For Quick Alerts
  ALLOW NOTIFICATIONS  
  For Daily Alerts

  ಶಿವಣ್ಣನ ಹುಟ್ಟುಹಬ್ಬಕ್ಕೆ ಸುದೀಪ್ ಕಡೆಯಿಂದ ಸರ್ಪ್ರೈಸ್: ಅಭಿಮಾನಿಗಳಲ್ಲಿ ಹ್ಯಾಟ್ರಿಕ್ ಹೀರೋ ಮನವಿ ಮಾಡಿದ್ದೇನು?

  |

  ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹುಟ್ಟುಹಬ್ಬ ಸಮೀಪಿಸುತ್ತಿದೆ. ಜುಲೈ 12ಕ್ಕೆ ಶಿವರಾಜ್ ಕುಮಾರ್ 58ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ. ಹ್ಯಾಟ್ರಿಕ್ ಹೀರೋ ಜನ್ಮದಿನವನ್ನು ಅಭಿಮಾನಿಗಳು ಹಬ್ಬದ್ದಂತೆ ಆಚರಣೆ ಮಾಡುತ್ತಾರೆ. ಅಭಿಮಾನಿಗಳ ಸಂಭ್ರಮ, ಸಡಗರ ಜೋರಾಗೆ ಇರುತ್ತೆ. ಈಗಾಗಲೆ ಅಭಿಮಾನಿಗಳು ಎಲ್ಲಾ ತಯಾರಿಗಳನ್ನು ಮಾಡಿಕೊಳ್ಳುತ್ತಿದ್ದರು.

  Shivarajkumar,ಶಿವರಾಜ್ ಕುಮಾರ್ ತಮ್ಮ ಹುಟ್ಟುಹಬ್ಬಕ್ಕೆ ಈ ಬಾರಿ ಏನು ಮಾಡಲಿದ್ದಾರೆ ಗೊತ್ತೇ | Filmibeat Kannada

  ಆದರೆ ಈ ಬಾರಿ ಶಿವಣ್ಣ ಹುಟ್ಟಹಬ್ಬಕ್ಕೆ ಬ್ರೇಕ್ ಬಿದ್ದಿದೆ. ಅದ್ದೂರಿ ಸಂಭ್ರಮ, ಸಡಗರ ಇರಲ್ಲ. ಅಪಾರ ಸಂಖ್ಯೆಯ ಅಭಿಮಾನಿಗಳು ಶಿವರಾಜ್ ಕುಮಾರ್ ಮನೆಯ ಮುಂದೆ ಬಂದು ಜಮಾಯಿಸಿರುತ್ತಾರೆ. ಆದರೆ ಈ ಬಾರಿ ಇದ್ಯಾವುದಕ್ಕೂ ಅವಕಾಶವಿಲ್ಲ. ಕೊರೊನಾ ವೈರಸ್ ಕಾರಣ ಯಾವುದೆ ಅದ್ದೂರಿ ಸಂಭ್ರಮ, ಸೆಲೆಬ್ರೇಷನ್ ನಡೆಯುತ್ತಿಲ್ಲ. ಹಾಗಾಗಿ ಶಿವಣ್ಣನ ಹುಟ್ಟುಹಬ್ಬ ಆಚರಣೆ ಕೂಡ ನಡೆಯುತ್ತಿಲ್ಲ. ಆದರೂ ಹ್ಯಾಟ್ರಿಕ್ ಹೀರೋ ಜನ್ಮದಿನಕ್ಕೆ ಒಂದಿಷ್ಟು ಸರ್ಪ್ರೈಸ್ ಗಳು ಕಾದಿವೆ. ಮುಂದೆ ಓದಿ..

  'ಶಿವಣ್ಣನ ಮಹೋತ್ಸವ'ಕ್ಕೆ ಸಜ್ಜಾಗುತ್ತಿದ್ದಾರೆ ಅಭಿಮಾನಿಗಳು'ಶಿವಣ್ಣನ ಮಹೋತ್ಸವ'ಕ್ಕೆ ಸಜ್ಜಾಗುತ್ತಿದ್ದಾರೆ ಅಭಿಮಾನಿಗಳು

  ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳ ಸಂಭ್ರಮ

  ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳ ಸಂಭ್ರಮ

  ಸಾಮಾಜಿಕ ಜಾಲತಾಣದಲ್ಲಿಯೆ ಅಭಿಮಾನಿಗಳು ಹಬ್ಬ ಆಚರಿಸಲು ಸಜ್ಜಾಗಿದ್ದಾರೆ. ಈಗಾಗಲೆ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ. ಹುಟ್ಟುಹಬ್ಬಕ್ಕೆ ಶಿವರಾಜ್ ಕುಮಾರ್ ಕಾಮನ್ ಡಿಪಿ ರಿಲೀಸ್ ಮಾಡಲು ಸಿದ್ಧತೆ ಮಾಡಿಕೊಂಡಿದ್ದಾರೆ. ವಿಶೇಷ ಅಂದರೆ ಶಿವರಾಜ್ ಕುಮಾರ್ ಅವರ ಕಾಮನ್ ಡಿಪಿಯನ್ನು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ರಿಲೀಸ್ ಮಾಡುತ್ತಿದ್ದಾರೆ.

