twitter
    For Quick Alerts
    ALLOW NOTIFICATIONS  
    For Daily Alerts

    ಬಂದೇಬಿಟ್ಟಿತು 'ಕೋಟಿಗೊಬ್ಬ 3' ಟ್ರೇಲರ್: ಹೇಗಿದೆ ಸುದೀಪ್ ಹೊಸ ಅವತಾರ

    |

    ಸುದೀಪ್ ನಟನೆಯ ಬಹುನಿರೀಕ್ಷಿತ 'ಕೋಟಿಗೊಬ್ಬ 3' ಸಿನಿಮಾದ ಟ್ರೇಲರ್ ಇಂದಷ್ಟೆ ಬಿಡುಗಡೆ ಆಗಿದ್ದು, ಸಿನಿಮಾದ ಕತೆಯ ಬಗ್ಗೆ ಕೆಲವು ಸುಳಿವುಗಳನ್ನು ಟ್ರೇಲರ್ ಬಿಟ್ಟುಕೊಟ್ಟಿದೆ.

    2:42 ನಿಮಿಷದ ಟ್ರೇಲರ್‌ನಲ್ಲಿ ಸುದೀಪ್ ಎಂಟ್ರಿ ಆಗುವುದು ತುಸು ತಡವಾಗಿಯೇ, ಆದರೆ ಸುದೀಪ್‌ರ ಎಂಟ್ರಿ ಬಹಳ 'ಜಾಯ್‌ಫುಲ್' ಆಗಿದೆ. ಹಾಗೆಂದು 'ಕೋಟಿಗೊಬ್ಬ 3' ಹಾಸ್ಯ ಪ್ರಧಾನವಾಗಿರುವ ಸಿನಿಮಾ ಖಂಡಿತ ಅಲ್ಲ. ಇದೊಂದು ಪಕ್ಕಾ ಆಕ್ಷನ್ ಥ್ರಿಲ್ಲರ್. ಸುದೀಪ್‌ರ ಕೆಲವು ಖಡಕ್ ಆಕ್ಷನ್ ದೃಶ್ಯಗಳ ದರ್ಶನ ಟ್ರೇಲರ್‌ನಲ್ಲಿ ಸಿಗುತ್ತದೆ.

    ಸಿನಿಮಾವನ್ನು ಅದ್ಧೂರಿಯಾಗಿಯೇ ನಿರ್ಮಿಸಿದ್ದಾರೆ ನಿರ್ಮಾಪಕ ಸೂರಪ್ಪ ಬಾಬು, ಟ್ರೇಲರ್‌ನಲ್ಲಿಯೇ ಅದಕ್ಕೆ ಕೆಲವು ಸಾಕ್ಷ್ಯಗಳು ಸಿಗುತ್ತವೆ. ದುಬಾರಿ ಸೆಟ್‌ಗಳು, ಕಣ್ ಸೂರೆಗೊಳಿಸುವ ಲೊಕೇಶನ್‌ಗಳು, ಐಶಾರಾಮಿ ಕಾರುಗಳು, ಬಾಲಿವುಡ್ ನಟ-ನಟಿಯರು, ವಿದೇಶಿ ನೆಲದಲ್ಲಿ ನಡೆವ ಕಾರ್ ಚೇಸ್‌ಗಳು, ಸಿನಿಮಾಕ್ಕೆ ದೊಡ್ಡ ಮಟ್ಟದಲ್ಲಿಯೇ ಹಣ ಸುರಿಯಾಗಿದೆ ಎಂಬುದನ್ನು ಸಾರಿ ಹೇಳುತ್ತಿವೆ.

