For Quick Alerts
  ALLOW NOTIFICATIONS  
  For Daily Alerts

  ರೈತರ ಹೋರಾಟಕ್ಕೆ ಜೈಕಾರ ಹಾಕಿದ ಕಿಚ್ಚ ಸುದೀಪ್

  By Harshitha
  |

  'ಅನ್ನದಾತರಿಗೆ ಅನ್ನದಾತ' ಅನ್ನುವ ಬಿರುದು ಕಿಚ್ಚ ಸುದೀಪ್ ಅವರಿಗೆ ತಮ್ಮ ಹುಟ್ಟುಹಬ್ಬದ ಪ್ರಯುಕ್ತ ನಿನ್ನೆಯಷ್ಟೇ ಸಿಕ್ಕಿತ್ತು. ಇವತ್ತು ಖುದ್ದು ಅನ್ನದಾತರಿಗಾಗಿ ಕಿಚ್ಚ ಸುದೀಪ್ ಬೀದಿಗಿಳಿದು ಪ್ರತಿಭಟನೆ ಮಾಡಿದರು.

  ಕನ್ನಡ ಚಿತ್ರರಂಗದಲ್ಲಿ ಅನೇಕ ನಿರ್ಮಾಪಕರಿಗೆ ಸುದೀಪ್ ಸಹಾಯ ಮಾಡಿದ್ದಾರೆ. ಕಷ್ಟದಲ್ಲಿದ್ದವರಿಗೆ ಆಪತ್ಭಾಂಧವರಾಗಿದ್ದಾರೆ. ಆದ್ರೆ, ಸುದೀಪ್ ಸಹಾಯ ಮನೋಭಾವ ಚಿತ್ರರಂಗಕ್ಕೆ ಮಾತ್ರ ಸೀಮಿತವಾಗಿಲ್ಲ. ನೀರಿಗಾಗಿ ರಾಜ್ಯಾದ್ಯಂತ ರೈತರು ನಡೆಸುತ್ತಿರುವ ಪ್ರತಿಭಟನೆಗೆ ಸುದೀಪ್ ಸಾಥ್ ನೀಡಿದ್ದಾರೆ.

  ಮಹದಾಯಿ-ಮಲಪ್ರಭ ನದಿ ಜೋಡಣೆಗೆ ಆಗ್ರಹಿಸಿ ರೈತರು ಗದಗ ಜಿಲ್ಲೆಯ ನರಗುಂದದಲ್ಲಿ ನಡೆಸುತ್ತಿರುವ ಹೋರಾಟ ಇಂದು 50ನೇ ದಿನಕ್ಕೆ ಕಾಲಿಟ್ಟಿದೆ. ಇದಕ್ಕಾಗಿ ಪ್ರತಿಭಟನೆಯಲ್ಲಿ ಇಂದು ಕಿಚ್ಚ ಸುದೀಪ್ ಭಾಗವಹಿಸಿದರು. ['ಅನ್ನದಾತರ ಅನ್ನದಾತ' ಅಂತೆ ಕಿಚ್ಚ ಸುದೀಪ್.!]

  ''ಊಟವಿಲ್ಲದೇ ಇದ್ದರೂ ಬದುಕಬಹುದು. ಆದ್ರೆ, ನೀರಿಲ್ಲದೇ ಬದುಕಲು ಸಾಧ್ಯವಿಲ್ಲ. ಸರ್ಕಾರ ಆದಷ್ಟು ಬೇಗ ಈ ಬಗ್ಗೆ ಕ್ರಮ ಕೈಗೊಳ್ಳಬೇಕು'' ಅಂತ ರೈತರ ಆಗ್ರಹಕ್ಕೆ ಕಿಚ್ಚ ಸುದೀಪ್ ದನಿಗೂಡಿಸಿದರು.

  ಸದಾ ಶೂಟಿಂಗ್, ಮೇಕಪ್, ಪ್ಯಾಕಪ್ ಅಂತ ತಮ್ಮದೇ ಬಣ್ಣದ ಲೋಕದಲ್ಲಿ ಬಿಜಿಯಾಗಿರುವ ನಟರ ಮಧ್ಯೆ ರೈತರ ಕೂಗಿಗೆ ದನಿ ಸೇರಿಸಿರುವ ಕಿಚ್ಚ ಸುದೀಪ್ ಕೊಂಚ ವಿಭಿನ್ನ ಅಲ್ಲವೇ.?

  English summary
  Kannada Actor Sudeep has taken part in Farmers protest which is happening in Naragund, Gadag today (September 3rd). Speaking for the Farmers, Sudeep requested Karnataka Government to sanction Mahadayi-Malaprabha project.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X