»   » ಚಿತ್ರಗಳು: ಕಿಚ್ಚನಿಗೆ ಎದುರಾದ ಆ, ಆರು ರೌಡಿಗಳು ಯಾರು?

ಚಿತ್ರಗಳು: ಕಿಚ್ಚನಿಗೆ ಎದುರಾದ ಆ, ಆರು ರೌಡಿಗಳು ಯಾರು?

Posted By:
Subscribe to Filmibeat Kannada

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ನಿರ್ದೇಶಕ ಎ.ಎಸ್ ರವಿಕುಮಾರ್ ಅವರ ಚಿತ್ರದಲ್ಲಿ ಕಾಣಿಸಿಕೊಂಡಿರುವ ವಿಚಾರ ನಿಮಗೆ ಗೊತ್ತೇ ಇದೆ. ಕನ್ನಡ ಹಾಗೂ ತಮಿಳು ಭಾಷೆಯಲ್ಲಿ ಮೂಡಿಬರುವ ಈ ಚಿತ್ರದ 40 ದಿನಗಳ ಶೂಟಿಂಗ್ ಈಗಾಗಲೇ ಮುಗಿದಿದ್ದು, ಇನ್ನು 6೦ ದಿನಗಳ ಶೂಟಿಂಗ್ ಬಾಕಿ ಇದೆ.

ಕನ್ನಡದಲ್ಲಿ ಇನ್ನೂ ಹೆಸರಿಡದ ಚಿತ್ರ ತಮಿಳಿನಲ್ಲಿ 'ಮುಡಿಂಜ ಇವನ ಪುಡಿ' ಎಂದು ಟೈಟಲ್ ಪಕ್ಕಾ ಆಗಿದೆ. ಇದೀಗ ಈ ಚಿತ್ರದ ಲೇಟೆಸ್ಟ್ ಮಾಹಿತಿ ಪ್ರಕಾರ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಈ ಚಿತ್ರದಲ್ಲಿ ಒಬ್ಬಿಬ್ಬರಲ್ಲ ಬರೋಬ್ಬರಿ 6 ಮಂದಿ ವಿಲನ್ ಗಳ ಜೊತೆ ಫೈಟ್ ಮಾಡಲಿದ್ದಾರಂತೆ.[ಸುದೀಪ್ ಚಿತ್ರಕ್ಕೆ ಇನ್ನು 60 ದಿನಗಳ ಶೂಟಿಂಗ್ ಬಾಕಿ!]

ಈ ಚಿತ್ರದ ಮತ್ತೊಂದು ವಿಶೇಷ ಏನಪ್ಪಾ ಅಂದ್ರೆ, ಇಲ್ಲಿ ಮುಖ್ಯ ಪಾತ್ರ ವಹಿಸುವ ಸುದೀಪ್ ಅವರಿಗೆ ಇರುವಷ್ಟೇ ಪ್ರಾಮುಖ್ಯತೆ ನೆಗೆಟಿವ್ ಪಾತ್ರ ಮಾಡುವವರಿಗೂ ಇದೆಯಂತೆ. ಈಗಾಗಲೇ ಚಿತ್ರದ ತಮಿಳು ವರ್ಷನ್ ಗೆ ಟೈಟಲ್ ಪಕ್ಕಾ ಆಗಿದೆ. ಆದರೆ ಕನ್ನಡ ವರ್ಷನ್ ಗೆ ಈ ಮೊದಲು 'ಕೋಟಿಗೊಬ್ಬ 2' ಟೈಟಲ್ ಅಂತ ಸುದ್ದಿಯಾಗಿದ್ದರೂ ಚಿತ್ರತಂಡ ಇದನ್ನು ಅಲ್ಲಗಳೆದಿದೆ.

ಇದೇ ಮೊದಲ ಬಾರಿಗೆ ನಟಿ ನಿತ್ಯಾ ಮೆನನ್ ಅವರೊಂದಿಗೆ ಸುದೀಪ್ ಅವರು ತೆರೆ ಹಂಚಿಕೊಳ್ಳುತ್ತಿದ್ದು, ರಾಜಧಾನಿ ಬೆಂಗಳೂರು ಹಾಗೂ ಚೆನ್ನೈ ಸೇರಿದಂತೆ ವಿದೇಶದಲ್ಲಿ ಚಿತ್ರದ ಚಿತ್ರೀಕರಣ ನಡೆಯಲಿದೆ. ಪ್ರಸ್ತುತ ಚಿತ್ರತಂಡ ಚೆನ್ನೈನಲ್ಲಿ ಶೂಟಿಂಗ್ ನಲ್ಲಿ ಬ್ಯುಸಿಯಾಗಿದೆ.[ಕಿಚ್ಚನ 'ಹೆಬ್ಬುಲಿ'ಗೆ, ದೇವಿಶ್ರೀ ಬದಲು ಅರ್ಜುನ್ ಜನ್ಯ ಮ್ಯೂಸಿಕ್]

ಅಂದಹಾಗೆ ಕಿಚ್ಚ ಸುದೀಪ್ ಗೆ ಎದುರಾಗಿ ಫೈಟ್ ಮಾಡಲಿರುವ ಆ ಆರು ಘಟಾನುಘಟಿಗಳು ಯಾರು ಅನ್ನೋದನ್ನ ನೋಡಲು ಕೆಳಗಿನ ಸ್ಲೈಡ್ ಗಳನ್ನು ಕ್ಲಿಕ್ಕಿಸುತ್ತಾ ಹೋಗಿ...