  ಶಿವರಾಜ್ ಕುಮಾರ್ ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಗೆ ಕಾದಿದೆ ಬಿಗ್ ಗಿಫ್ಟ್ಶಿವರಾಜ್ ಕುಮಾರ್ ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಗೆ ಕಾದಿದೆ ಬಿಗ್ ಗಿಫ್ಟ್

  ಜುಲೈ 4ಕ್ಕೆ ಕಾಮನ್ ಡಿ ಪಿ ರಿಲೀಸ್

  ಜುಲೈ 4ಕ್ಕೆ ಕಾಮನ್ ಡಿ ಪಿ ರಿಲೀಸ್

  ಜುಲೈ 4, ಸಂಜೆ 5 ಗಂಟೆಗೆ ಸುದೀಪ್, ಶಿವರಾಜ್ ಕುಮಾರ್ ಅವರ ಹುಟ್ಟುಹಬ್ಬದ ಕಾಮನ್ ಡಿಪಿ ಬಿಡುಗಡೆ ಮಾಡುತ್ತಿದ್ದಾರೆ. ಈ ಬಗ್ಗೆ ಹ್ಯಾಟ್ರಿಕ್ ಹೀರೋ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡುತ್ತಿದ್ದಾರೆ. ಅದ್ದೂರಿ ಹುಟ್ಟುಹಬ್ಬದ ಆಚರಣೆ ಇಲ್ಲವಾದರು, ಅಭಿಮಾನಿಗಳು ಈ ಮೂಲಕ ಸಂಭ್ರಮಿಸುತ್ತಿದ್ದಾರೆ.

  ಅಭಿಮಾನಿಗಳಲ್ಲಿ ಶಿವಣ್ಣ ಮನವಿ

  ಅಭಿಮಾನಿಗಳಲ್ಲಿ ಶಿವಣ್ಣ ಮನವಿ

  ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಈ ಬಾರಿ ಹುಟ್ಟುಹಬ್ಬ ಆಚರಣೆ ಮಾಡುವುದು ಬೇಡ ಎಂದು ಮನವಿ ಮಾಡಿಕೊಂಡಿದ್ದಾರೆ. ಈ ಬಗ್ಗೆ ವಿಡಿಯೋ ಮಾಡಿ ಶೇರ್ ಮಾಡಿರುವ ಶಿವಣ್ಣ, "ಹುಟ್ಟುಹಬ್ಬದ ದಿನ ಮನೆಯಲ್ಲಿ ಇರುವುದಿಲ್ಲ. ಹುಟ್ಟುಹಬ್ಬಕ್ಕಿಂತ ನಿಮ್ಮ ಆರೋಗ್ಯ ಮುಖ್ಯ. ನನಗೂ ಬೇಸರವಾಗುತ್ತೆ. ಆದರೆ ಆರೋಗ್ಯ ಮುಖ್ಯ, ಆದಷ್ಟು ಬೇಗ ಕೊರೊನಾ ಹೋದಮೇಲೆ ಭೇಟಿಯಾಗೋಣ. ಯಾರು ಭಯಪಡಬೇಡಿ, ಧೈರ್ಯವಾಗಿರಿ. ಸಾಮಾಜಿಕ ಅಂತರ ಕಾಪಾಡಿ, ನಿಯಮ ಫಾಲೋ ಮಾಡಿ. ದೇವರು ಇದ್ದಾನೆ. ನಮ್ಮನ್ನು ಕಾಪಾಡುತ್ತಾನೆ. ಸುರಕ್ಷಿತವಾಗಿರಿ" ಎಂದು ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ.

  ಭಜರಂಗಿ-2 ಸಿನಿಮಾದ ಟೀಸರ್

  ಭಜರಂಗಿ-2 ಸಿನಿಮಾದ ಟೀಸರ್

  ಶಿವರಾಜ್ ಕುಮಾರ್ ಹುಟ್ಟುಹಬ್ಬಕ್ಕೆ ಭಜರಂಗಿ-2 ಸಿನಿಮಾದಿಂದ ಅಭಿಮಾನಿಗಳಿಗೆ ಬಿಗ್ ಗಿಫ್ಟ್ ಸಿಗುತ್ತಿದೆ. ಚಿತ್ರದ ಟೀಸರ್ ರಿಲೀಸ್ ಮಾಡುವ ಮೂಲಕ ಅಭಿಮಾನಿಗಳ ಮನತಣಿಸುತ್ತಿದೆ ಸಿನಿಮಾತಂಡ. ಹರ್ಷ ನಿರ್ದೇಶನದಲ್ಲಿ ಬರುತ್ತಿರುವ ಈ ಸಿನಿಮಾ ಅಭಿಮಾನಿಗಳಲ್ಲಿ ಭಾರಿ ನಿರೀಕ್ಷೆ ಮತ್ತು ಕುತೂಹಲ ಮೂಡಿಸಿದೆ.

  English summary
  Actor Sudeep will release Shivaraj kumar birthday common Dp on July 4th.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X