Just In
Don't Miss!
- Sports
ಭಾರತ vs ಆಸ್ಟ್ರೇಲಿಯಾ: 4ನೇ ಟೆಸ್ಟ್ ಬ್ರಿಸ್ಬೇನ್, ದಿನ 3, Live ಸ್ಕೋರ್
- News
ಬೆಳಗಾವಿಗೆ ಅಮಿತ್ ಶಾ; ಸಮಾವೇಶದಲ್ಲಿ 2 ಲಕ್ಷ ಜನರು ಭಾಗಿ
- Lifestyle
"ಭಾನುವಾರದ ರಾಶಿಫಲ: ಮೇಷ-ಮೀನದವರೆಗಿನ ದಿನ ಭವಿಷ್ಯ "
- Education
BEL Recruitment 2021: 205 ಟೆಕ್ನೀಶಿಯನ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Automobiles
ಟಾಟಾ ಆಲ್ಟ್ರೊಜ್ ಐಟರ್ಬೋ ಕಾರಿನ ಟೀಸರ್ ಬಿಡುಗಡೆ ಮಾಡಿದ ಟಾಟಾ ಮೋಟಾರ್ಸ್
- Finance
ಬಜೆಟ್ 2021: MSME ವಲಯಕ್ಕೆ ಏನು ಸಿಗಬಹುದು?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
KPL ಟ್ರೋಫಿ ಅನಾವರಣ ಮಾಡಿದ ಸುದೀಪ್ ಕೊಟ್ರು ಸರ್ಪ್ರೈಸ್ ಸುದ್ದಿ
ಕಿಚ್ಚ ಸುದೀಪ್ ಸಿನಿಮಾ ಬಿಟ್ಟರೆ ಅತಿ ಹೆಚ್ಚು ಇಷ್ಟ ಪಡುವುದು ಕ್ರಿಕೆಟ್. ಬಹುಶಃ ಆಕ್ಟರ್ ಆಗಿಲ್ಲ ಅಂದಿದ್ರೆ ಸುದೀಪ್ ಕ್ರಿಕೆಟರ್ ಆಗ್ತಿದ್ರು. ಈಗ ಆಕ್ಟರ್ ಆಗಿದ್ದರೂ ಕ್ರಿಕೆಟ್ ಬಿಟ್ಟಿಲ್ಲ. ಸಿಸಿಎಲ್, ಕೆಪಿಎಲ್, ಕೆಸಿಸಿ, ಹೀಗೆ ಹಲವು ಟೂರ್ನಿಗಳಲ್ಲಿ ತಂಡವನ್ನ ಕಟ್ಟಿ ಕ್ರಿಕೆಟ್ ಆಡುತ್ತಿದ್ದಾರೆ ಕಿಚ್ಚ.
ಕೆಸಿಸಿ ಸೀಸನ್ 3 ಶುರು: ಈ ಸಲ ಮೈಸೂರಿನಲ್ಲಿ ಪಂದ್ಯಾವಳಿ
ಸದ್ಯಕ್ಕೆ ಕೆಸಿಸಿ ಟೂರ್ನಿಯಲ್ಲಿ ಮಾತ್ರ ಸುದೀಪ್ ಆಡುತ್ತಿದ್ದು, ಈಗ ಭರ್ಜರಿ ಸುದ್ದಿ ನೀಡಿದ್ದಾರೆ. ಹೌದು, ಇತ್ತೀಚಿಗಷ್ಟೆ ಕೆಪಿಎಲ್ ಟ್ರೋಫಿ ಅ ಅನಾವರಣ ಮಾಡಿದ ಅಭಿನಯ ಚಕ್ರವರ್ತಿ ಅಭಿಮಾನಿಗಳಿಗೊಂದು ಖುಷಿಯ ವಿಚಾರ ಹೇಳಿದ್ರು. ಏನದು?

ಮತ್ತೆ ಕೆಪಿಎಲ್ ಗೆ ಕಿಚ್ಚ ಸುದೀಪ್
ಕರ್ನಾಟಕ ಪ್ರೀಮಿಯರ್ ಲೀಗ್ ನಲ್ಲಿ ಕಿಚ್ಚ ಸುದೀಪ್ ನೇತೃತ್ವದ ರಾಕ್ ಸ್ಟಾರ್ ತಂಡ ಭಾಗವಹಿಸಿತ್ತು. ಮೂರು ಆವೃತ್ತಿಗಳಲ್ಲಿ ಸೆಲೆಬ್ರಿಟಿಗಳ ತಂಡ ವೃತ್ತಿಪರತೆ ಆಟಗಾರರ ಜೊತೆ ಕ್ರಿಕೆಟ್ ಆಡಿದ್ದಾರೆ. ಆಮೇಲೆ ಇದ್ದಕಿದ್ದಂತೆ ರಾಕ್ ಸ್ಟಾರ್ ತಂಡ ಕೆಪಿಎಲ್ ಟೂರ್ನಿಯಿಂದ ಹೊರಬಂದಿತ್ತು. ಇದೀಗ, ಮತ್ತೆ ಕೆಪಿಎಲ್ ಆಡಲು ಮನಸ್ಸು ಮಾಡಿದ್ದಾರೆ ಸುದೀಪ್.
ಬಾಲಿವುಡ್ ಸ್ಟಾರ್ ನಟನ ಮಗಳ ಜೊತೆ ಕೆಎಲ್ ರಾಹುಲ್ ಡೇಟಿಂಗ್.?

