For Quick Alerts
  ALLOW NOTIFICATIONS  
  For Daily Alerts

  'ಕತ್ತಲಲ್ಲಿ ಕಳ್ಳನಂತೆ ಬೇಟೆಯಾಡುವ ಬಿಲ್ಲನಂತೆ' ಬಂದ ವಿಕ್ರಾಂತ್ ರೋಣ ಕಿಚ್ಚ

  |

  ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ 'ಫ್ಯಾಂಟಮ್' ಲೋಕದ ಮತ್ತೊಂದು ವಿಡಿಯೋವನ್ನು ಹಂಚಿಕೊಂಡಿದ್ದಾರೆ. 'ಗುಮ್ಮ ಬಂದ ಗುಮ್ಮ ಬಂದ' ಎನ್ನುತ ಎದೆಯಲ್ಲಿ ನಡುಕ ಹುಟ್ಟಿಸುವ ವಿಡಿಯೋವನ್ನು ಶೇರ್ ಮಾಡಿದ್ದ ಕಿಚ್ಚ, ಈಗ ಫ್ಯಾಂಟಮ್ ಲೋಕದ ಎರಡನೇ ಅದ್ಭುತ ವಿಡಿಯೋ ತುಣುಕನ್ನು ಹಂಚಿಕೊಂಡು ಅಭಿಮಾನಿಗಳ ಹಾರ್ಟ್ ಬೀಟ್ ಹೆಚ್ಚಿಸಿದ್ದಾರೆ.

  French Biriyani Movie Review | Danish Sait | PuneethRajkumar | Filmibeat Kannada

  ಫ್ಯಾಂಟಮ್ ಸಿನಿಮಾ ಹೈದರಾಬಾದ್ ನಲ್ಲಿ ಚಿತ್ರೀಕರಣ ಮಾಡುತ್ತಿದೆ. ಕೊರೊನಾ ಆತಂಕದ ನಡುವೆಯೂ ಕಿಚ್ಚ ಅಂಡ ಟೀಂ ಹೈದರಾಬಾದ್ ಗೆ ತೆರಳಿ ಚಿತ್ರೀಕರಣದಲ್ಲಿ ನಿರತವಾಗಿದೆ. ಕೋಟಿಗಟ್ಟಲೆ ವೆಚ್ಚದಲ್ಲಿ ನಿರ್ಮಾಣವಾದ ಅದ್ದೂರಿ ಕಾಡಿನ ಸೆಟ್ ನಲ್ಲಿ ಚಿತ್ರೀಕರಣ ಜೋರಾಗಿ ನಡೆಯುತ್ತಿದೆ. ಆದರೆ ಪ್ರಾರಂಭದಲ್ಲಿಯೇ ಗುಮ್ಮನ ಕಾಟ ಎದುರಾಗಿತ್ತು. ಆದರೆ ಇದೀಗ ಕಿಚ್ಚ ಕತ್ತಲೆ ಕಾಡಿನಲ್ಲಿ ಯಾರನ್ನೊ ಹುಡುತ್ತಿದ್ದಾರೆ. ಮುಂದೆ ಓದಿ...

  ಶೂಟಿಂಗ್‌ಗೆ ಹೋದ ಸುದೀಪ್‌ಗೆ ಎದುರಾಗಿ ಬಂದ ಗುಮ್ಮ ಗುಮ್ಮ...!ಶೂಟಿಂಗ್‌ಗೆ ಹೋದ ಸುದೀಪ್‌ಗೆ ಎದುರಾಗಿ ಬಂದ ಗುಮ್ಮ ಗುಮ್ಮ...!

