For Quick Alerts
  ALLOW NOTIFICATIONS  
  For Daily Alerts

  'ಕೋಟಿಗೊಬ್ಬ 2' ಚಿತ್ರದಿಂದ ಮತ್ತೊಂದು ದಾಖಲೆ ಸುದ್ದಿ !

  By Suneetha
  |

  ನಟ ಕಿಚ್ಚ ಸುದೀಪ್ ಅವರು 'ಕೋಟಿಗೊಬ್ಬ 2' ಚಿತ್ರದ ಮೂಲಕ, ಅಭಿನಯ ಚಕ್ರವರ್ತಿ ಅಂತ ಮತ್ತೊಮ್ಮೆ ಪ್ರೂವ್ ಮಾಡಿದ್ರು ಅನ್ನೋದು ಎಲ್ಲರಿಗೂ ಗೊತ್ತಿರೋ ವಿಚಾರ.

  ತೆರೆಯ ಮೇಲೆ ಅಕ್ಷರಶಃ ವಿಲನ್ ಕಮ್ ಹೀರೋ ಆಗಿ ಮಿಂಚಿದ ಸುದೀಪ್ ಅವರ ಅಭಿನಯ ಚಾತುರ್ಯಕ್ಕೆ, ಎಲ್ಲರ ಬಾಯಲ್ಲಿ 'ವಾವ್..' ಅನ್ನೋ ಉದ್ಘಾರ ಬಂದಿತ್ತು.[ವಿಮರ್ಶೆ: ಆ 'ಕೋಟಿಗೊಬ್ಬ'ನಂತಲ್ಲ ಈ 'ಕೋಟಿಗೊಬ್ಬ'.!]

  ಕೊನೆ ತನಕ ಪ್ರೇಕ್ಷಕರ ಕುತೂಹಲವನ್ನು ಉಳಿಸಿಕೊಂಡಿದ್ದ 'ಕೋಟಿಗೊಬ್ಬ 2', ಎಲ್ಲಾ ಕಡೆ ಯಶಸ್ವಿ ಪ್ರದರ್ಶನ ಕಾಣುತ್ತಾ, ಯಶಸ್ವಿ 6ನೇ ವಾರದಲ್ಲಿ ಮುನ್ನಡೆಯುತ್ತಿದೆ. ಇನ್ನೇನು ಒಂದು ವಾರಕ್ಕೆ 50 ದಿನ ಪೂರೈಸಲಿದೆ.

  ಕಿಚ್ಚ ಸುದೀಪ್ ಅವರ ಸಿನಿ ಜರ್ನಿಯಲ್ಲಿ 'ಕೋಟಿಗೊಬ್ಬ 2' ಹೊಸ ಮೈಲಿಗಲ್ಲು ಸ್ಥಾಪಿಸಿದ್ದು, ಸುದೀಪ್ ಅವರ ಮಾರ್ಕೆಟ್ ವ್ಯಾಲ್ಯೂವನ್ನು ಈ ಸಿನಿಮಾ ಮತ್ತಷ್ಟು ಹೆಚ್ಚಿಸಿದೆ. ಬಾಕ್ಸಾಫೀಸ್ ಕಲೆಕ್ಷನ್ ವಿಚಾರದಲ್ಲೂ 'ಕೋಟಿಗೊಬ್ಬ 2' ಮುಂದಿದ್ದು, ಅಭಿಮಾನಿಗಳು-ಸಿನಿ ಪ್ರಿಯರು ಮುಗಿ ಬಿದ್ದು ಮತ್ತೆ-ಮತ್ತೆ ಸಿನಿಮಾ ನೋಡುತ್ತಿದ್ದಾರೆ.

  ಇದೇ ಖುಷಿಯಲ್ಲಿ ಅಭಿಮಾನಿಗಳಿಗೆ ಈ ಚಿತ್ರತಂಡದಿಂದ ಇನ್ನೊಂದು ಸಿಹಿ ಸುದ್ದಿ ಹೊರಬಿದ್ದಿದೆ. ಅದೇನೆಂಬುದನ್ನು ನೋಡಲು ಮುಂದೆ ಓದಿ....

  ಟಿವಿ ಹಕ್ಕು ಸೋಲ್ಡ್ ಔಟ್

  ಟಿವಿ ಹಕ್ಕು ಸೋಲ್ಡ್ ಔಟ್

  'ರನ್ನ', 'ಮಾಸ್ಟರ್ ಪೀಸ್' ಚಿತ್ರಗಳ ಕಲೆಕ್ಷನ್ ಅನ್ನು ಉಡೀಸ್ ಮಾಡಿ ಮುನ್ನುಗ್ಗುತ್ತಿರುವ 'ಕೋಟಿಗೊಬ್ಬ 2', ಎಲ್ಲೆಡೆ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಚಿತ್ರ ಎಲ್ಲಾ ಚಿತ್ರಮಂದಿರಗಳಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿರುವಾಗಲೇ ಚಿತ್ರದ ಟಿವಿ ಹಕ್ಕು ಭರ್ಜರಿ ಮೊತ್ತಕ್ಕೆ ಮಾರಾಟಗೊಂಡಿದೆ.[ಕನ್ನಡ ಚಿತ್ರರಂಗದ ಇತಿಹಾಸದಲ್ಲೇ 'ಕೋಟಿ ಕಿಚ್ಚ'ನ ಹೊಸ ದಾಖಲೆ]

  ಎಷ್ಟಕ್ಕೆ ಸೇಲ್ ಆಯ್ತು?

