Just In
Don't Miss!
- News
ನಡ್ಡಾ ಯಾರು? ಅವರೇನು ನನ್ನ ಪ್ರೊಫೆಸರಾ?: ರಾಹುಲ್ ಗಾಂಧಿ ಪ್ರಶ್ನೆ
- Automobiles
2021ರ ಜೀಪ್ ಕಂಪಾಸ್ ಫೇಸ್ಲಿಫ್ಟ್ ಎಸ್ಯುವಿ ವೆರಿಯೆಂಟ್ ಮಾಹಿತಿ ಬಹಿರಂಗ
- Sports
ಸಯ್ಯದ್ ಮುಷ್ತಾಕ್ ಅಲಿ ಟಿ20: ಕ್ವಾರ್ಟರ್ ಫೈನಲ್ಗೇರಿದ ಕರ್ನಾಟಕ
- Education
SBI PO Mains Admit Card 2021: ಪ್ರವೇಶ ಪತ್ರ ಡೌನ್ಲೋಡ್ ಮಾಡುವುದು ಹೇಗೆ ?
- Lifestyle
ಜ. 25ಕ್ಕೆ ಕುಂಭ ರಾಶಿಗೆ ಬುಧನ ಸಂಚಾರ: 12 ರಾಶಿಗಳ ಮೇಲೆ ಇದರ ಪ್ರಭಾವವೇನು?
- Finance
ಷೇರುಪೇಟೆಯಲ್ಲಿ ಉತ್ಸಾಹ; ಹೂಡಿಕೆದಾರರ ಸಂಪತ್ತು 3.50 ಲಕ್ಷ ಕೋಟಿ ರು. ಹೆಚ್ಚಳ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಸುದೀಪ್ ಅಭಿಮಾನಿಗಳಿಗೆ ಬಿಗ್ ನ್ಯೂಸ್: 'ಪೈಲ್ವಾನ್' ಸಿನಿಮಾ ರಿಲೀಸ್ ಡೇಟ್ ಬಹಿರಂಗ
ಸ್ಯಾಂಡಲ್ ವುಡ್ ನ ಆರಡಿ ಕಟೌಟ್ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಸಾಲು ಸಾಲು ಸಿನಿಮಾಗಳು ರಿಲೀಸ್ ಗೆ ತಯಾರಿ ಮಾಡಿಕೊಳ್ಳುತ್ತಿವೆ. ಕನ್ನಡ ಮಾತ್ರವಲ್ಲದೆ ತೆಲುಗು ಮತ್ತು ಹಿಂದಿ ಚಿತ್ರರಂಗದಲ್ಲು ಮಿಂಚುತ್ತಿರುವ ಕಿಚ್ಚ ಈಗ ಕನ್ನಡಾಭಿಮಾನಿಗಳಿಗೆ ದರ್ಶನ ನೀಡಲು ಸಜ್ಜಾಗಿದ್ದಾರೆ.
ದಿ ವಿಲನ್ ಚಿತ್ರದ ನಂತರ ಸುದೀಪ್ ಸಿನಿರಸಿಕರ ಮುಂದೆ ಬಂದಿಲ್ಲ. ಅಭಿಮಾನಿಗಳ ಅಭಿಮಾನಿ ಕಿಚ್ಚನನ್ನು ನೋಡಲು ಅಭಿಮಾನಿಗಳು ಜಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಅಭಿಮಾನಿಗಳ ಆಸೆಯಂತೆ ಕಿಚ್ಚನ ಗ್ರ್ಯಾಂಡ್ ಎಂಟ್ರಿಗೆ ದಿನಾಂಕ ಫಿಕ್ಸ್ ಆಗಿದೆ. ಅಭಿನಯ ಚಕ್ರವರ್ತಿ ಅಭಿನಯದ ಬಹು ನಿರೀಕ್ಷೆಯ 'ಪೈಲ್ವಾನ್' ಚಿತ್ರದ ರಿಲೀಸ್ ಡೇಟ್ ಬಹಿರಂಗವಾಗಿದೆ.