  ಕತ್ತಲೆ ಕಾಡಿನಲ್ಲಿ ಕಿಚ್ಚನ ಶೋಧ

  ಕತ್ತಲೆ ಕಾಡಿನಲ್ಲಿ ಕಿಚ್ಚನ ಶೋಧ

  ಕತ್ತಲೆ ತುಂಬಿದ ದಟ್ಟವಾದ ಕಾಡಿಗೆ ಬೈಕ್ ನಲ್ಲಿ ಎಂಟ್ರಿ ಕೊಡುವ ಕಿಚ್ಚ ಸುದೀಪ್ ಬೈಕ್ ನಿಲ್ಲಿಸಿ ಯಾರನ್ನೊ ಹುಡುಕುತ್ತಿದ್ದಾರೆ. ಕೈಯಲ್ಲಿ ಟಾರ್ಚ್ ಹಿಡಿದು ಹುಡುಕುತ್ತಿರ ಈ ವಿಡಿಯೋ ಅಭಿಮಾನಿಗಳ ಹಾರ್ಟ್ ಬೀಟ್ ಹೆಚ್ಚಿಸುತ್ತಿದೆ. ಬ್ಯಾಗ್ರೌಂಡ್ ವಾಯ್ಸ್ ನೋಡುಗರಲ್ಲಿ ಮತ್ತಷ್ಟು ಭಯ ಹುಟ್ಟಿಸುತ್ತಿದೆ.

  'ಕತ್ತಲಲ್ಲಿ ಕಳ್ಳನಂತೆ ಬೇಟೆಯಾಡುವ ಬಿಲ್ಲನಂತೆ....'

  "ರಾತ್ರಿ ಕುದುರೆ ಬೆನ್ನಾ ಏರಿ, ಬೀಸೋ ಗಾಳಿ ಜೊತೆಗೆ ಸೇರಿ, ಕತ್ತಲಲ್ಲಿ ಕಳ್ಳನಂತೆ ಬೇಟೆಯಾಡುವ ಬಿಲ್ಲನಂತೆ" ಎನ್ನುವ ಕುತೂಹಲಕಾರಿಯಾದ ಸಾಲುಗಳು ಫ್ಯಾಂಟಮ್ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿವೆ. ಈ ದೃಶ್ಯ ನೋಡಿ ಅಭಿಮಾನಿಗಳ ಸಖತ್ ಥ್ರಿಲ್ ಆಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತಪಡಿಸಿ ಕಾಮೆಂಟ್ ಮಾಡುತ್ತಿದ್ದಾರೆ.

  ಇದು ಕೇವಲ ರಾ ಫೂಟೇಜ್ ಅಷ್ಟೆ

  ಇದು ಕೇವಲ ರಾ ಫೂಟೇಜ್ ಅಷ್ಟೆ

  "ಇದು ಕೇವಲ ರಾ ಫೂಟೇಜ್ ಅಷ್ಟೆ. ನನ್ನ ಸ್ನೇಹಿತರಿಗಾಗಿ" ಎಂದು ಬರೆದುಕೊಂಡಿದ್ದಾರೆ. ಈ ಮೊದಲು ಬಹುದಿನಗಳ ನಂತರ ಚಿತ್ರೀಕರಣ ಪ್ರಾರಂಭಿಸಿದ ಖುಷಿಯಲ್ಲಿ ವಿಡಿಯೋವನ್ನು ಹಂಚಿಕೊಂಡಿದ್ದರು. ಈಗ ಫ್ಯಾಂಟಮ್ ಲೋಕದ ಮತ್ತೊಂದು ಝಲಕ್ ಅನ್ನು ಅಭಿಮಾನಿಗಳಿಗೆ ತೋರಿಸಿದ್ದಾರೆ. ಈ ವಿಡಿಯೋ ನೋಡಿದವರಿಗೆ ಫ್ಯಾಂಟಮ್ ಒಂದು ರೋಮಾಂಚನಕಾರಿ ಸಿನಿಮಾ ಆಗಲಿದೆ ಎಂಬ ಅನುಭವ ದೊರೆತಿದೆ.

