For Quick Alerts
  ALLOW NOTIFICATIONS  
  For Daily Alerts

  ಸುದೀಪ್ 'ವರದನಾಯಕ' ಆನ್ ಲೈನ್ ಬುಕಿಂಗ್

  By Rajendra
  |

  ಅಭಿನಯ ಚಕ್ರವರ್ತಿ ಸುದೀಪ್ ಹಾಗೂ ಚಿರಂಜೀವಿ ಸರ್ಜಾ ಅಭಿನಯದ 'ವರದನಾಯಕ' ಚಿತ್ರ ಇದೇ ಜನವರಿ 25ರಂದು ಬಿಡುಗಡೆಯಾಗುತ್ತಿದೆ. ಈದ್ ಮಿಲಾದ್ (ಜ.25), ಗಣರಾಜ್ಯೋತ್ಸವ (ಜ.26) ಹಾಗೂ ಭಾನುವಾರದ (ಜ.27) ರಜಾ ದಿನಗಳು ಚಿತ್ರದ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಲಿವೆ.

  ಈಗಾಗಲೆ ಆನ್ ಲೈನ್ ಬುಕಿಂಗ್ ಆರಂಭಿಸಲಾಗಿದೆ. ಮಲ್ಟಿಫ್ಲೆಕ್ಸ್ ಹಾಗೂ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಲ್ಲೂ ಮುಂಗಡ ಬುಕಿಂಗ್ ಆರಂಭವಾಗಿದೆ ಎಂದು ಬಿಕೆಟಿ ಹಾಗೂ ಉತ್ತರ ಕರ್ನಾಟಕ ಭಾಗದ ವಿತರಕ ಭೋಗೇಂದ್ರ ತಿಳಿಸಿದ್ದಾರೆ.

  'ವರದನಾಯಕ' ಚಿತ್ರ ರಾಜ್ಯದಾದ್ಯಂತ ಸರಿ ಸುಮಾರು 130ರಿಂದ 135 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದ್ದು ಹದಿನೈದು ಮಲ್ಟಿಫ್ಲೆಕ್ಸ್ ಗಳಲ್ಲೂ ತೆರೆಕಾಣುತ್ತಿದೆ. ಮೈಸೂರು ಭಾಗದಲ್ಲಿ 30, ಉತ್ತರ ಕರ್ನಾಟಕದಲ್ಲಿ 15ರಿಂದ 18 ಕೇಂದ್ರಗಳಲ್ಲಿ ಚಿತ್ರ ಬಿಡುಗಡೆಯಾಗುತ್ತಿದೆ.

  ಚಿತ್ರವನ್ನು ಸಾಧ್ಯವಾದಷ್ಟು ಕಡಿಮೆ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲು ಚಿತ್ರದ ನಿರ್ಮಾಪಕ ಶಂಕರ್ ಗೌಡ ತೀರ್ಮಾನಿಸಿದ್ದಾರೆ. ಚಿತ್ರಮಂದಿರಗಳ ಸಂಖ್ಯೆ ಕಡಿಮೆಯಾದಷ್ಟು ಹೆಚ್ಚು ದಿನ ಚಿತ್ರ ನಿಲ್ಲುತ್ತದೆ ಎಂಬ ಉದ್ದೇಶ ಅವರದು. ಶಂಕರ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಶಂಕರ್ ನಿರ್ಮಿಸಿರುವ ಚಿತ್ರಕ್ಕೆ ಅಯ್ಯಪ್ಪ ಪಿ ಶರ್ಮ ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿದ್ದಾರೆ.

  ಸುಮಾರು ಎಂಟು ಕೋಟಿ ಬಜೆಟ್ ನಲ್ಲಿ 'ವರದನಾಯಕ' ಚಿತ್ರವನ್ನು ನಿರ್ಮಿಸಲಾಗಿದೆ. ತೆಲುಗಿನ 'ಲಕ್ಷ್ಯಂ' ಚಿತ್ರದ ರೀಮೇಕ್ 'ವರದನಾಯಕ'. ಸಾಮಾನ್ಯವಾಗಿ ಸುದೀಪ್ ರೀಮೇಕ್ ಚಿತ್ರಗಳು ಬಾಕ್ಸ್ ಆಫೀಸಲ್ಲಿ ಸೋತ ಉದಾಹರಣೆಗಳು ವಿರಳ. 'ವರದನಾಯಕ' ಚಿತ್ರದ ಬಗ್ಗೆಯೂ ಬಹಳಷ್ಟು ನಿರೀಕ್ಷೆಗಳಿವೆ.

  ನಿಖಿತಾ ಪಾಟೀಲ್, ಸಮೀರಾ ರೆಡ್ಡಿ, ಮುಖ್ಯಮಂತ್ರಿ ಚಂದ್ರು, ಜೈಜಗದೀಶ್, ಶೋಭ್‍ರಾಜ್, ಶರತ್ ಲೋಹಿತಾಶ್ವಾ, ಬುಲೆಟ್ ಪ್ರಕಾಶ್, ಶರಣ್, ಪದ್ಮಜಾರಾವ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ಜ.25ರಿಂದ ಸಾಲು ಸಾಲು ರಜೆಗಳಿರುವುದು ಚಿತ್ರಕ್ಕೆ ವರವಾಗಿ ಪರಿಣಮಿಸಲಿದೆ. (ಒನ್ಇಂಡಿಯಾ ಕನ್ನಡ)

  English summary
  Sudeep and Chiranjeevi Sarja starrer Varadanayaka film's online bookings have started in Rockline Cinemas where there has been satisfactory booking requests. The film produced by Shankare Gowda and directed by Aiyappa Sharma will be releasing on 25th January.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X