ಬಹುಮುಖ ಪ್ರತಿಭೆ ಪ್ರಕಾಶ್ ರಾಜ್

ಚಿತ್ರರಂಗದಲ್ಲಿ ಮಲ್ಟಿ ಟ್ಯಾಲೆಂಟೆಡ್ ನಟ ಪ್ರಕಾಶ್ ರಾಜ್ ಅವರು ತಮ್ಮ ನೆಗೆಟಿವ್ ಪಾತ್ರದ ಮೂಲಕ ಪ್ರೇಕ್ಷಕರ ಮನಗೆದ್ದಿದ್ದು, ಮೂಲಗಳ ಪ್ರಕಾರ ಕೆ.ಎಸ್ ರವಿಕುಮಾರ್ ಚಿತ್ರದಲ್ಲಿ ಸುದೀಪ್ ಅವರಿಗೆ ವಿಲನ್ ಆಗಿ ಕಾಡಲಿದ್ದಾರೆ.['ಪುಲಿ'ಯಲ್ಲಿ ಜಲತರಂಗನಾಗಿ ಕಿಚ್ಚನ ದರ್ಬಾರ್ ನೋಡಿ!]

ಖ್ಯಾತ ಖಳನಟ ರವಿಶಂಕರ್

'ಕೆಂಪೇಗೌಡ' ಚಿತ್ರದಲ್ಲಿ ಕಿಚ್ಚ ಸುದೀಪ್ ಅವರೊಂದಿಗೆ ಆರ್ಮುಂಗಮ್ ನಾಗಿ ಇಡೀ ಗಾಂಧಿನಗರದಲ್ಲಿ ಆರ್ಭಟಿಸಿದ ಖ್ಯಾತ ಖಳನಟ ರವಿಶಂಕರ್ ಅವರು ಮತ್ತೆ ಸುದೀಪ್ ಅವರೊಂದಿಗೆ ಮುಖಾಮುಖಿಯಾಗಲಿದ್ದಾರೆ.

ನಟ ಅವಿನಾಶ್

ಯಾವ ಪಾತ್ರಕ್ಕೂ ಸೈ ಎನ್ನುವ ಕನ್ನಡ ನಟ ಅವಿನಾಶ್ ಅವರು ನಿರ್ದೇಶ ಕೆ.ಎಸ್ ರವಿಕುಮಾರ್ ಅವರ ಚಿತ್ರದಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರಿಗೆ ಎದುರಾಗಲಿದ್ದಾರೆ.

ನಟ ಮುಖೇಶ್ ತಿವಾರಿ

ನಿರ್ಮಾಪಕ ಸೂರಪ್ಪ ಬಾಬು ಬಂಡವಾಳ ಹೂಡಿರುವ ನಿರ್ದೇಶಕ ಕೆ.ಎಸ್ ರವಿಕುಮಾರ್ ಅವರ 'ಮುಡಿಂಜ ಇವನ ಪುಡಿ' ಚಿತ್ರದಲ್ಲಿ ಸುದೀಪ್ ಅವರಿಗೆ ಎದುರಾಗಲಿರುವ ವಿಲನ್ ಗಳಲ್ಲಿ ಮುಖೇಶ್ ತಿವಾರಿ ಕೂಡ ಒಬ್ಬರು.

ಬಹುಭಾಷಾ ನಟ ನೇಸರ್

ತಮಿಳು ಹಾಗು ತೆಲುಗಿನ ಖ್ಯಾತ ನಟ ನೇಸರ್ ಅವರು ಸುದೀಪ್ ಅವರ ಬಚ್ಚನ್ ಚಿತ್ರದಲ್ಲಿ ಕಿಚ್ಚನಿಗೆ ಎದುರಾಗಿ ಮಿಂಚಿದ್ದರು. ಇದೀಗ ಮತ್ತೆ ರವಿಕುಮಾರ್ ಅವರ ಚಿತ್ರದಲ್ಲಿ ನೇಸರ್ ಅವರು ನೆಗೆಟಿವ್ ರೋಲ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಖಳನಟ ಶರತ್ ಲೋಹಿತಾಶ್ವ

ಸ್ಯಾಂಡಲ್ ವುಡ್ ನ ರೀಲ್ ಖಳನಟ ಶರತ್ ಲೋಹಿತಾಶ್ವ ಕೂಡ ಸುದೀಪ್ ಗೆ ಎದುರಾಗಿ ವಿಲನ್ ರೋಲ್ ಮಾಡುವ ಸಾಧ್ಯತೆಯಿದೆ.

ಕಿಚ್ಚ ಸುದೀಪ್ ಜೊತೆ ಆರು ಜನರ ಜುಗಲ್ ಬಂದಿ

ಈ ಘಟನುಘಟಿಗಳೊಂದಿಗೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಫೈಟ್ ಮಾಡಲಿದ್ದಾರೆ. ಈಗಾಗಲೇ ಚಿತ್ರದ ಫಸ್ಟ್ ಹಾಫ್ ಶೂಟಿಂಗ್ ಕಂಪ್ಲೀಟ್ ಆಗಿದ್ದು, ಸೆಕೆಂಡ್ ಹಾಫ್ ಶೂಟಿಂಗ್ ನಲ್ಲಿ ಚಿತ್ರತಂಡ ಬ್ಯುಸಿಯಾಗಿದೆ.

English summary
Kannada Actor Sudeep is busy shooting for KS Ravikumar's next titled 'Mudinja Ivana Pudi'. The latest reports about the movie is, Kichcha will fight with 6 baddies in the movie!.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada