TRENDING ON ONEINDIA
-
ಸಾಕ್ಷ್ಯಾಧಾರ ಇಲ್ಲದೆ ಪಾಕಿಸ್ತಾನವನ್ನು ದೂಷಿಸಬೇಡಿ ಎಂದ ಚೀನಾ
-
7 ಸೀಟರ್ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆಯಾಗಲಿದೆ ಕಿಯಾ ಕಾರ್ನಿವಾಲ್
-
ಯಾವುದೇ ಆಪ್ಗಳ ಕ್ಯಾಶೆ ಕ್ಲಿಯರ್ ಮಾಡುತ್ತಿರಬೇಕು ಏಕೆ ಮತ್ತು ಹೇಗೆ?
-
'ಬೆಲ್ ಬಾಟಮ್' ಪಾಸು, 'ಕೆಮಿಸ್ಟ್ರಿ ಆಫ್ ಕರಿಯಪ್ಪ'ನ ಫಾರ್ಮೂಲಾ ವರ್ಕೌಟ್
-
ಭಾರತ ಪಾಕ್ ನಡುವೆ ಯುದ್ದ ನಡೆದರೆ ಉಂಟಾಗುವ ಆರ್ಥಿಕ ದುಷ್ಪರಿಣಾಮಗಳೇನು?
-
ಮುಖಮೈಥುನ ನಡೆಸುವ ಪುರುಷರಿಗೆ 'ಬಾಯಿ-ಗಂಟಲ ಕ್ಯಾನ್ಸರ್' ಬರಬಹುದು!
-
ಅಭಿಮಾನಿಗಳಿಂದ ಕೊಹ್ಲಿ-ಎಬಿಡಿ ಪೋಸ್ಟರ್ಗೆ ಹಾಲಭಿಷೇಕ: ವಿಡಿಯೋ
-
ಐಟಿಐ ಲಿಮಿಟೆಡ್ ನಲ್ಲಿ ಕಾನೂನು ಪದವಿ ಅಭ್ಯರ್ಥಿಗೆ ಉದ್ಯೋಗಾವಕಾಶ
'ಬಿಗ್ ಬಾಸ್' ವೇದಿಕೆಯಲ್ಲಿ 'ಯಜಮಾನ'ನನ್ನ ನೆನೆದ ಸುದೀಪ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ಸುದೀಪ್ ಒಂದು ಸಮಯದಲ್ಲಿ ಆಪ್ತ ಸ್ನೇಹಿತರು. ಕಾರಣಾಂತರಗಳಿಂದ ಇಬ್ಬರಲ್ಲಿ ಮನಸ್ತಾಪ ಮೂಡಿ ಸದ್ಯಕ್ಕೆ ಸ್ವಲ್ಪ ದೂರ ದೂರವಿದ್ದಾರೆ. ಆದ್ರೆ, ಅಭಿಮಾನಿಗಳಿಗೆ ಮಾತ್ರ ಇವರಿಬ್ಬರ ಚಿತ್ರಗಳು ಒಂದೇ.
ದರ್ಶನ್ ಸಿನಿಮಾಗೆ ಸುದೀಪ್ ಅಭಿಮಾನಿಗಳು ಶುಭಕೋರುವುದು, ಕಿಚ್ಚನ ಸಿನಿಮಾಗಳಿಗೆ ಡಿ-ಬಾಸ್ ಭಕ್ತರು ವಿಶ್ ಮಾಡುವುದು ಸಾಮಾನ್ಯ. ಇದೀಗ, ಕಿಚ್ಚ ಸುದೀಪ್ ಬಿಗ್ ಬಾಸ್ ವೇದಿಕೆಯಲ್ಲಿ ಯಜಮಾನನ ಬಗ್ಗೆ ಮಾತನಾಡಿದ್ದಾರೆ.
ಅಬ್ಬಾ.. ಸುದೀಪ್ 'ಪೈಲ್ವಾನ್' ಬಗ್ಗೆ 'ಸುಲ್ತಾನ್' ಸಲ್ಮಾನ್ ಟ್ವೀಟ್
ಈ ಶನಿವಾರ ಪ್ರಸಾರವಾದ 'ವಾರದ ಕಥೆ ಕಿಚ್ಚನ ಜೊತೆ' ಕಾರ್ಯಕ್ರಮ ಆರಂಭವಾಗುತ್ತಿದ್ದಂತೆ ದರ್ಶನ್ ಸಿನಿಮಾ ಬಗ್ಗೆ ಸುದೀಪ್ ಮಾತಾಡಿದ್ರು. ಏನಿದು ಯಜಮಾನ ಮತ್ತು ಸುದೀಪ್ ಕಥೆ? ಮುಂದೆ ಓದಿ.....
