For Quick Alerts
  ALLOW NOTIFICATIONS  
  For Daily Alerts

  ಶಿವಣ್ಣನ 'ಮಾಸ್ ಲೀಡರ್' ನೋಡಿ ಮೆಚ್ಚಿಕೊಂಡ ಕಿಚ್ಚ ಏನಂದ್ರು?

  By Bharath Kumar
  |

  ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ 'ಮಾಸ್ ಲೀಡರ್' ಸಿನಿಮಾ ಇದೇ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಆದ್ರೆ, ಬಿಡುಗಡೆಗೂ ಮುಂಚೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ 'ಮಾಸ್ ಲೀಡರ್' ಸಿನಿಮಾ ನೋಡಿ ಕಣ್ತುಂಬಿಕೊಂಡಿದ್ದಾರೆ.

  ಬುಧವಾರ (ಆಗಸ್ಟ್ 9) ಸುದೀಪ್ ಅವರ ಮನೆಯಲ್ಲಿ 'ಮಾಸ್ ಲೀಡರ್' ಚಿತ್ರದ ವಿಶೇಷ ಪ್ರದರ್ಶನವನ್ನ ಏರ್ಪಡಿಸಲಾಗಿತ್ತು. ನಟ ಸುದೀಪ್, ಶಿವರಾಜ್ ಕುಮಾರ್, ಗೀತಾ ಶಿವರಾಜ್ ಕುಮಾರ್ ಹಾಗೂ ಚಿತ್ರದ ನಿರ್ದೇಶಕ, ನಿರ್ಮಾಪಕರು ಭಾಗಿಯಾಗಿದ್ದರು.

  ಮೊದಲ ಪ್ರೇಕ್ಷಕನಾಗಿ 'ಮಾಸ್ ಲೀಡರ್' ದರ್ಶನ ಪಡೆಯಲಿರುವ ಸುದೀಪ್

  ಇದೇ ಮೊದಲ ಬಾರಿಗೆ ಸುದೀಪ್ ಅವರ ಮನೆಯಲ್ಲಿರುವ ಚಿತ್ರಮಂದಿರದಲ್ಲಿ ಶಿವಣ್ಣನ ಚಿತ್ರ ನೋಡಿದ ಕಿಚ್ಚ ಫುಲ್ ಖುಷಿ ಆದರು. ಇನ್ನು ಸಿನಿಮಾ ನೋಡಿ ಚಿತ್ರದ ಬಗ್ಗೆ ಮಾತನಾಡಿದರು. ಹಾಗಿದ್ರೆ, ಮಾಸ್ ಲೀಡರ್ ಬಗ್ಗೆ ಸುದೀಪ್ ಏನಂದ್ರು? ಮುಂದೆ ಓದಿ....

  ಶಿವಣ್ಣ ಗೆಟಪ್ ತುಂಬಾ ಇಷ್ಟ ಆಯ್ತು

  ಶಿವಣ್ಣ ಗೆಟಪ್ ತುಂಬಾ ಇಷ್ಟ ಆಯ್ತು

  ''ನನಗೆ ಶಿವಣ್ಣ ಅವರ ಗೆಟಪ್ ಇಷ್ಟವಾಯಿತು. ನಾವು ಲಂಡನ್ ನಲ್ಲಿದ್ದಾಗ ಸಿನಿಮಾ ರಿಲೀಸ್ ಬಗ್ಗೆ ಮಾತನಾಡುತ್ತಿದ್ದರು. ನಾನು ಆಗ ಸಾಮಾನ್ಯವಾಗಿ ಕೇಳಿದ್ದೆ ಚಿತ್ರದ ಮೊದಲ ಕಾಪಿ ಯಾವಾಗ ಬರುತ್ತೆ ಅಂತ. ಈಗ ನೋಡೋ ತರ ಆಯ್ತು'' - ಸುದೀಪ್, ನಟ

  ಶಿವಣ್ಣನ 'ಮಾಸ್ ಲೀಡರ್' ನೋಡಲು ಈ 6 ಕಾರಣಗಳು ಸಾಕು!