    ಪಾತ್ರಗಳ ಬಗ್ಗೆ ಸುಳಿವು ಬಿಟ್ಟುಕೊಟ್ಟಿದ್ದಾರೆ

    ಪಾತ್ರಗಳ ಬಗ್ಗೆ ಸುಳಿವು ಬಿಟ್ಟುಕೊಟ್ಟಿದ್ದಾರೆ

    ಟ್ರೇಲರ್‌ನಲ್ಲಿ ಸುದೀಪ್ ಮಾತ್ರವೇ ಅಲ್ಲದೆ ಇನ್ನೂ ಹಲವು ಪಾತ್ರಧಾರಿಗಳ ಪರಿಚಯ ದೊರೆಯುತ್ತದೆ. ವಿಲನ್ ನವಾಬ್ ಶಾ, ಅಫ್ತಾದ್ ಶಿವದಾಸನಿ, ರವಿಶಂಕರ್, ತಬಲಾ ನಾಣಿ, ರಂಗಾಯಣ ರಘು ಇನ್ನೂ ಕೆಲವು ನಟರ ದೃಶ್ಯಗಳು ಟ್ರೇಲರ್‌ನಲ್ಲಿವೆ. ಹಲವು ಪಾತ್ರಧಾರಿಗಳ ಪಾತ್ರಗಳ ಬಗ್ಗೆ ಸಣ್ಣ ಸುಳಿವನ್ನು ಟ್ರೇಲರ್‌ನಲ್ಲಿ ಬಿಟ್ಟುಕೊಟ್ಟಿದೆ ಚಿತ್ರತಂಡ. ನವಾಬ್ ಶಾ, ವೈರಸ್ ಪ್ರಯೋಗಿಸಿ ಅಮಾಯಕರನ್ನು ಕೊಲ್ಲುವ ಯತ್ನ ಮಾಡುತ್ತಿದ್ದಾನೆ. ಅಫ್ತಾದ್ ಶಿವದಾಸನಿ ಪೊಲೀಸ್ ಆಗಿದ್ದು ಸುದೀಪ್‌ ಅನ್ನು ಹಿಡಿಯುವ ಪ್ರಯತ್ನದಲ್ಲಿ ನಿರತನಾಗಿದ್ದಾನೆ. ರವಿಶಂಕರ್ ಹಾಸ್ಯ ಪಾತ್ರವೊಂದನ್ನು ನಿರ್ವಹಿಸುತ್ತಿರುವುದು ಟ್ರೇಲರ್‌ನಲ್ಲಿ ಗೊತ್ತಾಗುತ್ತಿದೆ. ಇವುಗಳ ಜೊತೆಗೆ ನಾಯಕಿ ಮಡೋನಾ ಸೆಬಾಸ್ಟಿಯನ್‌ರ ಮೋಹಕ ನಗುವಿನ ಜೊತೆಗೆ ಶ್ರದ್ಧಾ ದಾಸ್‌ರ ಗ್ಲಾಮರಸ್‌ ಮೈಮಾಟದ ಝಲಕ್ ಸಹ ಟ್ರೇಲರ್‌ನಲ್ಲಿದೆ.

    ದ್ವಿಪಾತ್ರದಲ್ಲಿ ನಟ ಸುದೀಪ್?

    ದ್ವಿಪಾತ್ರದಲ್ಲಿ ನಟ ಸುದೀಪ್?

    'ಕೋಟಿಗೊಬ್ಬ 3' ಸಿನಿಮಾದಲ್ಲಿ ಸುದೀಪ್ ದ್ವಿಪಾತ್ರದಲ್ಲಿ ಅಥವಾ ಒಬ್ಬನೇ ಎರಡು ವ್ಯಕ್ತಿಗಳಾಗಿ ಕಾಣಿಸಿಕೊಂಡಿದ್ದಾರೆ ಎಂಬುದು ಟ್ರೇಲರ್‌ನಿಂದ ಖಾತ್ರಿಯಾಗುತ್ತಿದೆ. 'ಕೋಟಿಗೊಬ್ಬ 2' ಸಿನಿಮಾದಲ್ಲಿಯೂ ಇಂಥಹುದೇ ಕತೆ ಇತ್ತು. 'ಕೋಟಿಗೊಬ್ಬ 3' ಸಿನಿಮಾದಲ್ಲಿ ಅಂತರಾಷ್ಟ್ರೀಯ ಪೊಲೀಸರಿಗೆ ಬೇಕಾದ ವಿಲನ್ ಆಗಿ ಹಾಗೂ ಠಪೋರಿ ಯುವಕನಾಗಿ ಎರಡು ಶೇಡ್‌ನಲ್ಲಿ ಸುದೀಪ್ ನಟಿಸಿದ್ದಾರೆ. ಇಬ್ಬರೂ ಒಬ್ಬರೇನಾ ಅಥವಾ ಸುದೀಪ್ ದ್ವಿಪಾತ್ರದಲ್ಲಿ ನಟಿಸಿದ್ದಾರಾ? ಎಂಬುದರ ಜೊತೆಗೆ ಒಟ್ಟಾರೆ ಸಿನಿಮಾದ ಮನರಂಜನೆಯನ್ನು ಆಸ್ವಾದಿಸಲು ಅಕ್ಟೋಬರ್ 14 ರಂದು ಚಿತ್ರಮಂದಿರಗಳಿಗೆ ತೆರಳಬೇಕಾಗುತ್ತದೆ.