ಪೈಲ್ವಾನ್ ಮತ್ತು ಯಜಮಾನ ಹವಾ
ಸಂಕ್ರಾಂತಿ ಹಬ್ಬದ ವಿಶೇಷವಾಗಿ ಸುದೀಪ್ ಅಭಿನಯದ ಪೈಲ್ವಾನ್ ಟೀಸರ್ ಹಾಗೂ ದರ್ಶನ್ ಅಭಿನಯದ ಯಜಮಾನ ಚಿತ್ರದ ಹಾಡು ಬಿಡುಗಡೆಯಾಗಿತ್ತು. ಈ ಎರಡು ವಿಡಿಯೋಗೆ ಭಾರಿ ಮೆಚ್ಚುಗೆ ಸಿಕ್ಕಿದ್ದು, ಎರಡ್ಮೂರು ದಿನ ಸೋಶಿಯಲ್ ಮೀಡಿಯಾದಲ್ಲಿ ಪೈಲ್ವಾನ್ ಮತ್ತು ಯಜಮಾನನೇ ಟ್ರೆಂಡಿಂಗ್ ನಲ್ಲಿತ್ತು. ಹೀಗಾಗಿ, ಸುದೀಪ್ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ.
'ಪೈಲ್ವಾನ್' ಟೀಸರ್ ನೋಡಿ 'ವಿಲನ್' ಪ್ರೇಮ್ಸ್ ಏನಂದ್ರು?
ಯಜಮಾನನ ಪರವಾಗಿ ಥ್ಯಾಂಕ್ಸ್ ಹೇಳಿದ ಬಿಗ್ ಬಾಸ್
''ಪೈಲ್ವಾನ್ ಟೀಸರ್ ಮತ್ತು ಯಜಮಾನ ಹಾಡು ಎರಡಕ್ಕೂ ಬಹಳ ಅದ್ಭುತವಾಗಿ ಬೆನ್ನುತಟ್ಟಿ, ಪ್ರೋತ್ಸಾಹಿಸಿದ್ದಕ್ಕೆ ಎಲ್ಲರಿಗೂ ಧನ್ಯವಾದಗಳು'' ಎಂದು ಸುದೀಪ್ ಹೇಳಿದರು. ಪೈಲ್ವಾನ್ ಬಗ್ಗೆ ಮಾತ್ರ ಹೇಳಿದ್ದರೇ, ಅದು ಸುದೀಪ್ ಶೋ ಹಾಗಾಗಿ ಸಾಮಾನ್ಯ ಎನ್ನಬಹುದಿತ್ತು. ಬಟ್, ಇಲ್ಲಿ ಪಕ್ಷಪಾತವಿಲ್ಲದೇ ಕನ್ನಡ ಸಿನಿಮಾಗಳು ಎಂಬ ಕಾರಣಕ್ಕೆ ಯಜಮಾನ ಮತ್ತು ಪೈಲ್ವಾನ್ ಎಂದು ಹೆಸರೇಳಿದ್ದು ನಿಜಕ್ಕೂ ಶ್ಲಾಘನೀಯ.
ರಿಲೀಸ್ ಆದ 7 ನಿಮಿಷದಲ್ಲಿ ದಾಖಲೆ ಬರೆದ 'ಯಜಮಾನ' ಎರಡನೇ ಹಾಡು
'ಪೈಲ್ವಾನ್' ವೀಕ್ಷಣೆ ಎಷ್ಟು?
ಜನವರಿ 15 ರಂದು ತೆರೆಕಂಡಿದ್ದ ಪೈಲ್ವಾನ್ ಟೀಸರ್, ಇದುವರೆಗೂ 3.7 ಮಿಲಿಯನ್ (37.2 ಲಕ್ಷ) ವೀಕ್ಷಣೆ ಕಂಡಿದೆ. ಹೆಬ್ಬುಲಿ ಕೃಷ್ಣ ಈ ಚಿತ್ರವನ್ನ ನಿರ್ದೇಶನ ಮಾಡಿದ್ದು, ಈ ಚಿತ್ರದಲ್ಲಿ ಸುದೀಪ್ ಕುಸ್ತಿಪಟು ಪಾತ್ರ ನಿರ್ವಹಿಸಿದ್ದಾರೆ.
'ಯಜಮಾನ'ನ 'ನಂದಿ' ವೇಗಕ್ಕೆ ದಾಖಲೆಗಳು ಧೂಳಿಪಟ
ಯಜಮಾನ ಹವಾ ನಿಂತಿಲ್ಲ
ದರ್ಶನ್ ಅಭಿನಯದ 'ಯಜಮಾನ' ಹಾಡು ಕೂಡ ಜನವರಿ 15 ರಂದೇ ರಿಲೀಸ್ ಆಗಿತ್ತು. 5.7 ಮಿಲಿಯನ್ (57.3 ಲಕ್ಷ) ವೀಕ್ಷಕರನ್ನ ಹೊಂದಿದೆ. ಪಿ ಕುಮಾರ್ ಮತ್ತು ಹರಿಕೃಷ್ಣ ಈ ಚಿತ್ರವನ್ನ ನಿರ್ದೇಶನ ಮಾಡಿದ್ದಯ, ಶೈಲಜಾ ನಾಗ್ ಮತ್ತು ಬಿ ಸುರೇಶ್ ನಿರ್ಮಾಣ ಮಾಡಿದ್ದಾರೆ.