Just In
Don't Miss!
- News
ಮ್ಯಾಡ್ರಿಡ್ ಕಟ್ಟಡ ಸ್ಫೋಟ: ಇಬ್ಬರು ಸಾವು, ಹಲವರಿಗೆ ಗಾಯ
- Automobiles
ಡ್ಯುಯಲ್ ಟೋನ್ ಬಣ್ಣದ ಆಯ್ಕೆಯೊಂದಿಗೆ ರೋಡ್ ಟೆಸ್ಟಿಂಗ್ ನಡೆಸಿದ ಸಿಟ್ರನ್ ಸಿ5 ಏರ್ಕ್ರಾಸ್ ಕಾರು
- Sports
ಐಪಿಎಲ್ 2021: ಬೆಂಗಳೂರಿಗೆ ಬಂದ ಹರ್ಷಲ್ ಪಟೇಲ್, ಡೇನಿಯಲ್ ಸ್ಯಾಮ್ಸ್!
- Lifestyle
ಯಾವಾಗ ಸಂಗಾತಿಗೆ ಮೋಸ ಮಾಡಿ ಅನೈತಿಕ ಸಂಬಂಧ ಬೆಳೆಸುತ್ತಾರೆ?
- Finance
Gold, Silver Rate: ಪ್ರಮುಖ ನಗರಗಳಲ್ಲಿ ಜ. 20ರ ಚಿನ್ನ, ಬೆಳ್ಳಿ ದರ
- Education
UAS Dharwad Recruitment 2021: ರಿಸರ್ಚ್ ಅಸೋಸಿಯೇಟ್ ಹುದ್ದೆಗೆ ಜ.28ಕ್ಕೆ ನೇರ ಸಂದರ್ಶನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಥೈಲ್ಯಾಂಡ್ ನಲ್ಲಿ ಪೈಲ್ವಾನ್ ಆಗಲಿದ್ದಾರೆ ಕಿಚ್ಚ

ಕಿಚ್ಚ ಸುದೀಪ್ ಅಭಿನಯದ ಮುಂದಿನ ಸಿನಿಮಾ ಪೈಲ್ವಾನ್ ಚಿತ್ರೀಕರಣ ಇನ್ನು ಕೆಲವೇ ದಿನಗಳಲ್ಲಿ ಪ್ರಾರಂಭ ಆಗಲಿದೆ. ಟೈಟಲ್ ಗೆ ತಕ್ಕಂತೆ ಕಿಚ್ಚ ಸುದೀಪ್ ತಮ್ಮ ಔಟ್ ಲುಕ್ ಅನ್ನು ಬದಲಾವಣೆ ಮಾಡಿಕೊಳ್ಳುತ್ತಿದ್ದಾರೆ. ಕ್ರಿಕೆಟ್ ಹಾಗೂ ಶೆಟಲ್ ಆಡಿ ತಮ್ಮನ್ನ ಫಿಟ್ ಆಗಿ ಇಟ್ಟುಕೊಂಡಿದ್ದ ಸುದೀಪ್ ಇದೇ ಮೊದಲ ಬಾರಿಗೆ ಜಿಮ್ ಹೋಗಿ ವರ್ಕ್ ಔಟ್ ಶುರು ಮಾಡಿದ್ದಾರೆ.
ಜೀತ್ ದೇವಯ್ಯ ಕಿಚ್ಚನಿಗೆ ಟ್ರೈನರ್ ಆಗಿ ವರ್ಕ್ ಔಟ್ ಮಾಡಿಸುತ್ತಿದ್ದಾರೆ. ಸುದೀಪ್ ಕೂಡ ಪೈಲ್ವಾನ್ ಚಿತ್ರಕ್ಕಾಗಿ ತಮ್ಮಿಂದಾಗುವಷ್ಟು ಶ್ರಮವನ್ನ ಹಾಕುತ್ತಿದ್ದಾರೆ. ಸುದೀಪ್ ಜಿಮ್ ಮಾಡಲು ಶುರು ಮಾಡಿರುವುದನ್ನ ನೋಡಿರುವ ಅಭಿಮಾನಿಗಳು ಕಿಚ್ಚ ಸಿಕ್ಸ್ ಪ್ಯಾಕ್ ಮಾಡುತ್ತಾರೆ ಸಿನಿಮಾದಲ್ಲಿ ಸಿಕ್ಸ್ ಪ್ಯಾಕ್ ನಲ್ಲಿ ಸುದೀಪ್ ಅವರನ್ನ ನೋಡುಬಹುದು ಎಂದು ಕೊಂಡಿದ್ದಾರೆ.
ಆದರೆ ಅಭಿಮಾನಿಗಳ ನಿರೀಕ್ಷೆಯನ್ನು ಮೀರಿ ಕಿಚ್ಚ ಈ ಬಾರಿ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ಟೈಟಲ್ ಇರುವಂತೆ ಕಿಚ್ಚ ನಿಜಕ್ಕೂ ಪೈಲ್ವಾನ್ ಆಗಿಯೇ ಅಭಿಮಾನಿಗಳಿಗೆ ದರ್ಶನ ನೀಡಲಿದ್ದಾರೆ. ಹಾಗಾದ್ರೆ ಕಿಚ್ಚ ಪೈಲ್ವಾನ್ ಚಿತ್ರಕ್ಕಾಗಿ ಮಾಡುತ್ತಿರುವ ಮತ್ತಷ್ಟು ತಯಾರಿಗಳ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ಮುಂದೆ ಓದಿ.

