For Quick Alerts
  ALLOW NOTIFICATIONS  
  For Daily Alerts

  ಪ್ರತಿಭಟನೆಯಲ್ಲಿ ಸುದೀಪ್ ಭಾಗವಹಿಸಿಲ್ಲ.! ನಿಜವಾದ ಕಾರಣವೇನು.?

  By Harshitha
  |

  ಹನಿ ನೀರಿಗಾಗಿ ಹೋರಾಡುತ್ತಿರುವ ರೈತರ ಪರ ದನಿಯೆತ್ತಲು ಇಂದು ಇಡೀ ಕನ್ನಡ ಚಿತ್ರರಂಗ ಒಟ್ಟಾಗಿದೆ. ಬೀದಿಗಿಳಿದು ಹೋರಾಟ ಮಾಡುವ ಮೂಲಕ ಒಗ್ಗಟ್ಟು ಪ್ರದರ್ಶಿಸಿದೆ.

  ವಿವಿಧ ಕನ್ನಡ ಪರ ಸಂಘಟನೆಗಳು ಇಂದು ಕರೆ ನೀಡಿದ್ದ ಬಂದ್ ಗೆ ನಮ್ಮ ಸ್ಯಾಂಡಲ್ ವುಡ್ ಸಂಪೂರ್ಣ ಬೆಂಬಲ ಸೂಚಿಸಿ, ಚಿತ್ರರಂಗದ ಎಲ್ಲಾ ಕಾರ್ಯ ಚಟುವಟಿಕೆಗಳನ್ನ ಇಂದು ಸ್ಥಗಿತಗೊಳಿಸಿದೆ. [ಕರ್ನಾಟಕ ಬಂದ್: ಎಲ್ಲಾ ಚಿತ್ರಮಂದಿರಗಳಿಗೂ ಬಿದ್ದ ಬೀಗ.!]

  ಜೊತೆಗೆ ಟೌನ್ ಹಾಲ್ ನಿಂದ ಮೈಸೂರು ಬ್ಯಾಂಕ್ ಮಾರ್ಗವಾಗಿ ಫ್ರೀಡಂ ಪಾರ್ಕ್ ವರೆಗೂ ಕನ್ನಡ ಚಿತ್ರರಂಗದ ತಾರೆಯರು ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸುತ್ತಿದ್ದಾರೆ. ಮುಂದೆ ಓದಿ....

  ದೊಡ್ಡ ದೊಡ್ಡ ಸ್ಟಾರ್ ನಟರು ಭಾಗಿ

  ದೊಡ್ಡ ದೊಡ್ಡ ಸ್ಟಾರ್ ನಟರು ಭಾಗಿ

  ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆ ಪ್ರಾರಂಭವಾಗಿದ್ದು ಗೋಲ್ಡನ್ ಸ್ಟಾರ್ ಗಣೇಶ್, ಪ್ರಜ್ವಲ್ ದೇವರಾಜ್, ರಂಗಾಯಣ ರಘು, ಸಾರಾ ಗೋವಿಂದು ಸೇರಿದಂತೆ ಕನ್ನಡ ಚಿತ್ರರಂಗದ ದಿಗ್ಗಜರು ಪಾಲ್ಗೊಂಡಿದ್ದಾರೆ. [ಕರ್ನಾಟಕ ಬಂದ್: ಶಿವಣ್ಣ ಸಾರಥ್ಯದಲ್ಲಿ ಬೃಹತ್ ಪ್ರತಿಭಟನೆ]

  ಸುದೀಪ್ ಎಲ್ಲೂ ಕಾಣುತ್ತಿಲ್ಲ.!

  ಸುದೀಪ್ ಎಲ್ಲೂ ಕಾಣುತ್ತಿಲ್ಲ.!

  ಇಡೀ ಸ್ಯಾಂಡಲ್ ವುಡ್ಡಿಗೆ ಸ್ಯಾಂಡಲ್ ವುಡ್ಡೇ ಇವತ್ತು ಬೀದಿಗೆ ಇಳಿದಿದ್ದರೂ, ಕಿಚ್ಚ ಸುದೀಪ್ ಮಾತ್ರ ಹೋರಾಟದಲ್ಲಿ ಭಾಗಿ ಆಗಿಲ್ಲ. ಅದಕ್ಕೆ ಖುದ್ದು ಕಿಚ್ಚ ಸುದೀಪ್ ರವರೇ ಕಾರಣ ಕೊಟ್ಟಿದ್ದಾರೆ. ['ನೋಡಿ ಮುಸಿಮುಸಿನಗಲು ನಾವೇನು ಜೋಕರ್ ಗಳಲ್ಲ']

  ಸುದೀಪ್ ಟ್ವೀಟ್ ನೋಡಿ....

  ಸುದೀಪ್ ಟ್ವೀಟ್ ನೋಡಿ....

  ''ಪ್ರತಿಭಟನಾ ಮೆರವಣಿಗೆಯಲ್ಲಿ ಇಂದು ನಾನು ಭಾಗವಹಿಸಲು ಸಾಧ್ಯವಾಗುತ್ತಿಲ್ಲ. ಅಪ್ಪನ ಆರೋಗ್ಯ ಸರಿ ಇಲ್ಲ. ನನ್ನ ಇರುವಿಕೆ ಅವರಿಗೆ ಅಗತ್ಯ. ಕಳಸಾ ಬಂಡೂರಿ ಯೋಜನೆಗೆ ನನ್ನ ಸಪೋರ್ಟ್ ಸದಾ ಇದ್ದೇ ಇರುತ್ತೆ'' ಅಂತ ಕಿಚ್ಚ ಸುದೀಪ್ ಟ್ವೀಟ್ ಮಾಡಿದ್ದಾರೆ.

  ಕಿಚ್ಚ ಸುದೀಪ್ ಗೆ ಅಭಿಮಾನಿಗಳ ಸಾಥ್

  ಕಿಚ್ಚ ಸುದೀಪ್ ಗೆ ಅಭಿಮಾನಿಗಳ ಸಾಥ್

  ಸುದೀಪ್ ಮಾಡಿರುವ ಟ್ವೀಟ್ ಗೆ ''ನಿಮ್ಮ ಪರವಾಗಿ ನಾವು ಅಭಿಮಾನಿಗಳು ಹೋರಾಡುತ್ತಿದ್ದೇವೆ. ಅಪ್ಪನ ಆರೋಗ್ಯದ ಕಡೆ ಗಮನ ಕೋಡಿ'' ಅಂತ ಅವರ ಫ್ಯಾನ್ಸ್ ಪ್ರತಿಕ್ರಿಯೆ ನೀಡುತ್ತಿದ್ದಾರೆ.

  English summary
  Kannada Film Industry is supporting Karnataka Bandh today (July 30th) to protest against the interim order passed by Mahadayi Tribunal. But Kannada Actor Kiccha Sudeep did not participate in the Rally as his father is unwell. Check out his tweet.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X