Don't Miss!
- News
ಮಾನ್ವಿ: ಮಂಜೂರಾದ ಬಡವರ ಭೂಮಿಗೆ ಕಣ್ಣು ಹಾಕಿದ ಪ್ರಭಾವಿಗಳು, ಜನಾಕ್ರೋಶ
- Sports
LLC 2023: ಲೆಜೆಂಡ್ಸ್ ಲೀಗ್ನಲ್ಲಿ ಕೈಫ್, ಗೇಲ್, ಗಂಭೀರ್ ಸೇರಿದಂತೆ ಹಲವು ಸ್ಟಾರ್ಗಳು
- Lifestyle
ಆರೋಗ್ಯವಾಗಿರಬೇಕೆ? ಹಾಗಾದರೆ ನೀವು 3 ವಿಷಯಗಳಲ್ಲಿ ನಂಬಿಕೆ ಇಡಲೇಬೇಕು
- Finance
Jio 5G services: ಇಂದಿನಿಂದ ಮತ್ತೆ 34 ನಗರಗಳಲ್ಲಿ ಪ್ರಾರಂಭ- ಮಧ್ಯ ಕರ್ನಾಟಕದ ಯಾವ ನಗರಕ್ಕೆ ಕೊಡುಗೆ? ಮಾಹಿತಿ ಪಡೆಯಿರಿ
- Automobiles
ಪೆಟ್ರೋಲ್ ಬೆಲೆ ಏರಿಕೆ ಚಿಂತೆ ಬಿಡಿ: ರೂ.1 ಲಕ್ಷ ಇದ್ರೆ ಆಕ್ಟಿವಾವನ್ನು ಎಲೆಕ್ಟ್ರಿಕ್ ಸ್ಕೂಟರ್ ಆಗಿ ಪರಿವರ್ತಿಸಬ
- Technology
ಆಂಡ್ರಾಯ್ಡ್ ಬಳಕೆದಾರರಿಗಾಗಿ 'ಕಿಡ್ಸ್ ಮಿಸ್ಟರಿ ಬಾಕ್ಸ್' ಫೀಚರ್ಸ್ ಪರಿಚಯಿಸಿದ ನೆಟ್ಫ್ಲಿಕ್ಸ್!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
'ಕೆಜಿಎಫ್- 2' ಹಾಗೂ 'RRR'ಗಿಂತ 'ವಿಕ್ರಾಂತ್ ರೋಣ' ಚಿಕ್ಕ ಸಿನಿಮಾ?
ಅನೂಪ್ ಭಂಡಾರಿ ನಿರ್ದೇಶನದ 'ವಿಕ್ರಾಂತ್ ರೋಣ' ಸಿನಿಮಾ ರಿಲೀಸ್‌ಗೆ ಇನ್ನೊಂದೇ ದಿನ ಬಾಕಿ ಇರೋದು. ನಿನ್ನೆಯಷ್ಟೇ ಈ ಫ್ಯಾಂಟಸಿ ಆಕ್ಷನ್ ಅಡ್ವೆಂಚರಸ್ ಸಿನಿಮಾ ಹಿಂದಿ ವರ್ಷನ್ ಸೆನ್ಸಾರ್ ಆಗಿದ್ದು, ಚಿತ್ರದ ಕಾಲಾವಧಿ ಎಷ್ಟಿರುತ್ತದೆ ಅನ್ನುವುದು ಗೊತ್ತಾಗಿದೆ.
ಕೊನೆ ಕ್ಷಣದ ಪ್ರಮೋಷನ್‌ನಲ್ಲಿ ಚಿತ್ರತಂಡ ಬ್ಯುಸಿಯಾಗಿದ್ದು, ಕೆಲವೇ ನಿಮಿಷಗಳ ಹಿಂದೆ ಬೆಂಗಳೂರಿನಲ್ಲಿ ಅದ್ಧೂರಿ ಪ್ರೀ ರಿಲೀಸ್ ಈವೆಂಟ್ ನೆರವೇರಿದೆ. ರಿಯಲ್ ಸ್ಟಾರ್ ಉಪೇಂದ್ರ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿ ಇದು 'ವಿಕ್ರಾಂತ್ ರೋಣ' ಅಲ್ಲ 'ವಿಕ್ಟರಿ ರೋಣ' ಅಂತ ಭವಿಷ್ಯ ನುಡಿದಿದ್ದಾರೆ. ಸಿನಿಮಾ ರಿಲೀಸ್‌ಗೂ ಮೊದಲೇ ಸಕ್ಸಸ್ ಪಾರ್ಟಿ ಕೇಳಿದ್ದಾರೆ. ವಿಶ್ವದಾದ್ಯಂತ 'ವಿಕ್ರಾಂತ್ ರೋಣ' ಕಾವು ಹೆಚ್ಚಾಗಿದ್ದು, ಸಿನಿಮಾ ಬಾಕ್ಸಾಫೀಸ್‌ನಲ್ಲಿ ದೊಡ್ಡಮಟ್ಟದಲ್ಲಿ ಸದ್ದು ಮಾಡುವ ನಿರೀಕ್ಷೆಯಿದೆ.
