For Quick Alerts
  ALLOW NOTIFICATIONS  
  For Daily Alerts

  ಪೈಲ್ವಾನ್ ಅಖಾಡಕ್ಕೆ ಕಾಲಿಟ್ಟ ಕಬೀರ್ ಸಿಂಗ್

  By Pavithra
  |

  ಹೆಬ್ಬುಲಿ ಕಮರ್ಷಿಯಲ್ ಆಗಿ, ಮನೋರಂಜನೆ ಆಗಿ ಎಲ್ಲಾ ವಿಭಾಗದಲ್ಲಿಯೂ ದಿ ಬೆಸ್ಟ್ ಎನ್ನಿಸಿಕೊಂಡ ಸಿನಿಮಾ. ಇದಕ್ಕೆ ಕಾರಣ ಸಿನಿಮಾ ಕಲಾವಿದರು ಹಾಗೂ ತೆರೆ ಹಿಂದೆ ಕೆಲಸ ಮಾಡಿದವರು. ಅದೇ ತಂಡ ಈಗ ಮತ್ತೆ ಒಂದಾಗಿರುವುದು ಗೊತ್ತಿರುವ ವಿಚಾರ ಹೆಬ್ಬುಲಿ ಕೃಷ್ಣ ನಿರ್ದೇಶನದ ಪೈಲ್ವಾನ್ ಸಿನಿಮಾ ಸೆಟ್ಟೇರಲು ತಯಾರಾಗುತ್ತಿದೆ.

  ಒಂದು ಕಡೆ ಪ್ರೀ ಪ್ರೊಡಕ್ಷನ್ ನ ಕೆಲಸಗಳು ಭರದಿಂದ ಸಾಗಿದ್ರೆ ಇತ್ತ ಸಿನಿಮಾದಲ್ಲಿ ಅಭಿನಯಿಸುವ ಕಲಾವಿದರು ತಮ್ಮ ಅಭಿನಯಕ್ಕಾಗಿ ಬೇಕಾಗಿರುವ ತಯಾರಿಯನ್ನ ಮಾಡಿಕೊಳ್ಳುತ್ತಿದ್ದಾರೆ. ಹೆಬ್ಬುಲಿ ಚಿತ್ರದಲ್ಲಿ ಖಳನಾಯಕನಾಗಿ ಅಭಿನಯಿಸಿದ್ದ ಕಬೀರ್ ದುಹನ್ ಸಿಂಗ್ ಪೈಲ್ವಾನ್ ಸಿನಿಮಾದಲ್ಲಿ ಖಳನಾಯಕನಾಗಿ ಅಭಿನಯ ಮಾಡುತ್ತಿದ್ದಾರೆ.

  ಸುದೀಪ್ ರನ್ನು ಭೇಟಿ ಮಾಡಿದ ಸಲ್ಮಾನ್ ಖಾನ್ ಸಹೋದರ ಸೋಹೆಲ್ಸುದೀಪ್ ರನ್ನು ಭೇಟಿ ಮಾಡಿದ ಸಲ್ಮಾನ್ ಖಾನ್ ಸಹೋದರ ಸೋಹೆಲ್

  ಇದಕ್ಕಾಗಿಯೇ ಬಾಡಿ ಟ್ರಾನ್ಸ್ ಫರ್ ಮೇಶನ್ ಗಾಗಿ 12 ವಾರಗಳ ವರ್ಕ್ ಔಟ್ ಚಾಲೆಂಜ್ ತೆಗೆದುಕೊಂಡು ಸಿಕ್ಸ್ ಪ್ಯಾಕ್ ಮಾಡಿದ್ದಾರೆ ಕಬೀರ್ ದುಹನ್ ಸಿಂಗ್. ಈಗಾಗಲೇ 11 ವಾರಗಳು ವರ್ಕ್ ಔಟ್ ಮಾಡಿರುವ ಕಬೀರ್ ಸಿಂಗ್ ತಮ್ಮ ದೇಹದ ಫೋಟೋವನ್ನ ಟ್ವಿಟ್ಟರ್ ನಲ್ಲಿ ಅಪ್ಲೋಡ್ ಮಾಡಿದ್ದಾರೆ.

  ಇದಕ್ಕೆ ಕಿಚ್ಚ ಸುದೀಪ್ ಟ್ವಿಟ್ಟರ್ ನಲ್ಲಿ ನಾನು ನಿಮ್ಮ ಪರಿಶ್ರಮವನ್ನ ನಾನು ತಲುಪಲು ಸಾಧ್ಯವಿಲ್ಲ,ಮತ್ತೆ ನಿಮ್ಮ ಜೊತೆ ಸ್ಕ್ರೀನ್ ಸೇರ್ ಮಾಡಲು ಕಾಯುತ್ತಿದ್ದೇನೆ ಎಂದು ಕಮೆಂಟ್ ಮಾಡಿದ್ದಾರೆ.

  ನಿರ್ದೇಶಕ ಕೃಷ್ಣ ಕೂಡ ಈ ಬಗ್ಗೆ ಕಮೆಂಟ್ ಮಾಡಿದ್ದು ನಿಮ್ಮ ಕಮಿಂಟ್ ಮೆಂಟ್ ಮೆಚ್ಚಲೇಬೇಕು ಎಂದಿದ್ದಾರೆ. ನಿಜಕ್ಕೂ 12 ವಾರಗಳಲ್ಲಿ ಈ ರೀತಿ ವರ್ಕ್ ಔಟ್ ಸಾಧ್ಯನಾ ಎನ್ನುವುದು ಕಬೀರ್ ದುಹನ್ ಸಿಂಗ್ಅವರ ವರ್ಕ್ ಔಟ್ ಮಾಡಿದ ನಂತರದ ಪೋಟೋ ನೋಡಿದರೆ ಅನ್ನಿಸುತ್ತದೆ.

  English summary
  Kannada actor Sudeep has started workout for the film Pailwan. Jeet Devayya is training for Kichha. Sudeep update about his workout on Twitter.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X