»   » ಕಿಚ್ಚ ಸುದೀಪ್ ಖಾಲಿ ಕುಂತಿಲ್ಲ ಮತ್ತೇನ್ಮಾಡ್ತಿದ್ದಾರೆ?

ಕಿಚ್ಚ ಸುದೀಪ್ ಖಾಲಿ ಕುಂತಿಲ್ಲ ಮತ್ತೇನ್ಮಾಡ್ತಿದ್ದಾರೆ?

Posted By:
Subscribe to Filmibeat Kannada

ಕಿಚ್ಚ ಸುದೀಪ್ ಮತ್ತೆ ಸಕತ್ ಬ್ಯುಸಿಯಾಗಿದ್ದಾರೆ. ಯಾಕೋ ರನ್ನ ಸಿನಿಮಾ ಸರಿಯಾ ಟೈಮಿಗೆ ರಿಲೀಸ್ ಆಗುತ್ತಿಲ್ಲ. ಆದರೇನಂತೆ, ಸುದೀಪ್ ಅಂತೂ ಖಾಲಿ ಕುಂತಿಲ್ಲ.

ಮಾಣಿಕ್ಯ ಚಿತ್ರದ ಯಶಸ್ಸಿನ ನಂತರ ಸುದೀಪ್ ಮತ್ತೆ ರಿಮೇಕ್ ಮಾಡಲು ಬಯಸಿ ರನ್ನ ನಾಗಿ ತೆರೆ ಮೇಲೆ ಬರುತ್ತಿದ್ದಾರೆ. ಸುದೀಪ್ ಬಿಡ್ರಿ ಬರೀ ರಿಮೇಕ್ ಮಾಡ್ತಾರೆ ಎಂದು ಮೂಗು ಮುರಿಯುವವರ ಮುಂದೆ ಸಾಲು ಸಾಲು ಸ್ವಮೇಕ್ ಚಿತ್ರಗಳನ್ನು ಇಟ್ಟುಕೊಂಡು ಹೆಜ್ಜೆ ಹಾಕಲು ಕಿಚ್ಚ ಸಿದ್ಧರಾಗಿದ್ದಾರೆ.[ಹೊಸ ಟ್ರೆಂಡಿಗೆ ನಾಂದಿ ಹಾಡಿದ ಕಿಚ್ಚ ಅಭಿನಯದ 'ರನ್ನ']

Sudeep To Work In Three Simultaneous Projects!

ಹಾಗೆ ನೋಡಿದರೆ ಎಷ್ಟೋ ತಿಂಗಳಾಯ್ತು ಅವರನ್ನು ಬೆಳ್ಳಿ ತೆರೆ ಮೇಲೆ ನೋಡಿ ಎಂಬ ಕೊರಗು ಅಭಿಮಾನಿಗಳಲ್ಲಿದೆ. ಈ ಕೊರಗು ನೀಗುವ ಸುದ್ದಿ ಈಗ ಬಂದಿದೆ. ಏಕ ಕಾಲಕ್ಕೆ ಹಲವು ಸಿನಿಮಾಗಳಲ್ಲಿ ಸುದೀಪ್ ತೊಡಗಿಸಿಕೊಳ್ಳುತ್ತಿದ್ದಾರೆ. [ಬಾಹುಬಲಿಯಲ್ಲಿ ಅಸ್ಲಂ ಖಾನ್ ಆಗಿ 'ಕಿಚ್ಚ' ಸುದೀಪ್]

ತೆಲುಗಿನಲ್ಲಿ ಬಾಹುಬಲಿ ಚಿತ್ರದಲ್ಲಿ ಅಸ್ಲಂ ಖಾನ್ ಆಗಿ ಮಿಂಚಿರುವ ಸುದೀಪ್ ಅವರು ತಮಿಳಿನಲ್ಲಿ ಕೆ ಎಸ್ ರವಿ ಕುಮಾರ್ ಅವರ ಚಿತ್ರದಲ್ಲೂ ನಟಿಸುತ್ತಿದ್ದಾರೆ. ಜೊತೆಗೆ ವಿಜಯ್ ಜೊತೆ ತಮಿಳಿನಲ್ಲಿ ಪುಲಿ ಚಿತ್ರ ಕೂಡಾ ರಿಲೀಸ್ ಆಗಬೇಕಿದೆ.

ಸುದೀಪ್ ಅವರು ಇದಾದ ಮೇಲೆ ಕೋಟಿಗೊಬ್ಬ 2, ಹೆಬ್ಬುಲಿ ಹಾಗೂ ಲೀಡರ್ ಚಿತ್ರಗಳು ಕ್ಯೂ ನಲ್ಲಿವೆ. ಇದರ ಜೊತೆಗೆ ನನ್ನುಸಿರೇ ಹೀರೋ ರಾಹುಲ್ ಅವರು ನಾಯಕರಾಗಿರುವ ತಮಿಳಿನ ಚಿತ್ರ ಜಿಗರ್ತಾಂಡ ಚಿತ್ರದ ರಿಮೇಕ್ ಗೆ ಕಿಚ್ಚ ಸುದೀಪ್ ಹಣ ಹೂಡುತ್ತಿದ್ದಾರೆ. ಕಿಚ್ಚ ಸುದೀಪ್ ಅಭಿಮಾನಿಗಳ ಕಣ್ಣಿಗೆ ಹಬ್ಬ ಗ್ಯಾರಂಟಿ.

English summary
Kichha Sudeep to work in three simultaneous projects! Yes, after the box office success of Manikya, Sudeep has been missing from big screens for all most an year. The actor who worked for just one movie yearly, will now start working in multiple projects in the future days, says reports.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada