»   » ನಿಮ್ಮೂರಿಗೆ ಬರ್ತಿದೆ 'ಹೆಬ್ಬುಲಿ': ಯಾವಾಗ, ಎಲ್ಲೆಲ್ಲಿ?

ನಿಮ್ಮೂರಿಗೆ ಬರ್ತಿದೆ 'ಹೆಬ್ಬುಲಿ': ಯಾವಾಗ, ಎಲ್ಲೆಲ್ಲಿ?

Posted By:
Subscribe to Filmibeat Kannada

ಕಿಚ್ಚ ಸುದೀಪ್ ಇಷ್ಟರಲ್ಲೇ ನಿಮ್ಮೂರಿಗೆ ಭೇಟಿ ನೀಡುತ್ತಿದ್ದಾರೆ. ಸುದೀಪ್ ಅಭಿನಯದ 'ಹೆಬ್ಬುಲಿ' ಚಿತ್ರಕ್ಕೆ ರಾಜ್ಯಾದ್ಯಂತ ಭರ್ಜರಿ ಪ್ರತಿಕ್ರಿಯೆ ಸಿಕ್ಕಿದ್ದು, ಕಿಚ್ಚನಿಗೆ ಖುಷಿ ತಂದಿದೆ. ಹೀಗಾಗಿ, ಈ ಖುಷಿಯನ್ನ ಹಂಚಿಕೊಳ್ಳಲು ನಿಮ್ಮೂರಿನ ಚಿತ್ರಮಂದಿರಗಳಿಗೆ 'ಹೆಬ್ಬುಲಿ' ತಂಡ ಭೇಟಿ ಕೊಡುತ್ತಿದೆ.

ಮಾರ್ಚ್ 6 ರಿಂದ ಕರ್ನಾಟಕ ರಾಜ್ಯಾದ್ಯಂತ 'ಹೆಬ್ಬುಲಿ' ವಿಜಯಯಾತ್ರೆ ಶುರುವಾಗಲಿದ್ದು, ಸುದೀಪ್ ಮತ್ತು ಚಿತ್ರತಂಡ 'ಹೆಬ್ಬುಲಿ' ಪ್ರದರ್ಶನ ಕಾಣುತ್ತಿರುವ ಚಿತ್ರಮಂದಿರಗಳಿಗೆ ಭೇಟಿ ನೀಡುತ್ತಿದ್ದಾರೆ. ಅಂದ್ಹಾಗೆ, ಹೆಬ್ಬುಲಿ ಟೀಮ್, ಯಾವಾಗ, ಎಲ್ಲೆಲ್ಲಿ ಭೇಟಿ ನೀಡಲಿದ್ದಾರೆ ಎಂಬ ಮಾಹಿತಿ ಮುಂದೆ ಓದಿ.....

ಮಾರ್ಚ್ 6 ರಂದು 'ಹೆಬ್ಬುಲಿ'ಯಾತ್ರೆ

ಮಾರ್ಚ್ 6 ರಂದು ರಾಜ್ಯಾದ್ಯಂತ 'ಹೆಬ್ಬುಲಿ' ಯಾತ್ರೆ ಶುರುವಾಗಲಿದ್ದು, ಮೊದಲ ದಿನ ತುಮಕೂರು, ಚಿತ್ರದುರ್ಗ, ಬಳ್ಳಾರಿ, ದಾವಣೆಗೆರೆಗೆ ಕಿಚ್ಚ ಸುದೀಪ್ ಅಂಡ್ ಟೀಮ್ ಭೇಟಿ ನೀಡಲಿದೆ.

7 ರಂದು ಮಂಗಳವಾರ

ಎರಡನೇ ದಿನ (ಮಾರ್ಚ್ 7) ಹುಬ್ಬಳ್ಳಿ, ಧಾರವಾಡ, ಬೆಳಗಾವಿ ಚಿತ್ರಮಂದಿರಗಳಿಗೆ 'ಹೆಬ್ಬುಲಿ' ಚಿತ್ರತಂಡ ಭೇಟಿ ನೀಡಲಿದೆ. ಹೀಗಾಗಿ, ಕಿಚ್ಚನ ಅಭಿಮಾನಿಗಳಲ್ಲಿ ಸಂತಸ ಹೆಚ್ಚಾಗಿದೆ.

ಮೂರನೇ ದಿನ

'ಹೆಬ್ಬುಲಿ' ಗೆಲುವಿನ ಯಾತ್ರೆ ಮೂರನೇ ದಿನ ಶಿವಮೊಗ್ಗದ ಕಡೆ ಸಾಗಲಿದೆ. ಶಿವಮೊಗ್ಗ, ಅರಸಿಕೆರೆ, ಹಾಸನ ಜಿಲ್ಲೆಗಳಲ್ಲಿ ಸುದೀಪ್ ಅಂಡ್ ಟೀಮ್ ಅಭಿಮಾನಿಗಳ ಭೇಟಿ ಮಾಡಲಿದ್ದಾರೆ.

ಕೊನೆಯ ದಿನ

ಮಾರ್ಚ್ 9, ನಾಲ್ಕನೇ ದಿನ ಹಾಗೂ ಕೊನೆಯ ದಿನ 'ಹೆಬ್ಬುಲಿ' ಚಿತ್ರತಂಡ ಮೈಸೂರು ಹಾಗೂ ಮಂಡ್ಯ ನಗರಗಳಿಗೆ ಭೇಟಿ ನೀಡಲಿದೆ. ಈ ಮೂಲಕ 'ಹೆಬ್ಬುಲಿ' ಚಿತ್ರದ ಗೆಲುವಿನ ಖುಷಿಯನ್ನ ರಾಜ್ಯಾದ್ಯಂತ ಹಂಚಿಕೊಳ್ಳಲಿದ್ದಾರೆ.

'ಹೆಬ್ಬುಲಿ' 11ನೇ ದಿನ ಭರ್ಜರಿ ಪ್ರದರ್ಶನ

ಫೆಬ್ರವರಿ 23 ರಂದು ಬಿಡುಗಡೆಯಾಗಿದ್ದ 'ಹೆಬ್ಬುಲಿ' ಬಾಕ್ಸ್ ಅಫೀಸ್ ನ ಎಲ್ಲ ದಾಖಲೆಗಳನ್ನ ಪುಡಿ ಪುಡಿ ಮಾಡಿ 11 ದಿನ ಭರ್ಜರಿಯಾಗಿ ಪ್ರದರ್ಶನವಾಗುತ್ತಿದೆ. ಕೃಷ್ಣ ಈ ಚಿತ್ರವನ್ನ ನಿರ್ದೇಶನ ಮಾಡಿದ್ದು, ಸುದೀಪ್, ರವಿಚಂದ್ರನ್, ಅಮಲಾ ಪೌಲ್ ಮುಖ್ಯ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

English summary
Kiccaha Sudeep and 'Hebbuli' Team Will Visits to Theaters in All Over Karnataka. March 6th they will Starts Form Tumkur.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada