»   » ಶಿವಣ್ಣನ 'ಟಗರು' ನೋಡಿ ಕಿಚ್ಚ ಕೊಟ್ಟ ರಿವ್ಯೂ

ಶಿವಣ್ಣನ 'ಟಗರು' ನೋಡಿ ಕಿಚ್ಚ ಕೊಟ್ಟ ರಿವ್ಯೂ

Posted By:
Subscribe to Filmibeat Kannada
'ಟಗರು' ನೋಡಿ ಕಿಚ್ಚ ಕೊಟ್ಟ ರಿವ್ಯೂ | Filmibeat Kannada

ಹ್ಯಾಟ್ರಿಕ್ ಹೀರೋ ಶಿವರಾಜ್ ಅಭಿನಯದ ಟಗರು ಸಿನಿಮಾ ಎಲ್ಲೆಡೆ ಭರ್ಜರಿ ಪ್ರದರ್ಶನ ಕಾಣುತ್ತಿದೆ. ದುನಿಯಾ ಸೂರಿ ನಿರ್ದೇಶನ ಕಲಾವಿದರ ಅಭಿನಯದ ಎಲ್ಲವೂ ಪ್ರೇಕ್ಷಕರನ್ನ ಸೆಳೆಯುವುದರಲ್ಲಿ ಯಶಸ್ವಿ ಆಗಿದೆ.

ಮದುವೆ ನಂತರ ನಟಿ ಭಾವನಾ ಅಭಿನಯದ ಬಿಡುಡಗಡೆ ಆಗುತ್ತಿರುವ ಮೊದಲ ಚಿತ್ರ ಇದಾಗಿದ್ದು ಪತಿ ನವೀನ್ ಜೊತೆಯಲ್ಲಿ ಭಾವನಾ ಸಿನಿಮಾ ನೋಡಿ ಎಂಜಾಯ್ ಮಾಡಿದ್ದರು. ಭಾವನಾ ಅವರ ನಂತರ ಕಿಚ್ಚ ಸುದೀಪ್ ಸಿನಿಮಾ ನೋಡಿ ಖುಷಿ ಪಟ್ಟಿದ್ದಾರೆ.

ಸ್ಯಾಂಡಲ್ ವುಡ್ ನಲ್ಲಿ 'T-10' ಕ್ರಿಕೆಟ್ ಟೂರ್ನಿ


ಟಗರು ಚಿತ್ರ ನೋಡಿದ ಕಿಚ್ಚ ತಮ್ಮ ಅಭಿಪ್ರಾಯವನ್ನ ಟ್ವಿಟ್ಟರ್ ಮೂಲಕ ಹಂಚಿಕೊಂಡಿದ್ದಾರೆ. ಪ್ರೇಕ್ಷಕನಂತೆ ಸಿನಿಮಾ ವೀಕ್ಷಣೆ ಮಾಡಿದ ಕಿಚ್ಚ ತಮ್ಮ ಸ್ಟೈಲ್ ನಲ್ಲಿ ಸಿನಿಮಾ ವಿಮರ್ಶೆ ಮಾಡಿದ್ದಾರೆ. ಹಾಗಾದರೆ ಟಗರಿನ ಪೊಗರಿನ ಬಗ್ಗೆ ಕಿಚ್ಚ ಹೇಳಿದ್ದೇನು? ಇಲ್ಲಿದೆ ಕಂಪ್ಲೀಟ್ ಕಿಚ್ಚ ರಿವ್ಯೂ ಮುಂದೆ ಓದಿ


ನಿರ್ದೇಶನಕ್ಕೆ ಮನ ಸೋತ ಕಿಚ್ಚ

ವಿಶೇಷವಾಗಿರುವ ಟಗರು ಸಿನಿಮಾದ ನಿರೂಪಣೆ ತುಂಬಾ ಚೆನ್ನಾಗಿದೆ. ತೆರೆ ಮೇಲೆ ಬರುವ ಪ್ರತಿ ಪಾತ್ರವೂ ಜನರನ್ನ ಕನ್ಫೂಸ್ ಮಾಡುತ್ತದೆ. ಚಿತ್ರರಂಗದಲ್ಲಿ ಕಥೆ ಹೇಳುವ ವಿಭಿನ್ನ ಪ್ರಯತ್ನ ತುಂಬಾ ಚೆನ್ನಾಗಿ ಆಗಿದೆ ಎಂದಿದ್ದಾರೆ ಸುದೀಪ್


ಇಂತಹ ಚಿತ್ರ ಸೂರಿಯಿಂದ ಮಾತ್ರ ಸಾಧ್ಯ

ಈಗಾಗಲೇ ಪ್ರೇಕ್ಷಕರನ್ನ ಇಂಪ್ರೆಸ್ ಮಾಡಿರುವ ಟಗರು ಸಿನಿಮಾದ ಪಾತ್ರಗಳು ಕಿಚ್ಚನನ್ನು ಕಾಡುವುದಕ್ಕೆ ಶುರು ಮಾಡಿದೆ. ಇಂತಹ ಸಿನಿಮಾ ನಿರ್ದೇಶನ ಮಾಡಲು ನಿರ್ದೇಶಕ ಸೂರಿಯಿಂದ ಮಾತ್ರ ಸಾಧ್ಯ ವಿಭಿನ್ನ ಎನ್ನಿಸುವ ಪಾತ್ರಗಳ ಹೆಸರು ಎಲ್ಲವೂ ಸೂಪರ್. ಅದರ ಜೊತೆಯಲ್ಲಿ ಪಾತ್ರಕ್ಕೆ ತಕ್ಕಂತ ಸ್ಥಳಗಳ ಆಯ್ಕೆ ಎಲ್ಲವೂ ಅದ್ಬುತ ಎಂದಿದ್ದಾರೆ ಸುದೀಪ್.