    ಸುದೀಪ್ ಹೇಳಿರುವ ಡೈಲಾಗ್ ಗಮನ ಸೆಳೆಯುತ್ತಿದೆ

    ಸುದೀಪ್ ಹೇಳಿರುವ ಡೈಲಾಗ್ ಗಮನ ಸೆಳೆಯುತ್ತಿದೆ

    ಟ್ರೇಲರ್‌ನಲ್ಲಿ ಸುದೀಪ್ ಹೇಳುವ ಡೈಲಾಗ್ ಒಂದು ಗಮನ ಸೆಳೆಯುತ್ತಿದೆ. ''ಚಿನ್ನಾ ಲೈಫ್ ಅಲ್ಲಿ ಎರಡು ಪಾಠ ಕಲಿತಿದ್ದೀನಿ. ಒಂದು, ಓವರ್‌ ಆಗಿ (ಅತಿಯಾಗಿ) ಮಾತನಾಡಬಾರದು. ಎರಡು, ಓವರ್‌ ಆಗಿ ಮಾತನಾಡೋದನ್ನ ಕೇಳಿಸಿಕೊಳ್ಳಲೂ ಬಾರದು. ಹಾಗಾಗಿ ನೀನು ಮಾತನಾಡುತ್ತಲೇ ಇರು, ನಾನು ತುಟಿ ಹೊಲೆದುಕೊಂಡಿರುತ್ತೀನಿ''. ಸಿನಿಮಾದ ಆಚೆಯ ವ್ಯಕ್ತಿಗಳನ್ನು ತಲುಪಲೆಂದೇ ಸುದೀಪ್ ಈ ಡೈಲಾಗ್ ಹೇಳಿದ್ದಾರೆಯೇ ಎಂಬ ಅನುಮಾನ ಮೂಡುತ್ತಿದೆ. ನಟರು ತಮ್ಮ ವಿರೋಧಿಗಳಿಗೆ ಸಿನಿಮಾ ಡೈಲಾಗ್ ಮೂಲಕ ಟಾಂಗ್ ಕೊಡುವುದು ಗುಟ್ಟಾಗಿ ಉಳಿದಿಲ್ಲ. ಈ ಹಿಂದೆಯೂ ಕನ್ನಡದ ಹಲವು ಸಿನಿಮಾಗಳಲ್ಲಿ ಈ ರೀತಿ ಡೈಲಾಗ್ ವಾರ್‌ಗಳು ನಡೆದಿವೆ.

    ಅಕ್ಟೋಬರ್ 14ರಂದು ಸಿನಿಮಾ ಬಿಡುಗಡೆ

    ಅಕ್ಟೋಬರ್ 14ರಂದು ಸಿನಿಮಾ ಬಿಡುಗಡೆ

    'ಕೋಟಿಗೊಬ್ಬ 3' ಸಿನಿಮಾವನ್ನು ಶಿವಕಾರ್ತಿಕ್ ನಿರ್ದೇಶನ ಮಾಡಿದ್ದು, ಸೂರಪ್ಪ ಬಾಬು ನಿರ್ಮಾಣ ಮಾಡಿದ್ದಾರೆ. ಸಂಗೀತ ನೀಡಿರುವುದು ಅರ್ಜುನ್ ಜನ್ಯ. ಸಿನಿಮಾವು ಅಕ್ಟೋಬರ್ 14ರಂದು ತೆರೆಗೆ ಬರುತ್ತಿದೆ. ಅದೇ ದಿನ 'ಸಲಗ' ಸಿನಿಮಾ ಸಹ ಬಿಡುಗಡೆ ಆಗುತ್ತಿದೆ.

    English summary
    Sudeep starer 'Kotigobba 3' movie trailer released. Movie will hit theaters on October 14. Movie directed by Shivakarthik.
    Friday, October 8, 2021, 9:51
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X