Don't Miss!
- News
Breaking: ಮಧ್ಯಪ್ರದೇಶದಲ್ಲಿ ಭಾರತೀಯ ವಾಯಪಡೆ ಯುದ್ಧ ವಿಮಾನಗಳ ಡಿಕ್ಕಿ, ಪತನ
- Sports
ನಾವು ಆಡುವುದನ್ನು ನೋಡಲು ಜನ ಬಂದಿಲ್ಲ: ಆತನಿಗಾಗಿ ಜನ ಬಂದಿದ್ದಾರೆ ಎಂದ ನ್ಯೂಜಿಲೆಂಡ್ ಕ್ರಿಕೆಟಿಗ
- Technology
ಶೀಘ್ರದಲ್ಲೇ ಭಾರತಕ್ಕೆ ಎಂಟ್ರಿ ನೀಡಲಿದೆ ಸ್ಯಾಮ್ಸಂಗ್ ಗ್ಯಾಲಕ್ಸಿ S23! ಫೀಚರ್ಸ್ ನಿರೀಕ್ಷೆ ಏನು?
- Lifestyle
ಬೆಳ್ಳಿಯ ಆಭರಣಗಳು ಹೊಳಪಿನಿಂದ ಕೂಡಿರಲು ಈ ಟ್ರಿಕ್ಸ್ ಬಳಸಿ
- Automobiles
ಟಾಟಾದ ಜನಪ್ರಿಯ ಕಾರುಗಳ ಬೆಲೆ ಏರಿಕೆ: ಘೋಷಣೆ
- Finance
ಹಿಂಡನ್ಬರ್ಗ್ vs ಅದಾನಿ ನಡುವೆ ಎಲ್ಐಸಿ, ಎಸ್ಬಿಐ ಉಳಿತಾಯ ರಿಸ್ಕ್ನಲ್ಲಿದೆಯೇ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಪೈಲ್ವಾನ್ ಕಿಚ್ಚನ ವಿರುದ್ಧ ತೊಡೆ ತಟ್ಟಿ ನಿಂತ ತೆಲುಗು ನಟ ಪ್ರಭಾಸ್.!
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಸಿನಿಮಾದ ಪ್ರಮೋಷನ್ ಭರ್ಜರಿಯಾಗಿ ನಡೆಯುತ್ತಿದೆ. ಆಗಸ್ಟ್ ಕೊನೆಯಲ್ಲಿ ಅಂದ್ರೆ ಆಗಸ್ಟ್ 29ಕ್ಕೆ ತೆರೆಗೆ ಬರಲು ಸಿದ್ಧವಾಗಿರುವ ಪೈಲ್ವಾನ್ ಗೆ ಈಗ ತೆಲುಗಿನ ಬಿಗ್ ಬಜೆಟ್ ಸಾಹೋ ಸಿನಿಮಾ ದೊಡ್ಡ ಎದುರಾಳಿಯಾಗಿದೆ. ಹೌದು ಕಿಚ್ಚನ ವಿರುದ್ಧ ತೆಲುಗು ನಟ ಪ್ರಭಾಸ್ ತೊಡೆ ತಟ್ಟಿನಿಲ್ಲುವ ಸಾಧ್ಯತೆ ಇದೆ.
