»   » ಪ್ರೀತಿ ಅಪ್ಪನ ಹುಟ್ಟುಹಬ್ಬಕ್ಕೆ ಪುತ್ರ ಕಿಚ್ಚ ಸುದೀಪ್ ವಿಶ್ ಮಾಡಿದ್ದು ಹೀಗೆ...

ಪ್ರೀತಿ ಅಪ್ಪನ ಹುಟ್ಟುಹಬ್ಬಕ್ಕೆ ಪುತ್ರ ಕಿಚ್ಚ ಸುದೀಪ್ ವಿಶ್ ಮಾಡಿದ್ದು ಹೀಗೆ...

Posted By:
Subscribe to Filmibeat Kannada

ಇಂದು ಕಿಚ್ಚ ಸುದೀಪ್ ರವರ ತಂದೆ ಸಂಜೀವ್ ಮಂಜಪ್ಪ ರವರ ಹುಟ್ಟುಹಬ್ಬ. ಜನ್ಮದಿನದ ಪ್ರಯುಕ್ತ ಪ್ರೀತಿಯ ಅಪ್ಪನಿಗೆ ಪುತ್ರ ಸುದೀಪ್ ಟ್ವಿಟ್ಟರ್ ಮೂಲಕ ಶುಭಾಶಯ ತಿಳಿಸಿದ್ದಾರೆ.

''ನನಗೆ ಜೀವನವನ್ನೇ ಉಡುಗೊರೆಯಾಗಿ ನೀಡಿ, ನನಗೆ ದಾರಿ ತೋರಿಸಿರುವ ನಿಮ್ಮ ಋಣವನ್ನು ನಾನು ಹೇಗೆ ತಾನೇ ತೀರಿಸಲು ಸಾಧ್ಯ. ಜಗತ್ತನ್ನು ನಾನು ಉತ್ತಮವಾಗಿ ನೋಡಲು ಕಲಿಸಿರುವ ನಿಮಗೆ ಧನ್ಯವಾದಗಳು. ಹುಟ್ಟುಹಬ್ಬದ ಶುಭಾಶಯಗಳು ಅಪ್ಪ'' ಎಂದು ಸುದೀಪ್ ಟ್ವಿಟ್ಟರ್ ಮೂಲಕ ತಮ್ಮ ತಂದೆಗೆ ಶುಭಾಶಯ ತಿಳಿಸಿದ್ದಾರೆ.

ಅಂದ್ಹಾಗೆ, ಸುದೀಪ್ ರವರ ತಂದೆ ಸಂಜೀವ್ ಮಂಜಪ್ಪ ಶಿವಮೊಗ್ಗ ಮೂಲದವರು. ಶಿವಮೊಗ್ಗದಿಂದ ಬೆಂಗಳೂರಿಗೆ ಬಂದ ಸಂಜೀವ್, 'ಸರೋವರ' ಎಂಬ ಹೋಟೆಲ್ ಶುರು ಮಾಡಿದರು.

Sudeep wishes his Father Sanjeev in Twitter

ಕಿಚ್ಚ ಸುದೀಪ್ ತಂದೆಗೆ ಅಮಿತಾಬ್ ಬಚ್ಚನ್ ಹೇಳಿದ ಮುತ್ತಿನಂಥ ಮಾತು

ಹೋಟೆಲ್ ಉದ್ಯಮದಲ್ಲಿ ಸಾಧನೆ ಮಾಡಿರುವ ತಂದೆ ಸಂಜೀವ್ ಅವರೇ ಪುತ್ರ ಸುದೀಪ್ ಗೆ ಸ್ಫೂರ್ತಿಯ ಚಿಲುಮೆ.

ಸಂಜೀವ್ ರವರಿಗೆ ನಮ್ಮ ಕಡೆಯಿಂದಲೂ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು...

English summary
Kiccha Sudeep has taken his twitter account to wish his Father on his birthday.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada