»   » 'ಫೇಸ್ ಬುಕ್ ಲೈವ್'ನಲ್ಲಿ ವಿಲನ್ ಬಗ್ಗೆ ಎಕ್ಸ್ ಕ್ಲೂಸಿವ್ ವಿಷ್ಯ ಕೊಟ್ಟ ಸುದೀಪ್

'ಫೇಸ್ ಬುಕ್ ಲೈವ್'ನಲ್ಲಿ ವಿಲನ್ ಬಗ್ಗೆ ಎಕ್ಸ್ ಕ್ಲೂಸಿವ್ ವಿಷ್ಯ ಕೊಟ್ಟ ಸುದೀಪ್

Posted By:
Subscribe to Filmibeat Kannada
Kiccha Sudeep First Time Facebook Live | Filmibeat Kannada

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಮತ್ತು ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಅಭಿನಯದ 'ದಿ ವಿಲನ್' ಚಿತ್ರದ ಮೋಷನ್ ಪೋಸ್ಟರ್ ಸುದೀಪ್ ಅವರ ಹುಟ್ಟುಹಬ್ಬದ ವಿಶೇಷವಾಗಿ ಬಿಡುಗಡೆಯಾಗಿದೆ.

ಚಿತ್ರದಲ್ಲಿ ಸುದೀಪ್ ಪಾತ್ರವೇನು, ಶಿವಣ್ಣನ ಪಾತ್ರವೇನು ಎಂಬುದನ್ನ ಬಿಟ್ಟುಕೊಡದೆ ನಿರ್ದೇಶಕ ಪ್ರೇಮ್ ಪ್ರತಿ ಹಂತದಲ್ಲೂ ನಿರೀಕ್ಷೆಯನ್ನ ಹೆಚ್ಚಿಸುತ್ತಲೇ ಇದ್ದಾರೆ. ಆದ್ರೆ, ಸುದೀಪ್ ಪಾತ್ರದ ಬಗ್ಗೆ ಹೊಸದೊಂದು ವಿಷ್ಯವನ್ನ ಫೇಸ್ ಲೈವ್ ನಲ್ಲಿ ಬಿಟ್ಟುಕೊಟ್ಟಿದ್ದಾರೆ.

ಹೌದು, 'ದಿ ವಿಲನ್' ಮೋಷನ್ ಪೋಸ್ಟರ್ ಬಿಡುಗಡೆಯ ಸಂದರ್ಭದಲ್ಲಿ ಫೇಸ್ ಬುಕ್ ಗೆ ಬಂದಿದ್ದ ಸುದೀಪ್ ತಮ್ಮ ಪಾತ್ರದ ಬಗ್ಗೆ ಎಕ್ಸ್ ಕ್ಲೂಸಿವ್ ಸುದ್ದಿಯನ್ನ ಕೊಟ್ಟರು. ಏನದು? ಮುಂದೆ ಓದಿ.....

ಮೊದಲ ಸಲ ಫೇಸ್ ಲೈವ್

''ನಾನು ಸ್ವಲ್ಪ ದೂರವಿದ್ದೆ. ಕ್ಷಮಿಸಿ ಎಲ್ಲರೂ. ಯಾಕಂದ್ರೆ, ತುಂಬ ಜನ ನಿರಾಶೆ ಆಗಿದ್ದಾರೆ. ನಿರಾಶೆ ಮಾಡುವುದು ನನ್ನ ಉದ್ದೇಶವಲ್ಲ. ನಾನು ಬರ್ತ್ ಡೇ ಆಚರಿಸಿಕೊಳ್ಳದಿರಲು ನಿಜವಾಗಲೂ ಒಂದು ಬಲವಾದ ಕಾರಣವಿದೆ. ಅದನ್ನ ನಿಮಗೆ ಹೇಳ್ತಿನಿ. ದಿ ವಿಲನ್ ಮೋಷನ್ ಪೋಸ್ಟರ್ ಬಿಡುಗಡೆಯಾಗಿದೆ. ಒಳ್ಳೆ ಅಭಿಪ್ರಾಯ ಬರ್ತಿದೆ'' - ಸುದೀಪ್, ನಟ

ಸುದೀಪ್ ಬರ್ತ್ ಡೇಗೆ 'ಕಿರಿಕ್' ರಶ್ಮಿಕಾ ಹೇಗೆ ವಿಶ್ ಮಾಡಿದ್ರು ನೋಡಿ

ಶಿವಣ್ಣಗೆ ಥ್ಯಾಂಕ್ಸ್

ಶಿವಣ್ಣನಿಗೆ ಥ್ಯಾಂಕ್ಸ್. ಯಾಕಂದ್ರೆ, ಅವರ ಜೊತೆ ಸಿನಿಮಾ ಮಾಡುವ ಅವಕಾಶ ಸಿಕ್ತು. ನಿಮ್ಮ ಜೊತೆ ಈ ಸಿನಿಮಾ ಮಾಡಿದ್ದು ಅದ್ಭುತ. ಸೆಟ್ ನಲ್ಲೂ ಅಷ್ಟೇ ಸೂಪರ್'' - ಸುದೀಪ್, ನಟ

ಲವ್ ಯೂ ಪ್ರೇಮ್

''ನಿರ್ದೇಶಕ ಪ್ರೇಮ್ ತುಂಬಾ ಅದ್ಭುತವಾಗಿ ಸಿನಿಮಾ ಮಾಡಿದ್ದಾರೆ. ತುಂಬಾ ಫ್ಯಾಶನ್ ಹೊಂದಿರುವ ನಿರ್ದೇಶಕ. ಮೋಷನ್ ಪೋಸ್ಟರ್ ನೋಡಿ ತುಂಬ ಖುಷಿ ಆಯ್ತು'' - ಸುದೀಪ್, ನಟ

ಕಿಚ್ಚ ಸುದೀಪ್ ಹುಟ್ಟುಹಬ್ಬಕ್ಕೆ ರಿಲೀಸ್ ಆದ 'ದಿ ವಿಲನ್' ಮೋಷನ್ ಪೋಸ್ಟರ್ ನೋಡಿ!

ರಿಲೀಸ್ ಆಗಿರುವುದು ಒಂದೇ ಗೆಟಪ್....ಅಂದ್ರೆ,,,,

''ಪ್ರೇಮ್ ರಿಲೀಸ್ ಮಾಡಿರುವುದು ವಿಲನ್ ಚಿತ್ರದಲ್ಲಿ ನನ್ನದು ಒಂದೇ ಗೆಟಪ್. ಆದ್ರೆ, ಈ ಚಿತ್ರದಲ್ಲಿ ನನ್ನದು ಮೂರು ವಿಭಿನ್ನ ಗೆಟಪ್ ಇದೆ. ಅದನ್ನ ಪ್ರೇಮ್ ಬಿಟ್ಟಿಲ್ಲ. ಇನ್ನೊಂದು ಅತಿ ಶೀಘ್ರದಲ್ಲೇ ನಿಮ್ಮ ಮುಂದೆ ಬರುತ್ತೆ'' - ಸುದೀಪ್, ನಟ

ಅರ್ಜುನ್ ಜನ್ಯ ಸಂಗೀತ ಸೂಪರ್

''ದಿ ವಿಲನ್' ಚಿತ್ರಕ್ಕೆ ಅರ್ಜುನ್ ಜನ್ಯ ಅದ್ಭುತವಾದ ಸಂಗೀತ ನೀಡಿದ್ದಾರೆ. ನಾನು ಕೂಡ ಎರಡು ಸಾಲು ಹಾಡು ಕೇಳಿದೆ. ತುಂಬಾ ಇಷ್ಟವಾಯ್ತು'' - ಸುದೀಪ್, ನಟ

ಸುದೀಪ್ ಫೇಸ್ ಬುಕ್ ಲೈವ್ ನಲ್ಲಿ ಮಾತನಾಡಿದ ವಿಡಿಯೋ ಇಲ್ಲಿದೆ ನೋಡಿ

English summary
Kannada Actor, Kiccha Sudeep Talk About The Villain Movie Motion Poster on Facebook Live

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada