»   » ಕಿಚ್ಚನ 'ಹೆಬ್ಬುಲಿ' ಮೊದಲ ದಿನ ಗಳಿಸಿದ್ದೆಷ್ಟು?

ಕಿಚ್ಚನ 'ಹೆಬ್ಬುಲಿ' ಮೊದಲ ದಿನ ಗಳಿಸಿದ್ದೆಷ್ಟು?

Posted By:
Subscribe to Filmibeat Kannada

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ 'ಹೆಬ್ಬುಲಿ' ಕಳೆದ ಗುರುವಾರವಷ್ಟೇ ರಾಜ್ಯಾದ್ಯಂತ ಬಿಡುಗಡೆಯಾಗಿತ್ತು. ನಿರೀಕ್ಷೆಯಂತೆ ಮೊದಲ ದಿನ ಭರ್ಜರಿ ಒಪನಿಂಗ್ ಕೂಡ ಮಾಡಿತ್ತು. ಹೀಗಾಗಿ, ಬಾಕ್ಸ್ ಆಫೀಸ್ ನಲ್ಲಿ 'ಹೆಬ್ಬುಲಿ' ಮೊದಲ ದಿನ ಎಷ್ಟು ಕಲೆಕ್ಷನ್ ಮಾಡಿದೆ ಎಂಬುದು ಮಾತ್ರ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ.[ಕನ್ನಡದಲ್ಲಿ ಮೊದಲು 100 ಕೋಟಿ ಗಳಿಸುವ ಸಿನಿಮಾ ಯಾವುದು?]

ಸದ್ಯ ಸ್ಯಾಂಡಲ್ ವುಡ್ ನಲ್ಲಿ 'ಹೆಬ್ಬುಲಿ' ಕ್ರೇಜ್ ನೋಡಿದ್ರೆ, ಖಂಡಿತಾ ಈ ಚಿತ್ರ, ಈ ಹಿಂದಿನ ಎಲ್ಲ ಬಾಕ್ಸ್ ಆಫೀಸ್ ದಾಖಲೆಗಳನ್ನ ಉಡೀಸ್ ಮಾಡುತ್ತೆ ಎಂಬ ಟಾಕ್ ಇತ್ತು. ಬಹುಶಃ ಈ ಟಾಕ್ ಈಗ ನಿಜವಾಗಿದೆ ಅನಿಸುತ್ತಿದೆ. ಹೌದು, ಗಾಂಧಿನಗರ ಪಂಡಿತರ ಲೆಕ್ಕಾಚಾರದ ಪ್ರಕಾರ 'ಹೆಬ್ಬುಲಿ' ಕನ್ನಡದಲ್ಲಿ ಹೊಸ ಇತಿಹಾಸ ಸೃಷ್ಟಿಸಿದೆಯಂತೆ.

'ಹೆಬ್ಬುಲಿ'ನ ಮೊದಲ ದಿನ ನೋಡಿದವರೆಷ್ಟು?

ದಾಖಲೆಗಳ ಪ್ರಕಾರ, 'ಹೆಬ್ಬುಲಿ' ಚಿತ್ರವನ್ನ ಮೊದಲ ದಿನ ಸುಮಾರು 12.20 ಲಕ್ಷ ಜನರು ವೀಕ್ಷಿಸಿರಬಹುದು ಎಂದು ಅಂದಾಜಿಸಲಾಗಿದೆ. ಯಾಕಂದ್ರೆ, ಮೊದಲ ದಿನ ಕರ್ನಾಟಕ ರಾಜ್ಯದಲ್ಲಿ ಸುಮಾರು 12.20 ಟಿಕೆಟ್ ಗಳು ಸೋಲ್ಡ್ ಔಟ್ ಆಗಿತ್ತು ಎನ್ನಲಾಗಿದೆ.['ಹೆಬ್ಬುಲಿ' ವಿಮರ್ಶೆ: ಗನ್ ಹಿಡಿದು ಘರ್ಜಿಸಿದ ಆರಡಿ ಟೈಗರ್ ಸೂಪರ್ ಗುರು]

ಟಿಕೆಟ್ ಬೆಲೆ ಎಷ್ಟು?

'ಹೆಬ್ಬುಲಿ' ಚಿತ್ರದ ಬಿಡುಗಡೆಯ ದಿನ ಸಾಮಾನ್ಯ ಚಿತ್ರಮಂದಿರಗಳಲ್ಲಿ 50 ರಿಂದ 100 ರೂಪಾಯಿ ಟಿಕೆಟ್ ದರ ಇದ್ದರೇ, ಮಲ್ಟಿಫ್ಲೆಕ್ಸ್ ಗಳಲ್ಲಿ 850 ರೂಪಾಯಿವರೆಗೂ ಟಿಕೆಟ್ ಬೆಲೆ ನಿಗದಿಯಾಗಿತ್ತು.[ಟ್ವಿಟರ್ ವಿಮರ್ಶೆ: ಕಮಾಂಡೋ ಕಿಚ್ಚನ ಅಬ್ಬರಕ್ಕೆ ಶರಣಾದ ಪ್ರೇಕ್ಷಕರು]

10 ಕೋಟಿ ಅಂದಾಜು

12.20 ಟಿಕೆಟ್ ಗಳು ಸೋಲ್ಡ್ ಔಟ್ ಆಗಿದ್ದು, ಅದರ ಟಿಕೆಟ್ ಬೆಲೆ ಆಧರಿಸಿ ನೋಡುವುದಾದರೇ, 'ಹೆಬ್ಬುಲಿ' ಮೊದಲ ದಿನ ಅಂದಾಜು 10 ಕೋಟಿಯವರೆಗೂ ಬಿಸ್ ನೆಸ್ ಮಾಡಿದೆ ಎಂಬ ಲೆಕ್ಕಾಚಾರಗಳು ಗಾಂಧಿನಗರದಲ್ಲಿ ನಡೆಯುತ್ತಿದೆ.

ದಾಖಲೆ ಚಿತ್ರಮಂದಿರದಲ್ಲಿ ಬಿಡುಗಡೆ

ಇದೇ ಮೊದಲ ಬಾರಿಗೆ ಕನ್ನಡ ಚಿತ್ರವೊಂದು ಕರ್ನಾಟಕದಲ್ಲಿ ಸುಮಾರು 450 ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ತೆರೆಕಂಡಿದ್ದು ಕೂಡ ದೊಡ್ಡ ಯಶಸ್ಸಾಗಿತ್ತು.

ಕನ್ನಡದ ದಾಖಲೆಗಳು ಉಡೀಸ್

ಇದುವರೆಗೂ ಕನ್ನಡದಲ್ಲಿ ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಮಾಸ್ಟರ್ ಪೀಸ್' ಚಿತ್ರ, ಮೊದಲ ದಿನ ಅತಿ ಹೆಚ್ಚು ಗಳಿಕೆ ಮಾಡಿದೆ ಎನ್ನಲಾಗಿದೆ. ಆದ್ರೆ, 'ಹೆಬ್ಬುಲಿ'ಯ ಎಂಟ್ರಿಯಿಂದ ಈ ದಾಖಲೆ ಬ್ರೇಕ್ ಆಗಿರುವ ನಿರೀಕ್ಷೆ ಕೂಡ ಈಗ ಚಂದನವನದಲ್ಲಿ ಹುಟ್ಟಿಕೊಂಡಿದೆ.

English summary
In reports about the first day collections of Hebbuli pouring in, it is clear that the film has set a benchmark very high apart from breaking all previous records in Kannada. The collection figures are estimated between Rs 8 crore to Rs 10 crore from the day of release on Thursday

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada