X