ಇದೇ ವಾರ 'ದಬಂಗ್-3' ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ ಸುದೀಪ್
ಹೌದು, ಕುಸ್ತಿ ಪಟುವಾಗಿ ಅಖಾಡಕ್ಕೆ ಇಳಿದ್ದಿದ್ದ ಕಿಚ್ಚನನ್ನು ನೋಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಇದರ ಬೆನ್ನಲ್ಲೆ 'ಕೋಟಿಗೊಬ್ಬ-3 'ಚಿತ್ರದ ರಿಲೀಸ್ ಡೇಟ್ ಕೂಡ ರಿವೀಲ್ ಆಗಿದೆ. ಸ್ಯಾಂಡಲ್ ವುಡ್ ಮಾಣಿಕ್ಯನನ್ನು ನೊಡಲು ಇನ್ನು ಸ್ವಲ್ಪ ತಿಂಗಳು ಕಾಯಬೇಕಾದರು ರಿಲೀಸ್ ಡೇಟ್ ಬಹಿರಂಗವಾಗಿರುವುದು ಅಭಿಮಾನಿಗಳ ಸಂತಸಕ್ಕೆ ಪಾರವೆ ಇಲ್ಲ. ಹಾಗಾದ್ರೆ 'ಪೈಲ್ವಾನ್' ಯಾವಾಗ ಚಿತ್ರಮಂದಿರಕ್ಕೆ ಎಂಟ್ರಿ ಕೊಡುತ್ತೆ? ಮುಂದೆ ಓದಿ..

ಆಗಸ್ಟ್ ನಲ್ಲಿ ತೆರೆಗೆ ಬರಲಿದೆ ಪೈಲ್ವಾನ್
ಬಹುನಿರೀಕ್ಷೆಯ 'ಪೈಲ್ವಾನ್' ಸಿನಿಮಾ ಆಗಸ್ಟ್ ನಲ್ಲಿ ತೆರೆಗೆ ಬರಲು ಸಜ್ಜಾಗಿದೆ. ಅಂದ್ಹಾಗೆ ಆಗಸ್ಟ್ 8ರಿಂದ 'ಪೈಲ್ವಾನ್' ಅಬ್ಬರ ಶುರುವಾಗಲಿದೆ ಎಂದು ಹೇಳಲಾಗುತ್ತಿದೆ. ಹೆಬ್ಬುಲಿ ಚಿತ್ರ ನಿರ್ದೇಶನ ಮಾಡಿದ್ದ ನಿರ್ದೇಶಕ ಕೃಷ್ಣ 'ಪೈಲ್ವಾನ್' ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ. ಆರ್ ಆರ್ ಆರ್ ಮೋಷನ್ ಪಿಕ್ಟರ್ ಬ್ಯಾನರ್ ನಲ್ಲಿ ಸಿನಿಮಾ ಮೂಡಿ ಬಂದಿದೆ.

ಸಿಕ್ಸ್ ಪ್ಯಾಕ್ ನಲ್ಲಿ ಸುದೀಪ್ ಮಿಂಚಿಂಗ್
ಕಿಚ್ಚ ಸುದೀಪ್ 'ಪೈಲ್ವಾನ್' ಚಿತ್ರದಲ್ಲಿ ಸಿಕ್ಸ್ ಪ್ಯಾಕ್ ನಲ್ಲಿ ಮಿಂಚಿದ್ದಾರೆ. ಮೊದಲ ಬಾರಿಗೆ ಸುದೀಪ್ ದೇಹವನ್ನು ಹುರಿಗೊಳಿಸಿ ಕಟ್ಟುಮಸ್ತಾದ ಪೈಲ್ವಾನ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಸುದೀಪ್ ಇದುವರೆಗೂ ಯಾವ ಚಿತ್ರದಲ್ಲು ಈ ಗೆಟಪ್ ನಲ್ಲಿ ಮಿಂಚಿರಲಿಲ್ಲ. ಮೊದಲ ಬಾರಿಗೆ ಕುಸ್ತಿ ಅಖಾಡಕ್ಕೆ ಇಳಿದು ತೊಡೆತಟ್ಟಿರುವ ಸುದೀಪ್ ಅವರನ್ನು ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ. ಈಗಾಗಲೆ ಪೋಸ್ಟರ್ಸ್ ಮತ್ತು ಟೀಸರ್ ಮೂಲಕ ಚಿತ್ರಾಭಿಮಾನಿಗಳ ಹಾರ್ಟ್ ಬೀಟ್ ಹೆಚ್ಚಿಸಿರುವ ಪೈಲ್ವಾನ್ ಆಗಸ್ಟ್ ನಲ್ಲಿ ತೆರೆಗೆ ಬರಲಿದೆ.