ಥೈಲ್ಯಾಂಡಲ್ ನಲ್ಲಿ ಸುದೀಪ್
ಕಿಚ್ಚ ಸುದೀಪ್ ತಮ್ಮ ಮುಂದಿನ ಚಿತ್ರದ ತಯಾರಿಗಾಗಿ ಥೈಲ್ಯಾಂಡ್ ಗೆ ಹಾರಲಿದ್ದಾರೆ. ತಮ್ಮ ಟ್ರೈನರ್ ಜೀತ್ ದೇವಯ್ಯ ಅವರ ಜೊತೆ ಥೈಲ್ಯಾಂಡ್ ನ ಹಳ್ಳಿಯಲ್ಲಿ ಬಾಕ್ಸಿಂಗ್ ಕಲಿಯಲಿದ್ದಾರೆ.

ಬಾಕ್ಸರ್ ಲುಕ್ ನಲ್ಲಿ ಸುದೀಪ್
ಈಗಾಗಲೇ ವರ್ಕ್ ಔಟ್ ಶುರು ಮಾಡಿದ ನಂತರ ವಿಭಿನ್ನವಾಗಿ ಕಾಣಿಸುತ್ತಿರುವ ಕಿಚ್ಚ ಬಾಕ್ಸರ್ ಲುಕ್ ನಲ್ಲಿ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ಸಿನಿಮಾಗೆ ಹಾಗೂ ಕಥೆಗೆ ಬೇಕಾಗುವಂತೆ ಸುದೀಪ್ ತಯಾರಾಗಲಿದ್ದಾರೆ.

ಯಶಸ್ಸಿನ ಜೋಡಿ ಮಾಡಲಿದೆ ಮೋಡಿ
ನಿರ್ದೇಶಕ ಕೃಷ್ಣ ಹಾಗೂ ಸುದೀಪ್ ಕಾಂಬಿನೇಶನ್ ನಲ್ಲಿ ಈಗಾಗಲೇ ಹಿಟ್ ಚಿತ್ರ ಪ್ರೇಕ್ಷಕರಿಗೆ ಸಿಕ್ಕಿದ್ದು ಹೆಬ್ಬುಲಿ ಸಿನಿಮಾಗಾಗಿಯೂ ಸುದೀಪ್ ಸಾಕಷ್ಟು ತಯಾರಿ ಮಾಡಿಕೊಂಡಿದ್ದರು. ಅದೇ ರೀತಿಯಲ್ಲಿ ಈ ಬಾರಿಯೂ ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ.

ಕಂಪ್ಲೀಟ್ ನಿರ್ದೇಶಕರ ಸಿನಿಮಾ
ನಿರ್ದೇಶಕ ಕೃಷ್ಣ ತಮ್ಮ ಸಿನಿಮಾಗಳಲ್ಲಿ ನಾಯಕನನ್ನ ವಿಭಿನ್ನವಾಗ ಪ್ರೇಕ್ಷಕರಿಗೆ ತೋರಿಸುತ್ತಾ ಬಂದಿದ್ದಾರೆ. ಜನರ ನಿರೀಕ್ಷೆಯನ್ನ ಮೀರಿ ಬೇರೆಯದ್ದೇ ಪ್ರಯತ್ನ ಮಾಡುವಲ್ಲಿ ಸಕ್ಸಸ್ ಆಗಿದ್ದಾರೆ. ಈ ಬಾರಿಯೋ ಕಿಚ್ಚನ ಅಭಿಮಾನಿಗಳಿಗೆ ಪೈಲ್ವಾನ್ ಚಿತ್ರದ ಮೂಲಕ ಸರ್ಪ್ರೈಸ್ ಸಿಗಲಿದೆ.

ಪ್ರೀ ಪ್ರೊಡಕ್ಷನ್ಸ್ ಮುಗಿಸಿದ ನಿರ್ದೇಶಕರು
ಪ್ರೀ ಪ್ರೊಡಕ್ಷನ್ ಕೆಲಸ ಮುಗಿಸಿರುವ ನಿರ್ದೇಶಕರು ಮಾರ್ಚ್ ಅಂತ್ಯ ಅಥವಾ ಏರ್ಪಿಲ್ ಆರಂಭದಲ್ಲಿ ಚಿತ್ರೀಕರಣ ಶುರು ಮಾಡಲಿದ್ದಾರೆ. ಕಿಚ್ಚ ಮೂರು ವಾರಗಳು ಬಾಕ್ಸಿಂಗ್ ಕೋರ್ಸ್ ಮುಗಿಸಿ ಬಂದ ತಕ್ಷಣ ಶೂಟಿಂಗ್ ಶುರುವಾಗಲಿದೆ.