»   » ಬಾಹುಬಲಿಯಲ್ಲಿ ಸುದೀಪ್ ಪಾತ್ರ ಏನ್ಗೊತ್ತಾ?

ಬಾಹುಬಲಿಯಲ್ಲಿ ಸುದೀಪ್ ಪಾತ್ರ ಏನ್ಗೊತ್ತಾ?

By Mahesh
Subscribe to Filmibeat Kannada
For Quick Alerts
ALLOW NOTIFICATIONS
For Daily Alerts

  ಈಟಿವಿ ಕನ್ನಡ ವಾಹಿನಿಯ ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋಗೆ ಸಿಕ್ಕ ಅಭೂತವೂರ್ವ ಯಶಸ್ಸಿನಿಂದ ಸುದೀಪ್ ಹೊರ ಬಂದಿದ್ದಾರೆ. ಚಲನಚಿತ್ರ ಕೃಷಿಯಲ್ಲಿ ಮತ್ತೆ ತೊಡಗಿಕೊಂಡಿರುವ ಸುದೀಪ್ ಮೇಲೆ ಮತ್ತೊಮ್ಮೆ ಅವಕಾಶಗಳು ಸುರಿಮಳೆಗೈಯುತ್ತಿವೆ.

  ಕನ್ನಡದ ದೊಡ್ಡ ದೊಡ್ಡ ನಿರ್ದೇಶಕರು ಸುದೀಪ್ call sheet ಸಿಗದೆ ಪರಿತಪಿಸುವ ಬೆನ್ನಲ್ಲೆ ಪರಭಾಷೆ ನಿರ್ಮಾಪಕ, ನಿರ್ದೇಶಕರ ಜೊತೆ ಸುದೀಪ್ ಮಾತುಕತೆ ನಡೆಯುತ್ತಲೇ ಇದೆ .

  ಈ ನಡುವೆ ಕಿಚ್ಚ ಸುದೀಪ್ ಅಭಿನಯದ ಬಚ್ಚನ್' ಚಿತ್ರ ಹಿಂದಿ ಆವೃತ್ತಿ ಇದೇ ಜುಲೈನಲ್ಲಿ ತೆರೆಕಾಣುತ್ತಿದೆ. ತೆಲುಗು, ತಮಿಳು ಬಚ್ಚನ್ ಚಿತ್ರ ಏಕಕಾಲಕ್ಕೆ ಬಿಡುಗಡೆ ಮಾಡಲು ಸಿದ್ಧತೆಗಳು ನಡೆಯುತ್ತಿವೆ.

  ಖ್ಯಾತ ನಿರ್ದೇಶಕರಾದ ರಾಮ್ ಗೋಪಾಲ್ ವರ್ಮಾ ಮತ್ತು ತೆಲುಗಿನ ಎಸ್ ಎಸ್ ರಾಜಮೌಳಿ ಜೊತೆ ಈಗಾಗಲೇ ಕೆಲಸ ಮಾಡಿರುವ ಸುದೀಪ್, ಈಗ ತಮಿಳಿನ ಹೆಸರಾಂತ ನಿರ್ದೇಶಕ ಕೆಎಸ್ ರವಿಕುಮಾರ್ ಚಿತ್ರದಲ್ಲಿ ನಟಿಸುವ ಸುದ್ದಿ ಇದೆ. ತೆಲುಗಿನ 'ಈಗ' ಚಿತ್ರದ ದಕ್ಷಿಣ ಭಾರತದಲ್ಲಿ ಮನೆಮಾತಾಗಿರುವ ಸುದೀಪ್ ಈಗ ಮತ್ತೊಮ್ಮೆ ರಾಜಮೌಳಿ ನಿರ್ದೇಶನದ ಬಾಹುಬಲಿ ಚಿತ್ರದಲ್ಲೂ ಅಭಿನಯಿಸುತ್ತಿದ್ದಾರೆ.

  ತೆಲುಗಿನ ಜನಪ್ರಿಯ ನಟ ಅಲ್ಲರಿ ನರೇಶ್ ಚಿತ್ರವೊಂದರಲ್ಲಿ ನಟಿಸಿದ್ದ ಸುದೀಪ್ ಅವರು ರಾಜಮೌಳಿ ಅವರ ಬಾಹುಬಲಿ ಚಿತ್ರದಲ್ಲಿ ನಿರ್ವಹಿಸುವ ಪಾತ್ರದ ವಿವರ ಸಿಕ್ಕಿದೆ.

  ಈ ಮುಂಚೆ ಒನ್ ಇಂಡಿಯಾ ಕಚೇರಿಗೆ ಬಂದಿದ್ದ ಸುದೀಪ್, ಬಾಹುಬಲಿ ಚಿತ್ರದಲ್ಲಿ ಸಣ್ಣ ಪಾತ್ರವನ್ನು ನಿರ್ವಹಿಸುತ್ತಿದ್ದೇನೆ. ನಾನು ರಾಜಮೌಳಿ ಅವರಿಗೆ 'ನೋ' ಎನ್ನಲು ಆಗುವುದಿಲ್ಲ. ಅವರ ಜೊತೆ ಕೆಲಸ ಮಾಡುವುದರಿಂದ ನಾನು ಸಾಕಷ್ಟು ಕಲಿಯಬಹುದು' ಎಂದಿದ್ದರು. ಬನ್ನಿ ಬಾಹುಬಲಿ ಚಿತ್ರದ ಬಗ್ಗೆ, ಸುದೀಪ್ ರೋಲ್ ಬಗ್ಗೆ ಇನ್ನಷ್ಟು ಮಾಹಿತಿ ನೋಡೋಣ..