ಐದನೇ ವರ್ಷದ ಸಂಭ್ರಮದಲ್ಲಿ ಕಿಚ್ಚನ 'ಮಾಣಿಕ್ಯ'

8 ಭಾಷೆಯಲ್ಲಿ ಪೈಲ್ವಾನ್ ಅಬ್ಬರ
ಇತ್ತಿಚಿನ ದಿನಗಳಲ್ಲಿ ಕನ್ನಡ ಸಿನಿಮಾಗಳು ಪರಭಾಷೆಯಲ್ಲೂ ರಿಲೀಸ್ ಆಗುತ್ತಿದೆ. ರಾಕಿಂಗ್ ಸ್ಟಾರ್ ಅಭಿನಯದ 'ಕೆಜಿಎಫ್' ಸಿನಿಮಾ ಐದು ಭಾಷೆಯಲ್ಲಿ ತೆರೆ ಕಂಡು ದೊಡ್ಡ ಮಟ್ಟಕ್ಕೆ ಸಕ್ಸಸ್ ಗಳಿಸಿತ್ತು. ಸುದೀಪ್ ಅಭಿನಯದ 'ಪೈಲ್ವಾನ್' ಸಿನಿಮಾ ಬರೋಬ್ಬರಿ ಎಂಟು ಭಾಷೆಯಲ್ಲಿ ತೆರೆಗೆ ಬರುತ್ತಿದೆ. ಕನ್ನಡ, ತಮಿಳು, ತೆಲುಗು, ಮಲಯಾಳಂ, ಹಿಂದಿ, ಬೆಂಗಾಲಿ, ಬೋಜ್ ಪುರಿ ಮತ್ತು ಮರಾಠಿ ಭಾಷೆಯಲ್ಲಿ ಸಿನಿಮಾ ತೆರೆಗೆ ಬರುತ್ತಿದೆ.

ಮೊದಲ ಬಾರಿಗೆ ಸುನೀಲ್ ಶೆಟ್ಟಿ ಕನ್ನಡ ಸಿನಿಮಾದಲ್ಲಿ
ಬಾಲಿವುಡ್ ಖ್ಯಾತ ನಟ ಕನ್ನಡಿಗ ಸುನೀಲ್ ಶೆಟ್ಟಿ ಮೊದಲ ಬಾರಿಗೆ 'ಪೈಲ್ವಾನ್' ಮೂಲಕ ಕನ್ನಡ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಕಿಚ್ಚನ ಜೊತೆ ತೆರೆ ಹಂಚಿಕೊಂಡಿರುವ ಸುನೀಲ್ ಶೆಟ್ಟಿ ಅವರನ್ನು ನೋಡಲು ಕನ್ನಡ ಚಿತ್ರಪ್ರಿಯರು ಕಾತುರರಾಗಿದ್ದಾರೆ. ಇನ್ನು ಚಿತ್ರದಲ್ಲಿ ಸುಶಾಂತ್ ಸಿಂಗ್ ಮತ್ತು ಕಬೀರ್ ದುಹಾನ್ ಸಿಂಗ್ ಕಾಣಿಸಿಕೊಂಡಿದ್ದಾರೆ. ಸುದೀಪ್ ಗೆ ನಾಯಕಿಯಾಗಿ ಆಕಾಂಕ್ಷ ಸಿಂಗ್ ಅಭಿನಯಿಸಿದ್ದಾರೆ.