ವರಮಹಾಲಕ್ಷ್ಮಿ ಹಬ್ಬದಿಂದ ಮುಂದಕ್ಕೆ ಹೋಗಿ ಆಗಸ್ಟ್ ಕೊನೆಯಲ್ಲಿ ಎಂಟ್ರಿಗಾಗಿ ಕಾಯುತ್ತಿದ್ದ ಪೈಲ್ವಾನ್ ಎದುರಿಗೆ ಟಾಲಿವುಡ್ ರೆಬೆಲ್ ಸ್ಟಾರ್ ಪ್ರಭಾಸ್ ಅಭಿನಯದ ಸಾಹೋ ಸಿನಿಮಾ ಎಂಟ್ರಿ ಕೊಡುತ್ತಿದೆ. ಸಾಹೋ ಈ ಮೊದಲು ಆಗಸ್ಟ್ 15ಕ್ಕೆ ತೆರೆಗೆ ಬರಲು ರೆಡಿಯಾಗಿತ್ತು. ಅಲ್ಲದೆ ಚಿತ್ರತಂಡ ಕೂಡ ಆಗಸ್ಟ್ 15ಕ್ಕೆ ರಿಲೀಸ್ ಆಗಲಿದೆ ಎಂದು ಅಧಿಕೃತವಾಗಿ ಅನೌನ್ಸ್ ಮಾಡಿತ್ತು. ಆದ್ರೀಗ ಸಾಹೋ ಆಗಸ್ಟ್ 30ಕ್ಕೆ ತೆರೆಗೆ ಬರುವ ಪ್ಲಾನ್ ಮಾಡಿದೆಯಂತೆ.
ಸಾಹೋ ಚಿತ್ರದ ಕೆಲಸಗಳು ಮುಗಿಯದ ಕಾರಣ ಚಿತ್ರದ ರಿಲೀಸ್ ಡೇಟ್ ಮುಂದಕ್ಕೆ ಹೋಗಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಅಲ್ಲದೆ ಆಗಸ್ಟ್ ಕೊನೆಯಲ್ಲಿ ತೆರೆಗೆ ಬಂದರೆ ಗಣೇಶ ಹಬ್ಬದ ಸಮಯವಾದ್ದರಿಂದ ಚಿತ್ರಕ್ಕೆ ಮತ್ತಷ್ಟು ಪ್ಲಸ್ ಆಗುವ ಸಾಧ್ಯತೆ ಇದೆ. ಹಾಗಾಗಿ ಸಾಹೋ ಆಗಸ್ಟ್ ಕೊನೆಗೆ ಜಂಪ್ ಆಗಿದೆ. ಆದ್ರೆ ಇತ್ತ ಸುದೀಪ್ ಅಭಿನಯದ ಪೈಲ್ವಾನ್ ಸಿನಿಮಾ ಕೂಡ ಅದೆ ಸಮಯದಲ್ಲಿ ತೆರೆಗೆ ಬರಲು ಸಿದ್ಧವಾಗಿದೆ.
ಪೈಲ್ವಾನ್ ಕನ್ನಡ ಮಾತ್ರವಲ್ಲದೆ ಒಟ್ಟು ಐದು ಭಾಷೆಯಲ್ಲಿ ತೆರೆಗೆ ಬರುತ್ತಿದೆ. ತೆಲುಗಿನಲ್ಲೂ ದೊಡ್ಡ ಮಟ್ಟಕ್ಕೆ ರಿಲೀಸ್ ಆಗುತ್ತಿರುವ ಪೈಲ್ವಾನ್ ಗೆ ಸಾಹೋ ಸಖತ್ ಫೈಟ್ ಕೊಡುವ ಸಾದ್ಯತೆ ಇದೆ. ಇದರಿಂದ ಕಿಚ್ಚ ಮತ್ತು ಪ್ರಭಾಸ್ ನಡುವೆ ದೊಡ್ಡ ಮಟ್ಟಕ್ಕೆ ಬಾಕ್ಸ್ ಆಫೀಸ್ ವಾರ್ ಆಗಲಿದೆ. ಇನ್ನು ಎರಡು ದೊಡ್ಡ ಸಿನಿಮಾವಾದ್ದರಿಂದ ಚಿತ್ರಮಂದಿರಗಳ ಸಮಸ್ಯೆ ಕೂಡ ಎದುರಾಗುವ ಸಾಧ್ಯತೆ ಇದೆ. ಪೈಲ್ವಾನ್ ಮತ್ತೆ ಮುಂದಕ್ಕೆ ಹೋಗುತ್ತಾ ಅಥವಾ ಪ್ರಭಾಸ್ ವಿರುದ್ದ ತೊಡೆ ತಟ್ಟಿ ನಿಲ್ಲುತ್ತಾರಾ ಕಾದು ನೋಡಬೇಕು.