ಯಶ್
ಇಂಡಿಯಾ
ಬಾಕ್ಸ್
ಆಫೀಸ್
ಗೆದ್ರು,
ಕಿಚ್ಚ
ವಿಶ್ವದ
ಬಾಕ್ಸ್
ಆಫೀಸ್
ಗೆಲ್ತಾರೆ:
ಉಪ್ಪಿ
ಭವಿಷ್ಯ
ಈಗಾಗಲೇ 'ವಿಕ್ರಾಂತ್ ರೋಣ' ಫಸ್ಟ್ ಕಾಪಿ ನೋಡಿ ಥ್ರಿಲ್ಲಾಗಿರುವ ಚಿತ್ರತಂಡ ಗುರುವಾರ ಪ್ರೇಕ್ಷಕರ ಪ್ರತಿಕ್ರಿಯೆ ಕೇಳೋಕೆ ಕಾತರದಿಂದ ಕಾಯುತ್ತಿದೆ. ಬಾದ್‌ಶಾ ಸುದೀಪ್ ಜೊತೆಗೆ ನಿರೂಪ್ ಭಂಡಾರಿ, ನೀತಾ ಅಶೋಕ್ ಮುಖ್ಯಭೂಮಿಕೆಯಲ್ಲಿ ನಟಿಸಿದ್ದು, ಜಾಕ್ ಮಂಜು ಮತ್ತು ಅಲಂಕಾರ್ ಪಾಂಡಿಯನ್ ಭಾರೀ ಬಜೆಟ್‌ನಲ್ಲಿ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಅಜನೀಶ್ ಲೋಕನಾಥ್ ಮ್ಯೂಸಿಕ್‌ನಲ್ಲಿ 'ವಿಕ್ರಾಂತ್ ರೋಣ' ಆಲ್ಬಮ್ ಸೂಪರ್ ಹಿಟ್ ಆಗಿದೆ. ಕನ್ನಡ, ಇಂಗ್ಲೀಷ್ ಸೇರಿದಂತೆ ಹಲವು ಭಾಷೆಗಳಲ್ಲಿ ಸಿನಿಮಾ ಗುರುವಾರ 3200ಕ್ಕೂ ಅಧಿಕ ಸ್ಕ್ರೀನ್‌ಗಳಲ್ಲಿ ವಿಶ್ವದಾದ್ಯಂತ ಅದ್ಧೂರಿಯಾಗಿ ಬಿಡುಗಡೆಯಾಗುತ್ತಿದೆ.
|
ಚಿತ್ರದ ಒಟ್ಟು ಕಾಲಾವಧಿ ಎಷ್ಟು?
'ವಿಕ್ರಾಂತ್ ರೋಣ' ಹಿಂದಿ ವರ್ಷನ್ ಕಾಲಾವಧಿ 2 ಗಂಟೆ 27 ನಿಮಿಷ 39 ಸೆಕೆಂಡ್‌ಗಳು ಎಂದು ಬಾಲಿವುಡ್ ಚಿತ್ರ ವಿಮರ್ಶಕ ತರಣ್ ಆದರ್ಶ್ ಮಾಹಿತಿ ನೀಡಿದ್ದಾರೆ. ಉಳಿದ ವರ್ಷನ್‌ಗಳ ಕಾಲಾವಧಿ ಕೂಡ ಒಂದೆರಡು ಸಿನಿಮಾ ಹೆಚ್ಚು ಕಮ್ಮಿ ಇರಲಿದೆ. ನಿನ್ನೆಯಷ್ಟೇ ಸಿಬಿಎಫ್‌ಸಿಯಿಂದ ಚಿತ್ರಕ್ಕೆ ಯು/ಎ ಸರ್ಟಿಫಿಕೇಟ್ ಸಿಕ್ಕಿದ್ದು, ಗುರುವಾರ 2D ಹಾಗೂ 3D ವರ್ಷನ್‌ಗಳಲ್ಲಿ ಸಿನಿಮಾ ರಿಲೀಸ್ ಆಗಲಿದೆ.
'ಎಕ್ಕ
ಸಕ್ಕ'
ವಿಡಿಯೋ
ಸಾಂಗ್
ಝಲಕ್
ನೋಡಿ
ಕೈ
ಕೈ
ಹಿಸುಕಿಕೊಂಡ
ಫ್ಯಾನ್ಸ್!