'ದಬಾಂಗ್' ಚಿತ್ರಕ್ಕೆ ಸುದೀಪ್ ಅವರನ್ನ ಸೂಚಿಸಿದ್ದು ಯಾರು ಗೊತ್ತಾ?

ನವೆಂಬರ್ ನಲ್ಲಿ ತೆರೆಗೆ ಬರಲಿದೆ ಕೋಟಿಗೊಬ್ಬ-3
ಸುದೀಪ್ ಸದ್ಯ 'ಕೋಟಿಗೊಬ್ಬ-3 'ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಸುಮಾರು 70ರಷ್ಟು ಚಿತ್ರೀಕರಣ ಮುಗಿಸಿರುವ 'ಕೋಟಿಗೊಬ್ಬ-3 'ನವೆಂಬರ್ 1ರಂದು ರಿಲೀಸ್ ಮಾಡಲು ಪ್ಲಾನ್ ಮಾಡುತ್ತಿದೆ ಚಿತ್ರತಂಡ. ಈ ಮೂಲಕ ಕನ್ನಡ ರಾಜ್ಯೋತ್ಸವಕ್ಕೆ ಸುದೀಪ್ ಅಭಿಮಾನಿಗಳಿಗೆ ದೊಡ್ಡ ಗಿಫ್ಟ್ ಕೊಡಲು ಚಿತ್ರತಂಡ ಸಿದ್ಧವಾಗಿದೆ. ಸೂರಪ್ಪ ಬಾಬು ನಿರ್ಮಾಣದಲ್ಲಿ ಮೂಡಿ ಬರುತ್ತಿರುವ 'ಕೋಟಿಗೊಬ್ಬ-3 'ಚಿತ್ರಕ್ಕೆ ಶಿವ ಕಾರ್ತಿಕ್ ಆಕ್ಷನ್ ಕಟ್ ಹೇಳುತ್ತಿದ್ದಾರೆ.

ದಬಂಗ್-3 ಮತ್ತು ಸೈರಾ ನರಸಿಂಹ ರೆಡ್ಡಿ
ಸುದೀಪ್ ಅಭಿನಯದ ತೆಲುಗು ಸಿನಿಮಾ 'ಸೈರಾ ನರಸಿಂಹ ರೆಡ್ಡಿ' ಮುಂದಿನ ವರ್ಷಾರಂಭದಲ್ಲಿ ತೆರೆಗೆ ಬರಲಿದೆ. ಜನವರಿ 18ರಂದು 'ಸೈರಾ ನರಸಿಂಹ ರೆಡ್ಡಿ' ಸಿನಿಮಾ ರಿಲೀಸ್ ಆಗಲಿದೆ. ಇನ್ನು ಬಾಲಿವುಡ್ ನ 'ದಬಂಗ್-3' ಸಿನಿಮಾ ಡಿಸೆಂಬರ್ 20ಕ್ಕೆ ರಿಲೀಸ್ ಆಗಲಿದೆ. ಸದ್ಯ ಸುದೀಪ್ 'ದಬಂಗ್-3 'ಚಿತ್ರೀಕರಣಕ್ಕೆ ಇದೇ ವಾರ ಮೇ 4ರಂದು ಹೊರಡಲಿದ್ದಾರೆ. ಸಲ್ಮಾನ್ ಖಾನ್ ಎದುರು ಅಖಾಡಕ್ಕೆ ಇಳಿದಿರುವ ಕಿಚ್ಚ ಸಿಕಂದರ್ ಭಾರದ್ವಜ್ ಪಾತ್ರದಲ್ಲಿ ಮಿಂಚಲಿದ್ದಾರೆ.