Just In
Don't Miss!
- News
ಚಿನ್ನ ಕಳ್ಳಸಾಗಣೆ: 28 ಕೋಟಿ ರೂಪಾಯಿ ಮೌಲ್ಯದ 55.61 ಕೆಜಿ ಚಿನ್ನ ವಶಪಡಿಸಿಕೊಂಡ DRI
- Automobiles
ರೋಡ್ ಟೆಸ್ಟಿಂಗ್ನಲ್ಲಿ ಕಂಡುಬಂದ ಹ್ಯುಂಡೈ ಕ್ರೆಟಾ 7 ಸೀಟರ್ ವರ್ಷನ್
- Lifestyle
ಶುಕ್ರವಾರದ ರಾಶಿಫಲ: ಮೇಷ-ಮೀನದವರೆಗಿನ ದಿನ ಭವಿಷ್
- Sports
ಐಎಸ್ಎಲ್: ಈಸ್ಟ್ ಬೆಂಗಾಲ್ ಅಜೇಯ ನಡೆಗೆ ಬೆಸ್ಟ್ ಮುಂಬೈ ಸವಾಲು
- Finance
ಬಜೆಟ್ 2021: ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ಜನವರಿ 30ರಂದು ಸರ್ವ ಪಕ್ಷಗಳ ಸಭೆ
- Education
BMRCL Recruitment 2021: ಸೀನಿಯರ್ ಅರ್ಬನ್ ಮತ್ತು ಟ್ರಾನ್ಸ್ ಪೋರ್ಟ್ ಪ್ಲಾನರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
'ವಿಲ್ಸನ್ ಗಾರ್ಡನ್ ಟು ಫ್ಯಾಂಟಮ್': ಜಾಕ್ ಮಂಜುಗೆ ಶುಭಕೋರಿದ ಸುದೀಪ್
ಕನ್ನಡ ಚಿತ್ರರಂಗದ ಖ್ಯಾತ ನಿರ್ಮಾಪಕ, ವಿತರಕ ಜಾಕ್ ಮಂಜು ಅವರಿಗೆ ಹುಟ್ಟುಹಬ್ಬದ ಸಂಭ್ರಮ. ಮಂಜು ಅವರ ಹುಟ್ಟುಹಬ್ಬದ ಪ್ರಯುಕ್ತ ಹಲವು ನಟ-ನಟಿಯರು, ತಂತ್ರಜ್ಞರು, ನಿರ್ದೇಶಕರುಗಳು ಶುಭಾಶಯ ತಿಳಿಸಿದ್ದಾರೆ. ನಟ ಕಿಚ್ಚ ಸುದೀಪ್ ಸಹ ತಮ್ಮ ಸ್ನೇಹಿತ, ಹಿತೈಷಿ ಹಾಗೂ ಆಪ್ತ ಸ್ನೇಹಿತನ ಜನುಮದಿನಕ್ಕೆ ಶುಭಕೋರಿದ್ದಾರೆ.
ಟ್ವಿಟ್ಟರ್‌ನಲ್ಲಿ ಜಾಕ್ ಮಂಜು ಅವರಿಗೆ ವಿಶ್ ಮಾಡಿರುವ ಸುದೀಪ್ ತಮ್ಮ ಹಳೆಯ ದಿನಗಳನ್ನು ಮೆಲುಕು ಹಾಕಿದ್ದಾರೆ. ಒಂದು ಸಮಯದಲ್ಲಿ ವಿಲ್ಸನ್ ಗಾರ್ಡನ್‌ನಲ್ಲಿ ಒಟ್ಟಿಗೆ ಕ್ರಿಕೆಟ್ ಆಡುತ್ತಿದ್ದ ದಿನಗಳನ್ನು ಸ್ಮರಿಸಿಕೊಂಡಿದ್ದಾರೆ. ಮುಂದೆ ಓದಿ...
ಹೈದರಾಬಾದ್ಗೆ ಬಾಯ್ ಹೇಳಿದ ಸುದೀಪ್, 'ಅದ್ಭುತ ಅನುಭವ' ಎಂದ ನಟ

