»   » ಸುದೀಪ್ ರೀಮೇಕ್ ಚಿತ್ರಗಳ ಚಿದಂಬರ ರಹಸ್ಯ ಬಯಲು

ಸುದೀಪ್ ರೀಮೇಕ್ ಚಿತ್ರಗಳ ಚಿದಂಬರ ರಹಸ್ಯ ಬಯಲು

Posted By:
Subscribe to Filmibeat Kannada

''ಕಿಚ್ಚ ಸುದೀಪ್ ಬರೀ ರೀಮೇಕ್ ಚಿತ್ರಗಳನ್ನೇ ಮಾಡುತ್ತಾರೆ. ವರ್ಷಕ್ಕೆ ಒಂದೇ ಸಿನಿಮಾ ಮಾಡಿದರೂ ಅದು ರೀಮೇಕ್ ಚಿತ್ರವೇ ಆಗಿರುತ್ತೆ. ಡೈರೆಕ್ಟರ್ ಕ್ಯಾಪ್ ತೊಟ್ಟರೂ ಕೂಡ ಕಿಚ್ಚನ ಆಯ್ಕೆ ರೀಮೇಕ್''.

ಹೀಗಂತ ಕಿಚ್ಚ ಸುದೀಪ್ ಮೇಲೆ ದೂರುವ ಮಂದಿ ಅದೆಷ್ಟೋ. 'ರೀಮೇಕ್' ಅನ್ನುವ ಪದಕ್ಕೆ ಸುದೀಪ್ ಅನ್ವರ್ಥ ಆಗುತ್ತಿದ್ದಾರೆ ಅಂತ ಗಾಂಧಿನಗರದಲ್ಲಿ ಆಡಿಕೊಳ್ಳುವ ಬಹಳಷ್ಟು ಮಂದಿ ಇದ್ದಾರೆ.


ಇಲ್ಲಿಯವರೆಗೂ ಅದನ್ನೆಲ್ಲಾ ಕೇಳಿಸಿಕೊಂಡು ಸುಮ್ಮನಿದ್ದ ಕಿಚ್ಚ ಸುದೀಪ್ ಎದೆಯಲ್ಲಿ ಈಗ ಕಿಚ್ಚು ಹೊತ್ತಿಕೊಂಡಿದೆ. 'ರೀಮೇಕ್' ಹಣೆಪಟ್ಟಿ ಬಗ್ಗೆ ಸುದೀಪ್ ಕೊನೆಗೂ ಉತ್ತರ ನೀಡಿದ್ದಾರೆ. ಯಾವುದೇ ರಾಜಿ ಇಲ್ಲದೆ ಟ್ವೀಟ್ ಮಾಡಿ ಸುದೀಪ್ ತಮ್ಮ ರೀಮೇಕ್ ಸಿನಿಮಾಗಳ ಹಿಂದಿನ ಸತ್ಯ ಸಂಗತಿಯನ್ನ ಹೊರಹಾಕಿದ್ದಾರೆ.


ಹಾಗಾದ್ರೆ, ಸುದೀಪ್ ಪರಭಾಷೆಯ ಕನ್ನಡ ಆವೃತ್ತಿ ಚಿತ್ರಗಳಲ್ಲಿ ನಟಿಸುತ್ತಿರುವುದಾದರೂ ಏಕೆ...ಅದನ್ನ ಸುದೀಪ್ ಮಾಡಿರುವ ಟ್ವೀಟ್ ಗಳಲ್ಲೇ ನೋಡಿ...ಕೆಳಗಿರುವ ಸ್ಲೈಡ್ ಗಳಲ್ಲಿ.....


ಕಿಚ್ಚನ ಮತ್ತೊಂದು ಮುಖ ಯಾರಿಗೂ ಗೊತ್ತಿಲ್ಲ!

ತೆರೆಮೇಲೆ ಮಾತ್ರ ಸುದೀಪ್ ಹೀರೋ ಅಲ್ಲ. ನಿಜ ಜೀವನದಲ್ಲೂ 'ನಲ್ಲ' ನಲ್ಮೆಯ ಹೃದಯವಂತ ಅಂತ ಅನೇಕರಿಗೆ ಗೊತ್ತಿಲ್ಲ. ಕಷ್ಟದಲ್ಲಿರುವವರಿಗೆ ಸದಾ ಸಹಾಯ ಹಸ್ತ ಚಾಚುವ ಸುದೀಪ್ 'ರೀಮೇಕ್ ಸರದಾರ' ಅಂತ ಇವತ್ತು ಕು'ಖ್ಯಾತಿ' ಪಡೆದಿದ್ದರೆ, ಅದಕ್ಕೆ ಸುದೀಪ್ ಮತ್ತೊಬ್ಬರಿಗೆ ಮಾಡಿದ ಸಹಾಯ ಕಾರಣ! ಅದನ್ನ ಖುದ್ದು ಸುದೀಪ್ ಟ್ವೀಟ್ ಮಾಡುವ ಮೂಲಕ ಬಹಿರಂಗಗೊಳಿಸಿದ್ದಾರೆ.