ಶಿವಣ್ಣ ಅಭಿನಯಕ್ಕೆ ಸಲಾಮ್ ಎಂದ ಕಿಚ್ಚ

ಸಿನಿಮಾದಲ್ಲಿ ಶಿವರಾಜ್ ಕುಮಾರ್ ಬಗ್ಗೆ ಮಾತನಾಡುವುದಾದರೆ ಎನರ್ಜಿ, ಅಭಿನಯ ಎಲ್ಲವೂ ತುಂಬಾ ಚೆನ್ನಾಗಿದೆ. ತೆರೆ ಮೇಲೆ ಶಿವರಾಜ್ ಕುಮಾರ್ ಅದ್ಬುತವಾಗಿ ಕಾಣಿಸುತ್ತಾರೆ : ಕಿಚ್ಚ ಸುದೀಪ್


ಧನಂಜಯ ಅಭಿನಯ ಸೂಪರ್

ಇಡೀ ರಾಜ್ಯವೇ ಟಗರು ಸಿನಿಮಾ ನೋಡಿ ಇಂಪ್ರೆಸ್ ಆಗಿರುವ ಡಾಲಿ ಪಾತ್ರಕ್ಕೆ ಕಿಚ್ಚ ಕೂಡ ಫಿದಾ ಆಗಿದ್ದಾರೆ. ಧನಂಜಯ ಅವರ ಸ್ಕ್ರೀನ್ ಅಪಿಯರೆನ್ಸ್ ಹಾಗೂ ಪಾತ್ರ ಎರಡು ತುಂಬಾ ಇಷ್ಟ ಪಟ್ಟಿದ್ದಾರೆ.


ವಸಿಷ್ಠ ಧ್ವನಿಯೇ ವಿಶಿಷ್ಟ

ನಟ ವಸಿಷ್ಠ ಸಿಂಹ ಅವರ ಅಭಿನಯದ ಬಗ್ಗೆ ಬರೆದಿರುವ ಸುದೀಪ್ ವಸಿಷ್ಠ ಅವರ ಧ್ವನಿ ಕೆಲ ಸೀನ್ ಗಳಲ್ಲಿ ಎಲ್ಲರ ಗಮನ ಅವರತ್ತ ಸೆಳೆಯುವಂತೆ ಮಾಡುತ್ತದೆ. ಸೂಕ್ಷ್ಮ ಅಭಿನಯದ ನೋಡುಗರಿಗೆ ಚಿಟ್ಟೆ ಪಾತ್ರವನ್ನ ಪ್ರೀತಿ ಮಾಡುವಂತೆ ಮಾಡುತ್ತದೆ ಎಂದಿದ್ದಾರೆ.


ಸಂಗೀತ ನಿರ್ದೇಶಕನಿಗೆ ಶುಭಾಶಯ

ಟಗರು ಸಿನಿಮಾದಲ್ಲಿ ಸಂಗೀತ ಕೂಡ ಮುಖ್ಯ ಪಾತ್ರವನ್ನ ವಹಿಸುತ್ತದೆ. ಆಯಾ ಸೀನ್ ಗಳಿಗೆ ತಕ್ಕಂತೆ ಹಿನ್ನಲೆ ಸಂಗೀತ ಹೊಂದಿಕೆ ಆಗಿದೆ, ಚಿತ್ರರಂಗದಲ್ಲಿ ಗುರುತಿಸಿಕೊಳ್ಳುತ್ತಿರುವ ಹೊಸ ನಿರ್ದೇಶಕರಿಗೆ ಶುಭಾಶಯ ಎಂದಿದ್ದಾರೆ ಸುದೀಪ್.


ಅಸಾಧ್ಯವಾದುದು ಸಾಧ್ಯವಾಗಿದೆ

ಸಿನಿಮಾ ವಿಮರ್ಶೆ ಮಾಡಿ ಬರೆದ ಕಿಚ್ಚ ಸುದೀಪ್ ಇಡೀ ಟಗರು ತಂಡಕ್ಕೆ ಶುಭಾಶಯ ಕೋರಿದ್ದಾರೆ. ಅಸಾಧ್ಯ ಎನ್ನಿಸುವುದನ್ನು ಸಾಧ್ಯ ಮಾಡಿ ತೋರಿಸುವುದಕ್ಕೆ ಸಿನಿಮಾತಂಡದ ಪ್ರತಿಯೊಬ್ಬರಿಗೂ ಶುಭಾಶಯಗಳು ಎಂದಿದ್ದಾರೆ.


ಶ್ರೀದೇವಿ ರೂಮಿನಲ್ಲಿ ಆ ದಿನ ಏನಾಯ್ತು.? ಕೋಮಲ್ ನೆಹ್ತಾ ಬಿಚ್ಚಿಟ್ಟ ಅಸಲಿ ಕಥೆ.!


English summary
Kannada film actor Sudeep watched kannada movie Tagaru, Sudeep has shared his opinion on Twitter after seeing the Tagaru movie ,Tagaru Shivaraj Kumar, Manvitha Harish starrer movie.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada