For Quick Alerts
  ALLOW NOTIFICATIONS  
  For Daily Alerts

  ಶಿವರಾಜ್ ಕುಮಾರ್ ಸಿನಿಯಾನಕ್ಕೆ 35 ವರ್ಷ: ಶುಭಕೋರಿದ ಕಿಚ್ಚ ಸುದೀಪ್

  |

  ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಚಿತ್ರರಂಗಕ್ಕೆ ಕಾಲಿಟ್ಟು 35 ವರ್ಷಗಳು ಪೂರೈಸಿದೆ. ಆನಂದ್ ಸಿನಿಮಾದಿಂದ ಪ್ರಾರಂಭವಾದ ಶಿವಣ್ಣ ಸಿನಿಯಾನ ಯಶಸ್ವಿಯಾಗಿ 35 ವರ್ಷಗಳನ್ನು ಸಂಪೂರ್ಣ ಮಾಡಿದೆ. 120ಕ್ಕೂ ಅಧಿಕ ಸಿನಿಮಾಗಳನ್ನು ಮಾಡಿರುವ ಶಿವಣ್ಣ ಈಗಲೂ ಸ್ಯಾಂಡಲ್ ವುಡ್ ನ ಸಖತ್ ಬ್ಯುಸಿಯಸ್ಟ್ ನಟ.

  35 ವರ್ಷದ ಸಂಭ್ರಮವನ್ನು ಶಿವಣ್ಣ ಅಭಿಮಾನಿಗಳೊಂದಿಗೆ ಆಚರಿಸಿದ್ದಾರೆ. ಕೇಕ್ ಕತ್ತರಿಸಿ ಸಂತಸ ಪಟ್ಟಿದ್ದಾರೆ. ಶಿವಣ್ಣ 35 ವರ್ಷದ ಸಿನಿಯಾನಕ್ಕೆ ಅಭಿಮಾನಿಗಳು ಮತ್ತು ಚಿತ್ರರಂಗದ ಗಣ್ಯರು ಶುಭಕೋರಿದ್ದಾರೆ. ಹ್ಯಾಟ್ರಿಕ್ ಹೀರೋ 35 ವರ್ಷದ ಜರ್ನಿಗೆ ಕಿಚ್ಚ ಸುದೀಪ್ ಸಹ ಶುಭಕೋರಿದ್ದಾರೆ.

  ಅಂದು ಬಹಳ ಅತ್ತಿದ್ದೆ: ಹಳೆ ನೆನಪಿಗೆ ಜಾರಿದ ಶಿವಣ್ಣ

  ಇತ್ತೀಚಿಗಷ್ಟೆ ಚಿತ್ರರಂಗದಲ್ಲಿ 25 ವರ್ಷ ಪೂರೈಸಿದ ಸಂಭ್ರಮವನ್ನು ಆಚರಿಸಿದ ಸುದೀಪ್ 35 ವರ್ಷಪೂರೈಸಿದ ಶಿವಣ್ಣ ಅವರಿಗೆ ಸಾಮಾಜಿಕ ಜಾಲತಾಣದ ಮೂಲಕ ವಿಶ್ ಮಾಡಿದ್ದಾರೆ. 'ಚಿತ್ರದಲ್ಲಿ 35 ವರ್ಷ ಪೂರ್ಣಗೊಳಿಸಿದ ವರ್ಸಟೈಲ್ ನಟ ಶಿವಣ್ಣ ಅವರಿಗೆ ಶುಭಾಶಯಗಳು. ದೊಡ್ಡ ಸಾಧನೆ ಇದು. ಚಿತ್ರರಂಗದಲ್ಲಿ ನೀವು ಮೈಲುಗಲ್ಲು ಸಾಧಿಸಿದ್ದೀರಿ. ಸಂತೋಷವಾಗಿರಿ' ಎಂದು ಹೇಳಿದ್ದಾರೆ.

  35 ವರ್ಷದ ಸಿನಿಮಾ ಜರ್ನಿಯಲ್ಲಿ ಶಿವಣ್ಣ ಸಾಕಷ್ಟು ಏಳು ಬೀಳುಗಳನ್ನು ಕಂಡಿದ್ದಾರೆ. 58 ವರ್ಷದ ಶಿವಣ್ಣ ಕೈಯಲ್ಲಿ ಈಗಲೂ ಸಾಲು ಸಾಲು ಸಿನಿಮಾಗಳಿವೆ. ಸದ್ಯ ಭಜರಂಗಿ-2 ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ.

  ಇಂಡಸ್ಟ್ರಿ ಹಿಟ್ ಲೆಕ್ಕಾನೆ ಇಲ್ಲ ಬಿಡಿ | Shivarajkumar

  ಈ ಬಗ್ಗೆ ಮಾಧ್ಯಮದವರ ಜೊತೆ ಮಾತನಾಡಿದ ಶಿವಣ್ಣ, ನಿಮ್ಮೆಲ್ಲರ ಪ್ರೀತಿಯಿಂದ ನನಗೆ ಇಷ್ಟು ಎನರ್ಜಿ ಇದೆ. ಚಿತ್ರರಂಗ, ಅಭಿಮಾನಿಗಳು, ಮಾಧ್ಯಮ ಎಲ್ಲರ ಸಹಕಾರದಿಂದ ಇಷ್ಟು ವರ್ಷ ಪೂರೈಸಿದ್ದೇನೆ. ಈ ಹೆಸರು, ಸ್ಟಾರ್ ಗಿರಿ ಎಲ್ಲವೂ ಅಭಿಮಾನಿಗಳಿಂದ ಸಿಕ್ಕಿದ್ದು' ಎಂದು ಹೇಳಿದ್ದಾರೆ.

  English summary
  Sudeep wishes to shivaraj kumar for completes 35 years in film industry.
  -->

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X