»   » ಕೋಟಿಗೊಬ್ಬನಿಗೆ ಅದ್ಧೂರಿ ಸ್ವಾಗತ

ಕೋಟಿಗೊಬ್ಬನಿಗೆ ಅದ್ಧೂರಿ ಸ್ವಾಗತ

Written By:
Subscribe to Filmibeat Kannada

ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ3 ಸಿನಿಮಾ ನಾಳೆ ಸೆಟ್ಟೇರುತ್ತಿದೆ. ಸಿನಿಮಾ ಮಹೂರ್ತಕ್ಕೂ ಮುನ್ನವೇ ಅಭಿಮಾನಿಗಳಿಂದ ಹಾಗೂ ಸಿನಿಮಾರಂಗದಿಂದ ಕೋಟಿಗೊಬ್ಬನಿಗೆ ಅದ್ಧೂರಿಯಾದ ಸ್ವಾಗತ ಸಿಗುತ್ತಿದೆ. ಅಭಿಮಾನಿಗಳು ಇಂದಿನಿಂದಲೇ ಚಿತ್ರದ ಪೋಸ್ಡರ್ ಗಳನ್ನ ಡಿಸೈನ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡುತ್ತಿದ್ದಾರೆ.

ಕೋಟಿಗೊಬ್ಬ3 ಚಿತ್ರದ ಆಡಿಯೋ ದಾಖಲೆಯ ಮೊತ್ತಕ್ಕೆ ಆನಂದ್ ಆಡಿಯೋ ಸಂಸ್ಥೆ ಖರೀದಿ ಮಾಡಿದೆ, ಅರ್ಜುನ್ ಜನ್ಯ ಸಂಗೀತ ನಿರ್ದೇಶನ ಮಾಡುತ್ತಿರುವ ಸಿನಿಮಾಗೆ ಸೂರಪ್ಪ ಬಾಬು ಬಂಡವಾಳ ಹಾಕುತ್ತಿದ್ದಾರೆ.

sudeep starrer Kotigobba 3 film mahurtha will be held tomorrow

ಸಾಕಷ್ಟು ದಿನಗಳ ನಂತರ ಕಿಚ್ಚ ಸುದೀಪ್ ಸಿನಿಮಾ ಕಥೆಯನ್ನ ಬರೆಯುತ್ತಿದ್ದು ಅಭಿಮಾನಿಗಳು ಸುದೀಪ್ ಸಿನಿಮಾ ಕಥೆಯನ್ನ ತೆರೆ ಮೇಲೆ ನೋಡಲು ಕಾತುರರಾಗಿದ್ದಾರೆ. ಶಿವ ಕಾರ್ತಿಕ್ ಕೋಟಿಗೊಬ್ಬ3 ಚಿತ್ರವನ್ನ ನಿರ್ದೇಶನ ಮಾಡುತ್ತಿದ್ದಾರೆ.

ಸಿನಿಮಾದ ಬಗ್ಗೆ ಹೆಚ್ಚಿನ ಸುಳಿವು ಬಿಟ್ಟುಕೊಡದ ನಿರ್ಮಾಪಕರು ಕ್ರಿಸ್ ಮಸ್ ಹಬ್ಬಕ್ಕೆ ಕೋಟಿಗೊಬ್ಬ3 ತೆರೆ ಮೇಲೆ ರಾರಾಜಿಸಲಿದ್ದಾನೆ ಎನ್ನುವುದನ್ನ ತಿಳಿಸಿದ್ದಾರೆ. ಒಟ್ಟಾರೆ ಸೆಟ್ಟೇರುವ ಮುಂಚೆಯೇ ಕನ್ನಡದ ಸಿನಿಮಾ ಸಾಕಷ್ಟು ರೀತಿಯಲ್ಲಿ ಬೇಡಿಕೆ ಹಾಗೂ ಪ್ರಚಾರವನ್ನ ಪಡೆದುಕೊಳ್ಳುತ್ತಿರುವುದು ಖುಷಿಯ ಸಂಗತಿ

English summary
Kannada actor sudeep starrer Kotigobba 3 film mahurtha will be held tomorrow (March 2)Shiva Karthik is directing Kotigobba 3 film, Surappababu is producing cinema.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada