For Quick Alerts
  ALLOW NOTIFICATIONS  
  For Daily Alerts

  ನಟ ಶಾರುಖ್ ಖಾನ್ ಕೈಯಲ್ಲಿ ಸುದೀಪ 'ಪೈಲ್ವಾನ್' ಸಿನಿಮಾ

  |
  Pailvan Movie: 'ಪೈಲ್ವಾನ್' ಈಗ ಬಾಲಿವುಡ್ ಸ್ಟಾರ್ ನಟ ಶಾರುಖ್ ಕೈ ಸೇರಿದೆ | FILMIBEAT KANNADA

  ಸ್ಯಾಂಡಲ್ ವುಡ್ ನ ಮಾಣಿಕ್ಯ ಕಿಚ್ಚ ಸುದೀಪ್ ಅಭಿನಯದ 'ಪೈಲ್ವಾನ್' ಸಿನಿಮಾ ಬಾರಿ ಕುತೂಹಲ ಮೂಡಿಸಿದೆ. ಈಗಾಗಲೆ ಟೀಸರ್ ಮತ್ತು ಪೋಸ್ಟರ್ ಗಳ ಮೂಲಕ ಅಭಿಮಾನಿಗಳ ಹಾರ್ಟ್ ಬೀಟ್ ಹೆಚ್ಚಿಸಿರುವ 'ಪೈಲ್ವಾನ್' ಈಗ ಬಾಲಿವುಡ್ ಸ್ಟಾರ್ ನಟ ಶಾರುಖ್ ಕೈ ಸೇರಿದೆ.

  ಕಿಚ್ಚನ ಸಿನಿಮಾ ಶಾರುಖ್ ಕೈಯಲ್ಲಿ ಯಾಕಿದೆ ಅಂತ ಜಾಸ್ತಿ ಯೋಚಿಸಬೇಡಿ. ಯಾಕಂದ್ರೆ 'ಪೈಲ್ವಾನ್' ಸಿನಿಮಾಗೆ ರಾಯಲ್ ಟಚ್ ಕೊಡಲು ಶಾರುಖ್ ಖಾನ್ ಅವರ ರೆಡ್ ಚಿಲ್ಲೀಸ್ ಎಂಟಟೈನ್ ಮೆಂಟ್ ಸಂಸ್ಥೆಗೆ ಹೋಗಿದೆಯಂತೆ. ಚಿತ್ರದ ಪ್ರಮುಖ ದೃಶ್ಯಗಳಿಗೆ ವಿ ಎಫ್ ಎಕ್ಸ್ ಕೆಲಸಗಳು ಮಾಡಿಸಬೇಕಂತೆ. ಹಾಗಾಗಿ ರೆಡ್ ಚಿಲ್ಲೀಸ್ ಮೊರೆ ಹೋಗಿದ್ದಾರೆ ನಿರ್ಮಾಪಕ ಮತ್ತು ನಿರ್ದೇಶಕ ಕೃಷ್ಣ.

  ಸದ್ಯಕ್ಕಿಲ್ಲ ಸುದೀಪ ಮತ್ತು ಸೂರಿ ಕಾಂಬಿನೇಷನ್ ಸಿನಿಮಾ

  ಕುಸ್ತಿಯ ಸನ್ನಿವೇಶದ ಸಮಯದ ಒಂದಿಷ್ಟು ದೃಶ್ಯಗಳನ್ನು ಅಂದ್ರೆ ಸ್ಟೇಡಿಯಂ ಮತ್ತು ಹೆಚ್ಚು ಜನರಿರುವಂತೆ ವಿಶ್ಯುವಲ್ ಎಫೆಕ್ಟ್ ಗಾಗಿ ರೆಡ್ ಚಿಲ್ಲೀಸ್ ಮೊರೆ ಹೋಗಿದ್ದಾರೆ. ಅಂದ್ಹಾಗೆ ಶಾರುಖ್ ಖಾನ್ ಅವರ ರೆಡ್ ಚಿಲ್ಲೀಸ್ ವಿ ಎಫ್ ಎಕ್ಸ್ ಕೆಲಸಕ್ಕೆ ಸಖತ್ ಖ್ಯಾತಿ ಮತ್ತು ತುಂಬ ದುಬಾರಿ. ಅತ್ತ್ಯುತ್ತಮವಾದ ಕೆಲಸ ಅವರಿಂದ ನಿರೀಕ್ಷೆ ಮಾಡಬಹುದು ಎನ್ನುವ ಉದ್ದೇಶಕ್ಕೆ ಶಾರುಖ್ ಬಳಿ ಹೋಗಿದೆ ಪೈಲ್ವಾನ್.

  ಅಂದ್ಹಾಗೆ ಈಗಾಗಲೆ ಚಿತ್ರದ ಎಡಿಟಿಂಗ್ ಕೆಲಸಗಳು ಪೂರ್ಣಗೊಂಡಿದೆ. ಸದ್ಯ ಎಫ್ ಎಕ್ಸ್ ಕೆಲಸ ಬರದಿಂದ ನಡೆಯುತ್ತಿದೆ. ಜೊತೆಗೆ ಎಲ್ಲಾ ಭಾಷೆಯ ಡಬ್ಬಿಂಗ್ ಕೆಲಸಗಳು ಸಹ ನಡೆಯುತ್ತಿವೆ. ಎಲ್ಲವು ಅಂದುಕೊಂಡಂತೆ ಆದ್ರೆ ಚಿತ್ರ ಆಗಸ್ಟ್ ನಲ್ಲಿ ವರಮಹಾಲಕ್ಷ್ಮೀ ಹಬ್ಬಕ್ಕೆ ತೆರೆಗೆ ಬರುವ ಸಾಧ್ಯತೆ ಇದೆ.

  English summary
  Kannada actor Kiccha Sudeep starrer Pailwan film getting royal touch from Shahrukh Khan Red Chillies Entertainment. Red Chillies Entertainment entrusted with the VFX for the boxing sequences.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X