ಸಂಭಾವನೆ ಪಡೆಯದೆ ಮಾಡಿದ ರೀಮೇಕ್ ಗಳು!

ಸುದೀಪ್ ರೀಮೇಕ್ ಚಿತ್ರಗಳ ಬಗ್ಗೆ ಟ್ವೀಟ್ ಗಳು ಹೆಚ್ಚಾಗ್ತಿದ್ದಂತೆ ಉತ್ತರಿಸಿರುವ ಸುದೀಪ್, ''ಮೈ ಆಟೋಗ್ರಾಫ್ ಚಿತ್ರವನ್ನ ಹೊರತು ಪಡಿಸಿ, ನಾನು ಮಾಡಿದ ಎಲ್ಲಾ ರೀಮೇಕ್ ಚಿತ್ರಗಳು ಕಷ್ಟದಲ್ಲಿದ್ದ ನಿರ್ಮಾಪಕರಿಗೋಸ್ಕರ. ಅದಕ್ಕೆ ಒಂದು ರೂಪಾಯಿಯನ್ನೂ ಸಂಭಾವನೆ ರೂಪದಲ್ಲಿ ಪಡೆದಿಲ್ಲ'' ಅಂತ ಸುದೀಪ್ ಟ್ವೀಟ್ ಮಾಡಿದ್ದಾರೆ.


''ಚಿತ್ರಗಳ ಆಯ್ಕೆ ನನ್ನದಲ್ಲ''

''ಅಂದ್ಹಾಗೆ, ಈ ಎಲ್ಲಾ ಚಿತ್ರಗಳ ಆಯ್ಕೆ ಆಯಾ ನಿರ್ಮಾಪಕರುಗಳದ್ದೇ. ನಾನು ಈ ಮಟ್ಟಕ್ಕೆ ಬೆಳೆದಿರುವುದು ಈ ಇಂಡಸ್ಟ್ರಿಯಿಂದಲೇ. ನಾನು ಏನೇ ಮಾಡಿದ್ದರೂ, ಅದು ಇನ್ನೊಬ್ಬರಿಗೆ ಸಹಾಯ ಆಗಲಿ ಅಂತಲೇ ಮಾಡಿದ್ದೇನೆ'' ಅಂತ ತಮ್ಮ ಹೃದಯವಂತಿಕೆಯನ್ನ ಈ ಟ್ವೀಟ್ ನಲ್ಲಿ ಸುದೀಪ್ ಪ್ರದರ್ಶಿಸಿದ್ದಾರೆ.


ಸುದೀಪ್ ಮಾನವೀಯ ಮುಖ.....

''ಕಷ್ಟದಲ್ಲಿದ್ದವರಿಗೆ ನೆರವಾಗುವುದು ಮನುಷ್ಯತ್ವ. ಹೀಗಾಗಿ ನಾನು ಇಲ್ಲಿಯವರೆಗೂ ಮಾಡಿರುವ ಯಾವುದೇ ರೀಮೇಕ್ ಚಿತ್ರದ ಬಗ್ಗೆ ನನಗೆ ಅಳುಕಿಲ್ಲ. ನಾನು ಮಾಡಿರುವುದು ನನ್ನ ಸ್ನೇಹಿತರಿಗೋಸ್ಕರ. ನಾನು ಸಹಾಯ ಮಾಡಿದವರ ಮೊಗದಲ್ಲಿ ಇಂದು ನಗು ಮೂಡಿರುವುದನ್ನ ನಾನು ನೋಡಿದ್ದೇನೆ. ನನಗೆ ಅಷ್ಟು ಸಾಕು'' ಅಂತ ಸುದೀಪ್ ಟ್ವೀಟಿಸಿದ್ದಾರೆ.


''ನಿಮ್ಮಿಂದ ಇನ್ನೊಬ್ಬರು ನಗುವಂತಾಗಲಿ''

ರೀಮೇಕ್ ಚಿತ್ರಗಳ ಬಗ್ಗೆ ಇಷ್ಟೆಲ್ಲಾ ಮಾತನಾಡಿದ ಸುದೀಪ್, ತಮ್ಮೆಲ್ಲಾ ಅಭಿಮಾನಿಗಳಿಗೆ ಶುಭ ರಾತ್ರಿ ವಿಷ್ ಮಾಡಿ, ''ಇನ್ನೊಬ್ಬರ ಮೊಗದಲ್ಲಿ ಮಂದಹಾಸ ಮೂಡಿಸುವ ಮೂಲಕ ನಿಮ್ಮ ನಾಳೆಯನ್ನ ಶುರು ಮಾಡಿ'' ಅಂತ ಸಂದೇಶ ಕೂಡ ರವಾನಿಸಿದ್ದಾರೆ.