  ಸುದೀಪ್ ಟ್ವೀಟ್

  ತೆಲುಗಿನ ಬಾಹುಬಲಿ ಚಿತ್ರ ಹಾಗೂ ರಾಜಮೌಳಿ ನಿರ್ದೇಶನದ ಬಗ್ಗೆ ಸುದೀಪ್ ಟ್ವೀಟ್

  ಭರ್ಜರಿ ತಾರಾಗಣ

  ತೆಲುಗಿನ ರೆಬೆಲ್ ಸ್ಟಾರ್ ಪ್ರಭಾಸ್, ರಾಣಾ ದಗ್ಗುಬಾತಿ, ಅನುಷ್ಕಾ ಶೆಟ್ಟಿ ಪ್ರಮುಖ ಪಾತ್ರದಲ್ಲಿದ್ದಾರೆ. ಶೋಭು ಯರ್ಲಗಡ್ಡ ಹಾಗೂ ಪ್ರಸಾದ್ ದೇವಿನೇನಿ ಹಾಗೂ ಕೆ ರಾಘವೇಂದ್ರ ರಾವ್ ರಂಥ ದೊಡ್ಡ ಚಿತ್ರ ನಿರ್ಮಾಣಗಾರರು ಚಿತ್ರಕ್ಕೆ ಹಣ ಹೂಡಿದ್ದಾರೆ

  ಐತಿಹಾಸಿಕ ಕಥೆ ?

  ಐತಿಹಾಸಿಕ ಕಥೆಯನ್ನು ಹೊಂದಿರುವ ಈ ಚಿತ್ರದಲ್ಲಿ ಸುದೀಪ್ ಅವರದ್ದು ಯುದ್ಧ ಶಸ್ತ್ರಾಸ್ತ್ರ ಡೀಲರ್ ಪಾತ್ರವಂತೆ. ಪಾತ್ರದ ಬಗ್ಗೆ ಹೆಚ್ಚಿನ ವಿವರಣೆ ಇನ್ನೂ ಸಿಕ್ಕಿಲ್ಲವಾದರೂ ಚಿತ್ರದಲ್ಲಿ ಮಹತ್ವದ ಪಾತ್ರ ಇದಾಗಿದೆ ಎನ್ನಲಾಗಿದೆ.

  ಕೀರವಾಣಿ ಸಂಗೀತ

  ಬಾಹುಬಲಿ ಚಿತ್ರಕ್ಕೆ ಎಂದಿನಂತೆ ರಾಜಮೌಳಿ ತಂಡದ ಆಸ್ಥಾನ ಪ್ರತಿಭೆ ಎಂಎಂ ಕೀರವಾಣಿ ಅವರು ಸಂಗೀತ ನೀಡಿದ್ದಾರೆ. ಕೆಕೆ ಸೆಂಥಿಲ್ ಕುಮಾರ್ ಕೆಮರಾ ವರ್ಕ್ ಮಾಡಿದ್ದಾರೆ.

  ಮತ್ತೆ ಯಾವ ಸಿನ್ಮಾ ಇಲ್ಲ

  ತೆಲುಗಿನ ಬಾಹುಬಲಿ ಚಿತ್ರದ ನಂತರ ಯಾವುದೇ ಬೇರೆ ಚಿತ್ರವನ್ನು ಸುದೀಪ್ ಸಹಿ ಹಾಕಿಲ್ಲವಂತೆ. ಹಲವು ನಿರ್ಮಾಪಕರ ಜೊತೆ ಮಾತುಕತೆ ನಡೆಯುತ್ತಿದೆ ಯಾವುದು ಅಂತಿಮ ಹಂತ ತಲುಪಿಲ್ಲ ಎಂದು ತಿಳಿದು ಬಂದಿದೆ.

  ಸುದೀಪ್ ಇನ್ನೊಂದು ಚಿತ್ರ?

  ಕನ್ನಡ ನಿರ್ಮಾಪಕ ಸೂರಪ್ಪ ಬಾಬು ನಿರ್ಮಾಣದ ದ್ವಿಭಾಷಾ ಚಿತ್ರವೊಂದರಲ್ಲಿ ಸುದೀಪ್ ನಾಯಕರಾಗಿರುತ್ತಾರೆ. ತಮಿಳಿನ ಖ್ಯಾತ ನಿರ್ದೇಶಕ ಕೆಎಸ್ ರವಿಕುಮಾರ್ ನಿರ್ದೇಶಿಸುತ್ತಾರೆ ಎಂಬ ಸುದ್ದಿ ಹಬ್ಬಿದೆ. ಆದರೆ, ಈ ಬಗ್ಗೆ ಸುದೀಪ್ ಆಗಲಿ, ಸೂರಪ್ಪ ಬಾಬು ಆಗಲಿ ಸ್ಪಷ್ಟನೆ ನೀಡಿಲ್ಲ.

  ಯೋಗರಾಜ್ ಭಟ್ ನಿರ್ದೇಶನದ ಚಿತ್ರ, ಸುದೀಪ್ ಸ್ವಂತ ಬ್ಯಾನರ್ ನಲ್ಲಿ ಇನ್ನೊಂದು ಸಿನಿಮಾ ಅದರಲ್ಲಿ ರಮ್ಯಾ ನಾಯಕಿ ಎಂಬ ಸುದ್ದಿಗಳು ಹರಡಿವೆ.

  English summary
  Sudeep shot to fame in South Indian film industry with Eega (Naani in Tamil). The actor, whose talent was restricted only to Kannada film industry till then, came into light with the SS Rajamouli directorial movie. Now, Kiccha is once again acting in the same filmmaker's 
 movie, not in a lead role but it is just a cameo.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more