'ಕಬ್ಜ'ದ ಭೂಗತ ಜಗತ್ತಿಗೆ ಭಾರ್ಗವ್ ಬಕ್ಷಿಯಾಗಿ ಸುದೀಪ್ ಎಂಟ್ರಿ

ಉಪೇಂದ್ರ ಮತ್ತು ಸುದೀಪ್ ಮತ್ತೆ ಒಂದಾಗುತ್ತಿದ್ದಾರೆ. 'ಮುಕುಂದ-ಮುರಾರಿ' ಸಿನಿಮಾದ ಬಳಿಕ ಈ ಜೋಡಿ ಮತ್ತೆ ಒಟ್ಟಿಗೆ ತೆರೆ ಹಂಚಿಕೊಳ್ಳುತ್ತಿದೆ.

Recommended Video

ರಾಜಮೌಳಿ ತಂದೆ ಗರಡಿಯಲ್ಲಿ ತಯಾರಾಗಿದೆ 'ಕಬ್ಜ'ದ ಕಥೆ | Filmibeat Kannada

ಹೌದು, ಆರ್.ಚಂದ್ರು ನಿರ್ದೆಶಿಸುತ್ತಿರುವ ಉಪೇಂದ್ರ ಮುಖ್ಯ ಭೂಮಿಕೆಯಲ್ಲಿರುವ 'ಕಬ್ಜ' ಸಿನಿಮಾದಲ್ಲಿ ಸುದೀಪ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸುದೀಪ್ ಅವರ ಪಾತ್ರದ ಟೀಸರ್ ಅನ್ನು ಇಂದು ಚಿತ್ರತಂಡವು ಬಿಡುಗಡೆ ಮಾಡಿದೆ.

'ಕಬ್ಜ' ಸಿನಿಮಾದಲ್ಲಿ 70-80 ರ ದಶಕದ ಅಂಡರ್‌ವರ್ಲ್ಡ್‌ ಕತೆಯನ್ನು ತೆರೆ ಮೇಲೆ ಬಿಚ್ಚಿಡಲಿದ್ದು, ಸಿನಿಮಾದಲ್ಲಿ ಸುದೀಪ್ ಅವರು ಭಾರ್ಗವ್ ಬಕ್ಷಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Sudeep To Act In Kabzaa Movie As Bhargav Bakshi Along With Upendra

ಇಂದು ಚಿತ್ರತಂಡವು ಸುದೀಪ್ ಪಾತ್ರದ ಟೀಸರ್ ಬಿಡುಗಡೆ ಆಗಿದ್ದು, ಟೀಸರ್‌ನಲ್ಲಿ ಸುದೀಪ್ ಚಿತ್ರದ ಜೊತೆಗೆ ಭಾರ್ಗವ್ ಬಕ್ಷಿ, 1947 to 1986 ಎಂದಿದೆ. 70-80 ರ ದಶಕದ ಅಂಡರ್ವರ್ಡ್ ಡಾನ್ ಆಗಿ ನಟಿಸಲಿದ್ದಾರೆ ಸುದೀಪ್.

ಈ ಸಿನಿಮಾವು ಎರಡು ಭಾಗಗಳಲ್ಲಿ ತಯಾರಾಗುತ್ತಿದ್ದು, ಮೊದಲ ಭಾಗದ ಚಿತ್ರೀಕರಣ ಈಗಾಗಲೇ ನಡೆಯುತ್ತಿದೆ. ಆರ್.ಚಂದ್ರು ನಿರ್ದೇಶಿಸುತ್ತಿರುವ ಈ ಸಿನಿಮಾದ ಕತೆಯನ್ನು ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್ ಡೆವಲಪ್ ಮಾಡಿ ಕೊಟ್ಟಿದ್ದಾರೆ. ಸಿನಿಮಾಕ್ಕೆ ಸಂಗೀತ ನೀಡಿರುವುದು ರವಿ ಬಸ್ರೂರು.

ಸಿನಿಮಾದ ಹಲವು ಪೋಸ್ಟರ್‌ಗಳು ಈಗಾಗಲೇ ಬಿಡುಗಡೆ ಆಗಿದ್ದು, ರೆಟ್ರೊ ಲುಕ್‌ನಲ್ಲಿ ಉಪೇಂದ್ರ ಮಿಂಚುತ್ತಿದ್ದಾರೆ. ಪಕ್ಕಾ ಅಂಡರ್ವಲ್ಡ್ ಸಿನಿಮಾ ಇದಾಗುವ ನಿರೀಕ್ಷೆಯನ್ನು ಚಿತ್ರತಂಡ ಇರಿಸಿಕೊಂಡಿದೆ.

ಇನ್ನು ನಟ ಸುದೀಪ್ ಈಗಷ್ಟೆ 'ಫ್ಯಾಂಟಮ್' ಸಿನಿಮಾದ ಚಿತ್ರೀಕರಣ ಮುಗಿಸಿದ್ದಾರೆ. 'ಅಶ್ವತ್ಥಾಮ' ಸಿನಿಮಾಕ್ಕಾಗಿ ಚಿತ್ರೀಕರಣವನ್ನು ಪ್ರಾರಂಭಿಸಲಿದ್ದಾರೆ. ಇದರ ನಡುವೆ ಬಿಗ್‌ಬಾಸ್ ಶೋ ಸಹ ನಿರೂಪಿಸಲಿದ್ದಾರೆ. ಅದು ಕೆಲವೇ ದಿನಗಳಲ್ಲಿ ಪ್ರಾರಂಭವಾಗಲಿದೆ.

More from Filmibeat

English summary
Sudeep to act in Kabzaa movie as Bhargav Bakshi along with Upendra. Movie team released teaser.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X