ಸುದೀಪ್ ಹೇಳಿರುವ ಮಾತುಗಳು ಅಪ್ಪಟ ಸತ್ಯ

ಸಾಲದ ಶೂಲದಲ್ಲಿ ಸಿಲುಕಿದ್ದ ನಿರ್ಮಾಪಕ ದಿನೇಶ್ ಗಾಂಧಿಯನ್ನ ಬಚಾವ್ ಮಾಡುವುದಕ್ಕೆ ಸುದೀಪ್ 'ವೀರ ಮದಕರಿ' ಸಿನಿಮಾ ಒಪ್ಪಿಕೊಂಡರು. ಇದೇ ಹಾದಿಯಲ್ಲಿ ಸುದೀಪ್ 'ಕೆಂಪೇಗೌಡ' ಚಿತ್ರ ಮಾಡಿದ್ದು ನಿರ್ಮಾಪಕ ಶಂಕರ್ ಗೌಡ ಮತ್ತು ಹಾಲಪ್ಪಗಾಗಿ. [ಸುದೀಪ್ ರೀಮೇಕ್ ಚಿತ್ರಗಳ ಹಿಂದಿನ ಸತ್ಯ ಸಂಗತಿ]


ಚಿರಂಜೀವಿ ಸರ್ಜಾಗೆ ಬ್ರೇಕ್ ನೀಡುವುದಕ್ಕೆ 'ವರದನಾಯಕ'

ಇನ್ನೂ ಸುದೀಪ್ 'ವರದನಾಯಕ' ಚಿತ್ರವನ್ನ ಒಪ್ಪಿಕೊಂಡಿದ್ದು ನಟ ಚಿರಂಜೀವಿ ಸರ್ಜಾ ಗಾಗಿ. ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟು ವರ್ಷಗಳಾದರೂ ಸ್ಟಾರ್ ಸ್ಟೇಟಸ್ ಗಾಗಿ ತಿಣುಕಾಡುತ್ತಿರುವ ಚಿರುಗಾಗಿ ಸುದೀಪ್ ರೀಮೇಕ್ ಪಟ್ಟಿಗೆ ವರದನಾಯಕ ಸೇರ್ಪಡೆಯಾಯ್ತು. [ಬರೀ ರೀಮೇಕ್ ಅಲ್ಲ ರೀ, ಸುದೀಪ್ ಸ್ವಮೇಕೂ ಮಾಡ್ತಾರೆ!]


ರನ್ನ' ಮಾಡುತ್ತಿರುವುದು ಇದೇ ನಿರ್ಮಾಪಕರ ಹಿತದೃಷ್ಟಿಗಾಗಿ

ಸುದೀಪ್ ಕಾಲ್ ಶೀಟ್ ಗಾಗಿ ಮೂರು ವರ್ಷ ಕಾದಿದ್ದ ಎಂ.ಚಂದ್ರಶೇಖರ್ ಗಾಗಿ 'ರನ್ನ' ಚಿತ್ರ ಮಾಡಿಕೊಡುತ್ತಿದ್ದಾರೆ. ಇದು ಹಿಟ್ ಆದರೆ, ಕಾಸು ಮತ್ತು ಕ್ರೆಡಿಟ್ ನಿರ್ಮಾಪಕರಿಗೆ. ಆದ್ರೆ, 'ರೀಮೇಕ್ ಕಿಂಗ್' ಟ್ಯಾಗ್ ಮಾತ್ರ ಸುದೀಪ್ ಗೆ. ಸತ್ಯ ಸಂಗತಿ ಗೊತ್ತಿಲ್ಲದೇ, ಜನ ಆಡಿಕೊಳ್ಳುತ್ತಿರುವುದಕ್ಕೆ ಸುದೀಪ್ ಮನಸ್ಸಲ್ಲಿ ಬೇಸರವಿದೆ. ಅದರ ಪರಿಣಾಮ ಈ ಟ್ವೀಟ್ ರಿಯಾಕ್ಷನ್.


English summary
Kannada Actor Sudeep's majority of films are remake of other language movies. But what is the real reason behind the Actor signing Remake films? Sudeep has finally revealed the reason in his twitter account.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada