For Quick Alerts
  ALLOW NOTIFICATIONS  
  For Daily Alerts

  ವಿದೇಶಕ್ಕೆ ಹಾರಲು ಸಜ್ಜಾದ ಸುದೀಪ್ ಅಂಡ್ ಟೀಂ

  By Pavithra
  |
  ಭಾರತಕ್ಕೆ ಬೈ ಹೇಳುತ್ತಿದ್ದಾರೆ ಅಭಿನಯ ಚಕ್ರವರ್ತಿ | Filmibeat Kannada

  ಕಿಚ್ಚ ಸುದೀಪ್ ಪ್ರತಿ ನಿತ್ಯ ತಮ್ಮ ಬಗ್ಗೆ ಸಿನಿಮಾ ಬಗ್ಗೆ ಹೊಸ ಹೊಸ ವಿಚಾರಗಳನ್ನು ತಿಳಿಸುತ್ತಾ ಬರುತ್ತಲೇ ಇದ್ದಾರೆ. ಸದ್ಯ ಸುದೀಪ್ 'ಅಂಬಿ ನಿಂಗ್ ವಯಸ್ಸಾಯ್ತೋ' ಚಿತ್ರದ ಶೂಟಿಂಗ್ ಮುಗಿಸಿ 'ಪೈಲ್ವಾನ್' ಸಿನಿಮಾದ ಮೊದಲ ಶೆಡ್ಯೂಲ್ ಕಂಪ್ಲೀಟ್ ಮಾಡಿದ್ದಾರೆ. ಇವುಗಳ ಮಧ್ಯೆ ಬಿಡುವಿದ್ದಾಗ ಸಿನಿಮಾಗಾಗಿ ತಯಾರಿ ಮಾಡಿಕೊಳ್ಳುತ್ತಿದ್ದಾರೆ.

  ಹೊಸ ವಿಚಾರ ಏನಪ್ಪಾ ಅಂದರೆ ಸುದೀಪ್ ಸತ್ಯ ಹಾಗೂ ಶಿವ ನಾಗಲು ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಹೌದು ಈಗ ಸುದೀಪ್ ಅವರ 'ಕೋಟಿಗೊಬ್ಬ3' ಸಿನಿಮಾದ ಚಿತ್ರೀಕರಣಕ್ಕೆ ಸಿದ್ದತೆಗಳು ನಡೆದಿವೆ. ಇದೇ ತಿಂಗಳು ಅಂದರೆ ಜೂನ್ 17ರಿಂದ 'ಕೋಟಿಗೊಬ್ಬ 3' ಶೂಟಿಂಗ್ ಆರಂಭವಾಗುತ್ತಿದೆ ಎಂದು ಸುದೀಪ್ ತಮ್ಮ ಅಭಿಮಾನಿಗಳಿಗೆ ತಿಳಿಸಿದ್ದಾರೆ.

  ಮೂರು ವರ್ಷಗಳ ನಂತರ ಇದ್ದಕ್ಕಿದ್ದ ಹಾಗೆ ಟ್ರೆಂಡ್ ಆದ 'ರನ್ನ'ಮೂರು ವರ್ಷಗಳ ನಂತರ ಇದ್ದಕ್ಕಿದ್ದ ಹಾಗೆ ಟ್ರೆಂಡ್ ಆದ 'ರನ್ನ'

  ಸರ್ಬಿಯಾದ ಬೆಲ್ಗ್ರೇಡ್ ನಲ್ಲಿ ಸುಮಾರು 40 ದಿನಗಳ ಕಾಲ 'ಕೋಟಿಗೊಬ್ಬ 3' ಚಿತ್ರದ ಶೂಟಿಂಗ್ ನಡೆಯಲಿದೆ. ಕಿಚ್ಚನ ಜೋಡಿಯಾಗಿ ಮಾಲಿವುಡ್ ಮತ್ತು ಕಾಲಿವುಡ್ ಚಿತ್ರದಲ್ಲಿ ನಟಿಸಿರುವ ಮಡೋನ ಸೆಬಾಸ್ಟಿಯನ್ ಕಾಣಿಸಿಕೊಳ್ಳಲಿದ್ದಾರೆ. ಇದು ಮಡೋನ ಅವರ ಮೊದಲ ಕನ್ನಡ ಸಿನಿಮಾ ಆಗಿದೆ.

  ಕಾರ್ತಿಕ್ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದು ಸೂರಪ್ಪ ಬಾಬು ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ನಾಳೆ ಚಿತ್ರತಂಡ ಯೂರೋಪ್ ಗೆ ಶೂಟಿಂಗ್ ಗಾಗಿ ಹಾರಲಿದೆ.

  English summary
  Kannada actor Sudeep starrer Kotigobba 3 film shooting starting from June 17.Madonna Sebastian plays heroine with Sudeep.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X