»   » ಕ್ಯಾಮೆರಾ ಮುಂದೆ ಬರಲಿದ್ದಾರೆ ಸುದೀಪ್ ಪತ್ನಿ ಪ್ರಿಯಾ

ಕ್ಯಾಮೆರಾ ಮುಂದೆ ಬರಲಿದ್ದಾರೆ ಸುದೀಪ್ ಪತ್ನಿ ಪ್ರಿಯಾ

Posted By:
Subscribe to Filmibeat Kannada
Sudeep wife Priya
ಇಷ್ಟು ದಿನ ಕ್ಯಾಮೆರಾ ಹಿಂದೆ ಕೆಲಸ ನಿರ್ವಹಿಸುತ್ತಿದ ನಟ ಕಿಚ್ಚ ಸುದೀಪ್ ಅವರ ಪತ್ನಿ ಪ್ರಿಯಾ ಅವರು ಇದೇ ಮೊದಲ ಬಾರಿಗೆ ಕ್ಯಾಮೆರಾ ಮುಂದೆ ಬರುತ್ತಿದ್ದಾರೆ. ಅರ್ಥಾತ್ ಅವರು ಬಣ್ಣ ಹಚ್ಚುತ್ತಿದ್ದಾರೆ. ಆದರೆ ಬೆಳ್ಳಿಪರದೆಗೆ ಅಲ್ಲ, ಕಿರುತೆರೆಗೆ ಪ್ರಿಯಾ ಅಡಿಯಿಡುತ್ತಿದ್ದಾರೆ.

ಈಗಾಗಲೆ ಈಟಿವಿ ಕನ್ನಡದಲ್ಲಿ ಪ್ರಸಾರವಾಗುತ್ತಿರುವ 'ಅಶ್ವಿನಿ ನಕ್ಷತ್ರ' ದೈನಿಕ ಧಾರಾವಾಹಿಯಲ್ಲಿ ಪ್ರಿಯಾ ಅಭಿನಯಿಸಿದ್ದಾರೆ. ಪ್ರಿಯಾ ಅವರ ಭಾಗದ ಸನ್ನಿವೇಶವನ್ನು ಚಿತ್ರೀಕರಿಸಲಾಗಿದೆ. ಅತಿಶೀಘ್ರದಲ್ಲೇ ಅದು ಪ್ರಸಾರವಾಗಲಿದೆ ಎನ್ನುತ್ತವೆ ಮೂಲಗಳು.

ಸೂಪರ್ ಸ್ಟಾರ್ ಜೆ.ಕೆ ಪತ್ನಿ ಅಶ್ವಿನಿ (ಮಯೂರಿ) ತನ್ನ ಗಂಡನ ವರ್ತನೆಯಿಂದ ಬೇಸತ್ತು ಮತ್ತೊಬ್ಬ ಸೂಪರ್ ಸ್ಟಾರ್ ಪತ್ನಿಯನ್ನು ಭೇಟಿಯಾಗುತ್ತಾರೆ. ತನ್ನ ಸಮಸ್ಯೆಗಳನ್ನು ಅವರ ಬಳಿ ಹೇಳಿಕೊಳ್ಳುತ್ತಾರೆ. ಪರಿಹಾರ ಸೂಚಿಸುವಂತೆಯೂ ಕೇಳಿಕೊಳ್ಳುತ್ತಾರೆ.

ಈ ಸನ್ನಿವೇಕ್ಕಾಗಿ ಸ್ವತಃ ಸುದೀಪ್ ಅವರನ್ನು ಸಂಪರ್ಕಿಸಲಾಗಿತ್ತಂತೆ. ಆದರೆ ಸುದೀಪ್ ಅವರು ಮತ್ತೊಂದು ಚಿತ್ರದಲ್ಲಿ ಬಿಜಿಯಾಗಿರುವ ಕಾರಣ ಅವರು ಧಾರಾವಾಹಿಯಲ್ಲಿ ಅತಿಥಿ ಪಾತ್ರ ಪೋಷಿಸಲು ಸಾಧ್ಯವಾಗಿಲ್ಲ. ಆದರೆ ಈ ಪಾತ್ರಕ್ಕೆ ಸುದೀಪ್ ಅವರ ಪತ್ನಿಯನ್ನು ಒಪ್ಪಿಸಲು ಧಾರಾವಾಹಿ ಬಳಗ ಯಶಸ್ವಿಯಾಗಿದೆ.

ಈಗಾಗಲೆ ಆ ಭಾಗದ ಚಿತ್ರೀಕರಣ ನಡೆದಿದ್ದು ಶೀಘ್ರದಲ್ಲೇ ಆ ಎಪಿಸೋಡ್ ಪ್ರಸಾರವಾಗಲಿದೆ ಎನ್ನುತ್ತವೆ ಮೂಲಗಳು. ಸೂಪರ್ ಸ್ಟಾರ್ ಜೆ.ಕೆ ಪಾತ್ರವನ್ನು ಜೆ ಕಾರ್ತಿಕ್ ಪೋಷಿಸಿದ್ದಾರೆ. ಇವರು ಸುದೀಪ್ ಅವರಿಗೆ ಆತ್ಮೀಯರು ಎಂಬುದು ವಿಶೇಷ. ಅಂದಹಾಗೆ 'ಅಶ್ವಿನಿ ನಕ್ಷತ್ರ' ಧಾರಾವಾಹಿ ಸೋಮವಾರದಿಂದ ಶುಕ್ರವಾರದತನಕ ರಾತ್ರಿ 10 ಗಂಟೆ ಪ್ರಸಾರವಾಗುತ್ತಿದೆ. (ಏಜೆನ್ಸೀಸ್)

English summary
kannada actor Sudeep's wife Priya Sudeep all set to debut acting. Sources says, Priya has acted in a tele serial called 'Ashwini Nakshatra' which is being telecasted in ETV Kannada.
Please Wait while comments are loading...