ವಿಲ್ಸನ್ ಗಾರ್ಡನ್ ಟು ಫ್ಯಾಂಟಮ್
''ಶಾಲಾ ದಿನಗಳಲ್ಲಿ ವಿಲ್ಸನ್ ಗಾರ್ಡನ್‌ನಲ್ಲಿರುವ ಹೊಂಬೇಗೌಡ ಮೈದಾನದಲ್ಲಿ ಕ್ರಿಕೆಟ್ ಆಡುತ್ತಿದ್ದ ಸಮಯದಿಂದ, ಫ್ಯಾಂಟಮ್ ಸಿನಿಮಾದವರೆಗೂ ನಮ್ಮ ಈ ಜರ್ನಿ ಅತ್ಯಂತ ಸ್ಮರಣೀಯ ದಿನಗಳು. ಹುಟ್ಟುಹಬ್ಬದ ಶುಭಾಶಯಗಳು ನನ್ನ ಆತ್ಮೀಯ ಸ್ನೇಹಿತ, ಸಹೋದರ. ಸದಾ ಖುಷಿಯಿಂದಿರು'' ಎಂದು ಸುದೀಪ್ ಟ್ವೀಟ್ ಮಾಡಿದ್ದಾರೆ.

'ಅಂಬಿ ನಿಂಗೆ ವಯಸ್ಸಾಯ್ತೋ' ನಿರ್ಮಾಪಕ
ಕನ್ನಡದ ಹಲವು ಹಿಟ್ ಚಿತ್ರಗಳನ್ನು ವಿತರಣೆ ಮಾಡಿರುವ ಖ್ಯಾತಿ ಹೊಂದಿದ್ದಾರೆ ಜಾಕ್ ಮಂಜು. ರೆಬೆಲ್ ಸ್ಟಾರ್ ಅಂಬರೀಶ್ 'ಅಂಬಿ ನಿಂಗೆ ವಯಸ್ಸಾಯ್ತೋ' ಚಿತ್ರವನ್ನು ನಿರ್ಮಾಣ ಸಹ ಮಾಡಿದ್ದಾರೆ. ಇದು ಅಂಬರೀಶ್ ನಟಿಸಿದ್ದ ಕೊನೆಯ ಸಿನಿಮಾ ಆಗಿತ್ತು.

'ಫ್ಯಾಂಟಮ್' ಚಿತ್ರಕ್ಕೂ ಬಂಡವಾಳ
ಕಿಚ್ಚ ಸುದೀಪ್ ನಟನೆಯಲ್ಲಿ ತಯಾರಾಗುತ್ತಿರುವ 'ಫ್ಯಾಂಟಮ್' ಸಿನಿಮಾಗೂ ಜಾಕ್ ಮಂಜು ಬಂಡವಾಳ ಹಾಕುತ್ತಿದ್ದಾರೆ. ಶೀತಲ್ ಶೆಟ್ಟಿ ನಿರ್ದೇಶನದ 'ವಿಂಡೋಸೀಟ್' ಚಿತ್ರಕ್ಕೂ ಜಾಕ್ ಮಂಜು ನಿರ್ಮಾಪಕರು. ಕೇವಲ ಸಿನಿಮಾಗಳಲ್ಲಿ ಮಾತ್ರವಲ್ಲದೇ, ಸಿಸಿಎಲ್ ಟೂರ್ನಿ, ಕೆಸಿಸಿ ಟೂರ್ನಿ ಸೇರಿದಂತೆ ಹಲವು ಕ್ರಿಕೆಟ್ ಟೂರ್ನಿಗಳಲ್ಲಿ ಜಾಕ್ ಮಂಜು ತೊಡಗಿಕೊಂಡಿದ್ದಾರೆ.

ಸುದೀಪ್ ಹಿಂದೆ ಜಾಕ್ ಮಂಜು
ಅಂದ್ಹಾಗೆ, ಕಿಚ್ಚ ಸುದೀಪ್ ಅವರಿಗೆ ಜಾಕ್ ಮಂಜು ಅವರು ಬಹಳ ಆತ್ಮೀಯರು. ಸಿನಿಮಾ ಇಂಡಸ್ಟ್ರಿ ಹೊರತಾಗಿಯೂ ಉತ್ತಮ ಒಡನಾಡಿಗಳು. ಸುದೀಪ್ ಅವರ ಬಹುತೇಕ ಸಮಾಜಮುಖಿ ಕೆಲಸಗಳ ಹಿಂದೆ ಜಾಕ್ ಮಂಜು ಇದ್ದೇ ಇರ್ತಾರೆ. ಅದೇ ರೀತಿ ಮಂಜು ಅವರು ಕೆಲಸಗಳ ಹಿಂದೆ ಸುದೀಪ್ ಧೈರ್ಯವಾಗಿ ನಿಂತಿರ್ತಾರೆ.