ಮುಂದಿನ ಆವೃತ್ತಿಯಲ್ಲಿ ಕಿಚ್ಚನ ಇಲೆವನ್
ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯಲ್ಲಿ ಮಂಗಳವಾರ 8ನೇ ಆವೃತ್ತಿಯ ಕೆಪಿಎಲ್ ಟ್ರೂರ್ನಿಯ ಟ್ರೋಫಿ ಅನಾವರಣ ಮಾಡಲಾಯಿತು. ಈ ವೇಳೆ ಮಾತನಾಡಿದ ಸುದೀಪ್ ''ಮುಂದಿನ ಆವೃತ್ತಿಯಲ್ಲಿ ನಾವು ಆಡಲು ಸಿದ್ಧ ಇದ್ದೇವೆ. ಅವಕಾಶ ಕಲ್ಪಿಸಿದರೇ ನಾವೂ ಭಾಗಿಯಾಗುತ್ತೇವೆ'' ಎಂದು ಕೆ.ಎಸ್.ಸಿ.ಎ ಪದಾಧಿಕಾರಿಗಳಿಗೆ ಮನವಿ ಮಾಡಿದರು. ಅವರಿಂದಲೂ ಪಾಸಿಟೀವ್ ಪ್ರತಿಕ್ರಿಯೆ ಸಿಕ್ಕಿದೆ.

ರಾಕ್ ಸ್ಟಾರ್ ಅಥವಾ ಬುಲ್ಡೋಜರ್ಸ್?
ಕೆಪಿಎಲ್ ಟೂರ್ನಿಯ ಮೂರು ಆವೃತ್ತಿಯಲ್ಲಿ ರಾಕ್ ಸ್ಟಾರ್ ತಂಡ ಭಾಗಿಯಾಗಿದೆ. ಸುದೀಪ್ ಜೊತೆ ತೆಲುಗು, ಹಿಂದಿ, ತಮಿಳು ನಟರು ಕೂಡ ಸಾಥ್ ನೀಡಿದ್ದರು. ಬಹುಶಃ ಅದೇ ತಂಡ ಮತ್ತೆ ಕಂಬ್ಯಾಕ್ ಆಗುತ್ತಾ ಅಥವಾ ಸಿಸಿಎಲ್ ನಲ್ಲಿ ಆಡುವ ಕರ್ನಾಟಕ ಬುಲ್ಡೋಜರ್ಸ್ ತಂಡ ಕೆಪಿಎಲ್ ಪಂದ್ಯಾವಳಿ ಆಡುತ್ತಾ ಕಾದುನೋಡಬೇಕಿದೆ.

ಕೆಸಿಸಿ ತಯಾರಿಯಲ್ಲಿ ಸುದೀಪ್
ಸಿಸಿಎಲ್ ಟೂರ್ನಿ ಏಳು ಆವೃತ್ತಿ ನಡೆದಿದ್ದು, ಕಳೆದ ವರ್ಷ ಆಯೋಜನೆ ಮಾಡಿಲ್ಲ. ಬಳಿಕ ಸ್ಯಾಂಡಲ್ ವುಡ್ ಸ್ಟಾರ್ ಗಳೆಲ್ಲಾ ಸೇರಿ ಕನ್ನಡ ಚಲನಚಿತ್ರ ಕಪ್ (ಕೆಸಿಸಿ) ಟೂರ್ನಿ ನಡೆಸುತ್ತಿದೆ. ಈಗಾಗಲೇ ಎರಡು ಆವೃತ್ತಿ ಯಶಸ್ವಿಯಾಗಿ ಮುಗಿಸಿ ಈಗ ಮೂರನೇ ಆವೃತ್ತಿಗೆ ಸಜ್ಜಾಗುತ್ತಿದ್ದಾರೆ. ಮುಂದಿನ ವರ್ಷ ಕೆಪಿಎಲ್ ನಲ್ಲೂ ಭಾಗವಹಿಸುವ ಆಸಕ್ತಿ ತೋರಿದ್ದು, ಕ್ರಿಕೆಟ್ ಅಭಿಮಾನಿಗಳು ಸಂತಸ ತಂದಿದೆ.