  ಎಷ್ಟಕ್ಕೆ ಸೇಲ್ ಆಯ್ತು?

  ಅಷ್ಟೋ-ಇಷ್ಟೋ ಮೊತ್ತಕಲ್ಲ, ಬರೋಬ್ಬರಿ 4 ಕೋಟಿ ರೂಪಾಯಿಗೆ ಸುದೀಪ್-ನಿತ್ಯಾ ಮೆನನ್ ಅಭಿನಯದ 'ಕೋಟಿಗೊಬ್ಬ 2' ಸ್ಯಾಟಲೈಟ್ ಹಕ್ಕು ಮಾರಾಟಗೊಂಡಿದೆ. ಭರ್ಜರಿ ಮೊತ್ತಕ್ಕೆ ಸಿನಿಮಾ ಸೇಲ್ ಆಗಿದ್ದಕ್ಕೆ ನಿರ್ದೇಶಕ ಕೆ.ಎಸ್ ರವಿಕುಮಾರ್ ಅವರು ಫುಲ್ ಖುಷ್ ಆಗಿ ಬಿಟ್ಟಿದ್ದಾರೆ.[ವಿಮರ್ಶಕರ ಮನ ಲೂಟಿ ಮಾಡಿದನಾ 'ಈ' ಕೋಟಿಗೊಬ್ಬ.?]

  ಯಾವ ಟಿವಿಗೆ 'ಕೋಟಿಗೊಬ್ಬ' ಸ್ವಂತ

  ಯಾವ ಟಿವಿಗೆ 'ಕೋಟಿಗೊಬ್ಬ' ಸ್ವಂತ

  ವೈವಿಧ್ಯಮಯ ಧಾರಾವಾಹಿ, ವಿಭಿನ್ನ ರಿಯಾಲಿಟಿ ಶೋ ಹಾಗೂ ವೀಕೆಂಡ್ ನಲ್ಲಿ ಹೊಚ್ಚ-ಹೊಸ ಸಿನಿಮಾಗಳ ಪ್ರೀಮಿಯರ್ ಶೋ ಮೂಲಕ ವೀಕ್ಷಕರನ್ನು ಮನರಂಜಿಸುತ್ತಾ ಬರುತ್ತಿರುವ, ಖ್ಯಾತ ಚಾನಲ್ 'ಉದಯ ಟಿವಿ'ಯವರು 'ಕೋಟಿಗೊಬ್ಬ 2' ಚಿತ್ರದ ಸ್ಯಾಟಲೈಟ್ ಹಕ್ಕು ಖರೀದಿ ಮಾಡಿದ್ದಾರೆ.[ಕಿಚ್ಚ ಸುದೀಪ್ ಸಿನಿ ಇತಿಹಾಸದಲ್ಲೇ ಇದು 'ಮೊಟ್ಟ ಮೊದಲ ಬಾರಿಗೆ'!]

  ಹಿಂದಿ ಹಕ್ಕು ಕೂಡ ಸೇಲ್ ಆಯ್ತು

  ಹಿಂದಿ ಹಕ್ಕು ಕೂಡ ಸೇಲ್ ಆಯ್ತು

  ಬರೀ ಸ್ಯಾಟಲೈಟ್ ಹಕ್ಕು ಮಾತ್ರವಲ್ಲದೇ, ಚಿತ್ರದ ಹಿಂದಿ ಹಕ್ಕು ಕೂಡ ಸುಮಾರು 1.30 ಕೋಟಿ ರೂಪಾಯಿಗೆ ಸೇಲ್ ಆಗಿದೆ. ಅಂತೂ-ಇಂತೂ ಚಿತ್ರತಂಡಕ್ಕೆ ಡಬಲ್ ಧಮಾಕ ಆಗಿದೆ.['ಕೋಟಿಗೊಬ್ಬ 2' ಚಿತ್ರದಿಂದ ಅಭಿಮಾನಿಗಳಿಗೆ ಬಿಸಿಬಿಸಿ ಸುದ್ದಿ]

  ಮಲ್ಟಿಪ್ಲೆಕ್ಸ್ ಗಳಲ್ಲಿ 'ಕೋಟಿಗೊಬ್ಬ'ನ ಹವಾ ಜೋರೈತಿ

  ಮಲ್ಟಿಪ್ಲೆಕ್ಸ್ ಗಳಲ್ಲಿ 'ಕೋಟಿಗೊಬ್ಬ'ನ ಹವಾ ಜೋರೈತಿ

  ಮುಂದಿನ ವಾರ, 'ಕೋಟಿಗೊಬ್ಬ 2' ಸುಮಾರು 100 ಚಿತ್ರಮಂದಿರಗಳಲ್ಲಿ 50 ದಿನ ಪೂರೈಲಿದ್ದು, ಈ ಸಿನಿಮಾ ಹೆಚ್ಚಾಗಿ ಫ್ಯಾಮಿಲಿ ಪ್ರೇಕ್ಷಕರನ್ನು ಆಕರ್ಷಿಸುತ್ತಿದೆ. ಜೊತೆಗೆ ಹೆಚ್ಚಾಗಿ ಮಲ್ಟಿಪ್ಲೆಕ್ಸ್ ಗಳಲ್ಲಿ 'ಕೋಟಿಗೊಬ್ಬ'ನ ಹವಾ ತುಂಬಾ ಜೋರಾಗಿದೆ.

  English summary
  Kannada Movie 'Kotigobba 2' TV rights was sold out to 4 crore to Udaya TV. Kannada Actor Sudeep, Actress Nithya menen in the lead role. The movie is directed by KS Ravikumar.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X