  ಸಿನಿಮಾ ನೋಡಲು ಗೀತಕ್ಕ ಕಾರಣ

  ಸಿನಿಮಾ ನೋಡಲು ಗೀತಕ್ಕ ಕಾರಣ

  ''ಮಾಸ್ ಲೀಡರ್ ಸಿನಿಮಾ ಇಂದು ನೋಡುವುದಕ್ಕೆ ನಾನು ಅಥವಾ ಶಿವಣ್ಣ ಕಾರಣವಲ್ಲ. ಗೀತಕ್ಕ ಇದಕ್ಕೆ ಕಾರಣ. ನಾವು ಅವತ್ತು ಮಾತನಾಡಿದ್ದನ್ನ ಫಾಲೋ ಅಪ್ ಮಾಡಿ ಇಂದು ಇಂತಹ ಅವಕಾಶ ಮಾಡಿಕೊಟ್ಟಿದ್ದಾರೆ'' - ಸುದೀಪ್, ನಟ

  'ಮಾಸ್ ಲೀಡರ್'ಗಾಗಿ ಒಂದಾದ ಸ್ಯಾಂಡಲ್ ವುಡ್ ತಾರೆಯರು

  ಶಿವಣ್ಣನ ಮೊದಲ ಚಿತ್ರ ಪ್ರದರ್ಶನ

  ಶಿವಣ್ಣನ ಮೊದಲ ಚಿತ್ರ ಪ್ರದರ್ಶನ

  ''ಸಾಮಾನ್ಯವಾಗಿ ನನ್ನ ಚಿತ್ರಮಂದಿರದಲ್ಲಿ ಬೇರೆ ಸಿನಿಮಾ ನೋಡಿದ್ದೀವಿ, ನನ್ನ ಸಿನಿಮಾ ನೋಡಿದ್ದೀವಿ. ಶಿವಣ್ಣ ಅವರದ್ದು ಮೊದಲ ಸಲ ಪ್ರದರ್ಶನ ಮಾಡಿದ್ದು, ಶಿವಣ್ಣ ಹೇಳಿದ್ರು ಚೆನ್ನಾಗಿದೆ ಅಂತ'' - ಸುದೀಪ್, ನಟ

  ಸಾಮಾಜಿಕ ಜವಾಬ್ದಾರಿಯುತ ಚಿತ್ರ

  ಸಾಮಾಜಿಕ ಜವಾಬ್ದಾರಿಯುತ ಚಿತ್ರ

  ''ಇದೊಂದು ಸಾಮಾಜಿಕ ಸಂದೇಶ ಕುರಿತಾದ ಸಿನಿಮಾ. ಇದು ಸಾಮಾಜಿಕ ಸಂದೇಶ ಎನ್ನುವುದಕ್ಕಿಂತ ಸಾಮಾಜಿಕ ಜವಾಬ್ದಾರಿ ಎನ್ನಬಹುದು. ಇದನ್ನ ತಲೆಯಲ್ಲಿಟ್ಟುಕೊಂಡು ಸಿನಿಮಾ ಮಾಡಿದ್ದಾರೆ. ನಿರ್ಮಾಪಕರು ಮತ್ತು ನಿರ್ದೇಶಕರು ಒಳ್ಳೆ ಕೆಲಸ ಮಾಡಿದ್ದಾರೆ'' - ಸುದೀಪ್, ನಟ

  ತುಂಬಾ ಖುಷಿ ಆಯ್ತು

  ತುಂಬಾ ಖುಷಿ ಆಯ್ತು

  ''ಇಂತಹ ಚಿತ್ರ ಇಲ್ಲೊಂದು ಪ್ರದರ್ಶನ ಮಾಡಿದ್ರು. ತುಂಬಾ ಖುಷಿ ಆಯ್ತು'' ಎಂದು ಮಾಸ್ ಲೀಡರ್ ಚಿತ್ರ ನೋಡಿದ ನಂತರ ಸುದೀಪ್ ತಮ್ಮ ಅನುಭವ ಹಂಚಿಕೊಂಡರು.

  English summary
  Kannada Actor Kiccha Sudeep Watch Shiva rajkumar starrer Mass Leader Movie Along with Shiva rajkumar And Geetha Shivarajkumar at his home.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X