  ಬಿಗ್‌ಬಾಸ್ ರಿಯಾಲಿಟಿ ಶೋ ಗೆ ಸ್ಪರ್ಧಿಯೊಬ್ಬ ಸಿಕ್ಕಾಯಿತು!ಬಿಗ್‌ಬಾಸ್ ರಿಯಾಲಿಟಿ ಶೋ ಗೆ ಸ್ಪರ್ಧಿಯೊಬ್ಬ ಸಿಕ್ಕಾಯಿತು!

  ಫ್ಯಾಂಟಮ್ ಲೋಕದಲ್ಲಿ ಕೇಳಿ ಬರುತ್ತಿರುವ ಧ್ವನಿ ಇವರದ್ದೆ

  ಫ್ಯಾಂಟಮ್ ಲೋಕದಲ್ಲಿ ಕೇಳಿ ಬರುತ್ತಿರುವ ಧ್ವನಿ ಇವರದ್ದೆ

  ಫ್ಯಾಂಟಮ್ ಲೋಕದಲ್ಲಿ ಕೇಳಬರುತ್ತಿರುವ ಈ ಧ್ವನಿ ಗಾಯಕಿ ಹರ್ಷಿಕಾ ದೇವನಾಥನ್ ಅವರದ್ದು. ಮೊದಲ ಬಾರಿಗೆ ಕಿಚ್ಚ ಸುದೀಪ್ ಚಿತ್ರಕ್ಕೆ ಧ್ವನಿ ನೀಡಿರುವ ಹರ್ಷಿಕಾ ಖುಷಿಯನ್ನು ಹಂಚಿಕೊಂಡಿದ್ದಾರೆ. "ಕಿಚ್ಚ ಸುದೀಪ್ ಅವರನ್ನು ನೋಡುತ್ತಿದ್ದೀನಿ. ನನ್ನ ಧ್ವನಿಯ ಜೊತೆ. ಕನಸು ನನಸಾಗಿದೆ. ನೋಡುತ್ತಿದ್ದರೆ ರೋಮಾಂಚನ ವಾಗುತ್ತಿದೆ. ಇದು ಸಂಪೂರ್ಣ ಹೊಸ ಮಟ್ಟದ ಫ್ಯಾಂಟಮ್ ಆಗಿದೆ." ಎಂದು ಚಿತ್ರತಂಡಕ್ಕೆ ಧನ್ಯವಾದ ತಿಳಿಸಿದ್ದಾರೆ.

  ವಿಕ್ರಾಂತ್ ರೋಣನಾಗಿ ಬಂದ ಕಿಚ್ಚ

  ವಿಕ್ರಾಂತ್ ರೋಣನಾಗಿ ಬಂದ ಕಿಚ್ಚ

  'ಇಂದು ಮೇಕಪ್ ಮಾಡಿಸಿಕೊಳ್ಳುವುದು ಅದ್ಭುತ ಅನುಭವ ನೀಡಿತು. ನನ್ನ ಪ್ಯಾಷನ್ ನಿಂದ ಸುದೀರ್ಘವಾದ ರಜೆಯಲ್ಲಿದ್ದೆ ಎನಿಸಿತು. ಪ್ಯಾಷನ್ ಎಂದರೆ ಸಿನಿಮಾ. ಇಲ್ಲಿ ನಾನು ವಿಕ್ರಾಂತ್ ರೋಣನಾಗಿ ಮತ್ತೆ ಬಂದಿದ್ದೇನೆ' ಎಂದು ಸುದೀಪ್ ಬರೆದುಕೊಂಡಿದ್ದರು. ಫ್ಯಾಟಮ್ ಚಿತ್ರೀಕರಣ ಶುರುವಾಗಿರುವುದು ಸುದೀಪ್ ಅಭಿಮಾನಿಗಳಲ್ಲಿ ರೋಮಾಂಚನ ಮೂಡಿಸಿದೆ. ಸದ್ಯ ರಿಲೀಸ್ ಆಗಿರುವ ದೃಶ್ಯಗಳು ಚಿತ್ರದ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ.

  English summary
  Sudeep starrer Most expected Phantom movie second video release. This movie is directed by Anup Bhandari.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X