'ಕೆಜಿಎಫ್- 2' ಹಾಗೂ 'RRR'ಗಿಂತ ಕಾಲಾವಧಿ ಕಮ್ಮಿ
ಇತ್ತೀಚೆಗೆ ಕೆಲ ದೊಡ್ಡ ಸಿನಿಮಾಗಳ ಕಾಲಾವಧಿ ಹೆಚ್ಚಾಗಿ ಇದ್ದಿದ್ದನ್ನು ನೋಡಿದ್ದೇವೆ. ಸಾಮಾನ್ಯವಾಗಿ ಭಾರತೀಯ ಸಿನಿಮಾಗಳ ಕಾಲಾವಧಿ ಎರಡೂವರೆ ಗಂಟೆ ಮೀರುವುದಿಲ್ಲ. ಆದರೆ ಸಿನಿಮಾದಲ್ಲಿ ಧಮ್ಮಿದ್ದರೆ, ನೋಡಿಸಿಕೊಳ್ಳುವ ವಿಷಯ ಕಾಲು ಗಂಟೆ ಹೆಚ್ಚಾದರೂ ಪ್ರೇಕ್ಷಕರು ನೋಡುತ್ತಾರೆ ಅನ್ನುವ ಲೆಕ್ಕಾಚಾರವಿದೆ. ಕೆಲ ಸಿನಿಮಾಗಳು ದೀರ್ಘಾವಧಿ ಕಾರಣಕ್ಕೆ ಸೋತಿರುವ ಉದಾಹರಣೆ ಕೂಡ ಇದೆ. ಕೆಜಿಎಫ್ ಚಾಪ್ಟರ್-2 ಸಿನಿಮಾ ಕಾಲಾವಧಿ 2 ಗಂಟೆ 48 ನಿಮಿಷ ಇತ್ತು. ಇನ್ನು ಆರ್‌ಆರ್‌ಆರ್ ಚಿತ್ರದಲ್ಲಿ 3 ಗಂಟೆಗಳ ಕಾಲ ರಾಜಮೌಳಿ ರಾಮ್ - ಭೀಮ್ ಕಥೆ ಹೇಳಿದ್ದರು. ಈ ಎರಡು ಚಿತ್ರಗಳಿಗೆ ಹೋಲಿಸಿದ್ರೆ, ಕಾಲಾವಧಿ ವಿಚಾರದಲ್ಲಿ 'ವಿಕ್ರಾಂತ್ ರೋಣ' ಚಿತ್ರ ಸಿನಿಮಾ.

ಜೋರಾಗಿದೆ ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್
5 ದಿನ ಮೊದಲೇ ಆನ್‌ಲೈನ್‌ನಲ್ಲಿ 'ವಿಕ್ರಾಂತ್ ರೋಣ' ಚಿತ್ರದ ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಶುರುವಾಗಿದ್ದು, ಭರ್ಜರಿ ರೆಸ್ಪಾನ್ಸ್ ಸಿಕ್ತಿದೆ. 2Dಗಿಂತ 3D ವರ್ಷನ್ ನೋಡಲು ಪ್ರೇಕ್ಷಕರು ಹೆಚ್ಚು ಕಾತರರಾಗಿರುವುದು ಗೊತ್ತಾಗುತ್ತಿದೆ. 3D ಕನ್ನಡಕದಲ್ಲಿ ಕಿಚ್ಚನ ಆರ್ಭಟ ಮತ್ತಷ್ಟು ಕಿಕ್ ಕೊಡುವ ನಿರೀಕ್ಷೆಯಿದೆ.
'ವಿಕ್ರಾಂತ್
ರೋಣ'
ಮೊದಲ
ದಿನದ
ಬಾಕ್ಸಾಫೀಸ್
ಗಳಿಕೆ
ಲೆಕ್ಕಾಚಾರ!

ಹೊರ ದೇಶಗಳಲ್ಲಿ ನಾಳೆಯೇ 'ವಿಕ್ರಾಂತ್ ರೋಣ' ಎಂಟ್ರಿ
ವಿಶ್ವದಾದ್ಯಂತ ಬಹಳ ದೊಡ್ಡಮಟ್ಟದಲ್ಲಿ 'ವಿಕ್ರಾಂತ್ ರೋಣ' ಸಿನಿಮಾ ಬಿಡುಗಡೆಯಾಗುತ್ತಿದೆ. ಸದ್ಯ 3200ಕ್ಕೂ ಅಧಿಕ ಸ್ಕ್ರೀನ್‌ಗಳಲ್ಲಿ ರೋಣನ ಆರ್ಭಟ ಪಕ್ಕಾ ಆಗಿದ್ದು, ಈ ಸಂಖ್ಯೆ ಮತ್ತಷ್ಟು ಹೆಚ್ಚುವ ಸಾಧ್ಯತೆಯಿದೆ. ಪಾಕಿಸ್ತಾನ, ನೇಪಾಳ ಸೇರಿದಂತೆ ಹಲವು ದೇಶಗಳಲ್ಲಿ ಸಿನಿಮಾ ರಿಲೀಸ್ ಆಗ್ತಿದ್ದು, ಕೆಲವೆಡೆ ನಾಳೆಯೇ ಪ್ರೀಮಿಯರ್ ಶೋಗಳು ಪ್ರಾರಂಭವಾಗಲಿದೆ.