For Quick Alerts
  ALLOW NOTIFICATIONS  
  For Daily Alerts

  'ಸೆಪ್ಟೆಂಬರ್ 18....ಇದು ನಮ್ಮ ಹಬ್ಬ': ಕಿಚ್ಚ ಸುದೀಪ್

  |

  ಡಾ ವಿಷ್ಣುವರ್ಧನ್ ಅವರಂದ್ರೆ ಕಿಚ್ಚ ಸುದೀಪ್ ಅವರಿಗೆ ಮೊದಲಿನಿಂದಲೂ ಪ್ರೀತಿ, ಅಭಿಮಾನಿ ಹಾಗೂ ಬಹಳ ಗೌರವವಿದೆ ಎನ್ನುವುದು ಅವರೇ ಹಲವು ಸಲ ಹೇಳಿಕೊಂಡಿದ್ದಾರೆ. ಅದಕ್ಕು ಹಲವು ಕಾರ್ಯಕ್ರಮಗಳಲ್ಲಿ ಸಹ ಸಾಬೀತಾಗಿದೆ.

  ಇಂದು ವಿಷ್ಣುವರ್ಧನ್ ಅವರ 70ನೇ ವರ್ಷದ ಹುಟ್ಟುಹಬ್ಬ. ವಿಷ್ಣುದಾದಾ ಬರ್ತಡೇ ಪ್ರಯುಕ್ತ ಕಿಚ್ಚ ಸುದೀಪ್ ಕಾಮನ್ ಡಿಪಿಯೊಂದನ್ನು ಬಿಡುಗಡೆ ಮಾಡಿದ್ದರು.

  ವಿಷ್ಣುದಾದಾ ಹುಟ್ಟುಹಬ್ಬಕ್ಕೆ ಸಿಎಂ ಸೇರಿ ಸ್ಯಾಂಡಲ್‌ವುಡ್ ಸ್ಟಾರ್ಸ್ ಶುಭಾಶಯವಿಷ್ಣುದಾದಾ ಹುಟ್ಟುಹಬ್ಬಕ್ಕೆ ಸಿಎಂ ಸೇರಿ ಸ್ಯಾಂಡಲ್‌ವುಡ್ ಸ್ಟಾರ್ಸ್ ಶುಭಾಶಯ

  ಬಳಿಕ ಟ್ವಿಟ್ಟರ್‌ನಲ್ಲಿ ಡಿಪಿ ಹಂಚಿಕೊಂಡಿದ್ದ ಸುದೀಪ್ ''ಅವರನ್ನು ಭೇಟಿ ಮಾಡಲು ಸಮಯದ ಆಶೀರ್ವಾದವಿತ್ತು. ಅವರೊಂದಿಗೆ ಕೆಲಸ ಮಾಡಲು ಸಿನಿಮಾದ ಆಶೀರ್ವಾದವಿತ್ತು. ಎಲ್ಲಕ್ಕಿಂತ ದೊಡ್ಡ ಆಶೀರ್ವಾದ ಅವರು ನನ್ನನ್ನು ನನ್ನ ಹೆಸರಿಂದ ಗುರುತಿಸುತ್ತಿದ್ದರು. ನನ್ನ IDOನ CDP ಬಿಡುಗಡೆ ನನಗೆ ಸಿಕ್ಕ ಭಾಗ್ಯ. ಎಂದಿಗೂ ಅವರ ಅಭಿಮಾನಿ'' ಎಂದು ಸುದೀಪ್ ಹೇಳಿದ್ದರು.

  ನನ್ನ ನಂಬಿ ಸರ್ಕಾರ ದೊಡ್ಡ ಜವಾಬ್ದಾರಿ ಕೊಟ್ಟಿದೆ | Shruthi Krishna | Filmibeat Kannada

  ಇದೀಗ, ಸಾಹಸಸಿಂಹ ಜನುಮದಿನಕ್ಕೆ ಶುಭಕೋರಿರುವ ಸುದೀಪ್ ''ಸೆಪ್ಟೆಂಬರ್ 18, ಇದು ನಮ್ಮ ಹಬ್ಬ'' ಎಂದಿದ್ದಾರೆ. ''ನಮ್ಮ ಪ್ರೀತಿಯ ಲೆಜೆಂಡ್‌ನ ಆರಾಧಿಸುವ, ಹೆಚ್ಚು ಇಷ್ಟಪಡುವ ಅಭಿಮಾನಿಗಳಿಗೆ ಈ ದಿನ ಮೀಸಲು. ಅವರ ಜೀವನ ಮತ್ತು ವ್ಯಕ್ತಿತ್ವವನ್ನು ನಾನು ಅನುಕರಿಸುತ್ತೇನೆ, ಇದು ಶಾಶ್ವತವಾಗಿ ಉಳಿಯುವಂತೆ ಮಾಡುತ್ತದೆ. ಈ ಮೊದಲೇ ಹೇಳಿದಂತೆ ಇದು ನಮ್ಮ ದಿನ, ಬನ್ನಿ ಆಚರಿಸೋಣ. ಹುಟ್ಟುಹಬ್ಬದ ಶುಭಾಶಯಗಳು'' ಎಂದಿದ್ದಾರೆ.

  English summary
  Kiccha Sudeep take to Twitter to remember Late Dr. Vishnuvardhan on birthday.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X