»   » ಸುದೀಪ್-ಯಶ್-ಶಿವಣ್ಣ ಕ್ರಿಕೆಟ್ ಆಡಿದ್ರು: ನೋಡೋದಕ್ಕೆ ಬಂದ್ದಿದವರು ಯಾರು ಗೊತ್ತಾ.?

ಸುದೀಪ್-ಯಶ್-ಶಿವಣ್ಣ ಕ್ರಿಕೆಟ್ ಆಡಿದ್ರು: ನೋಡೋದಕ್ಕೆ ಬಂದ್ದಿದವರು ಯಾರು ಗೊತ್ತಾ.?

Posted By:
Subscribe to Filmibeat Kannada

'ಕನ್ನಡ ಚಲನಚಿತ್ರ ಕಪ್' ಕ್ರಿಕೆಟ್ ಟೂರ್ನಮೆಂಟ್ ಮೊದಲ ಆವೃತ್ತಿ ಯಶಸ್ವಿಯಾಗಿ ಮುಗಿದಿದೆ. ಮೊದಲ ಸೀಸನ್ ನಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ತಂಡ ವಿಜಯಶಾಲಿ ಆಗಿ ಹೊರಹೊಮ್ಮಿದೆ.

ಈ ಪಂದ್ಯಗಳನ್ನ ಅದೇಷ್ಟೋ ಅಭಿಮಾನಿಗಳು ನೋಡಿಲ್ಲ. ಸದ್ಯದಲ್ಲೇ 'ಜೀ-ಕನ್ನಡ' ವಾಹಿನಿಯಲ್ಲಿ ಪ್ರಸಾರವಾಗಲಿದೆ. ಹಾಗಿದ್ರೆ, ಈ ಲೀಗ್ ನಲ್ಲಿ ಯಾರೆಲ್ಲಾ ಭಾಗಿಯಾಗಿದ್ದರು ಮತ್ತು ಮೈದಾನದಲ್ಲಿ ಹೇಗೆ ಮಿಂಚಿದರು ಎಂಬುದು ಕುತೂಹಲ.

ಕೆಸಿಸಿ ಕಪ್ ಚಾಂಪಿಯನ್ಸ್ ಆದ ಶಿವಣ್ಣ ಮತ್ತು ತಂಡ

ಸುದೀಪ್, ಶಿವರಾಜ್ ಕುಮಾರ್, ಪುನೀತ್ ರಾಜ್ ಕುಮಾರ್, ಯಶ್ ಸೇರಿದಂತೆ ಹಲವು ಸಿನಿತಾರೆಯರು ಈ ಪಂದ್ಯಗಳನ್ನ ನೋಡಲು ಬಂದಿದ್ದರು. ಕೆಲವು ಮೈದಾನಕ್ಕೀಳಿದು ಆಟವಾಡಿದ್ರೆ, ಮತ್ತೆ ಕೆಲವರು ಮೈದಾನದ ಹೊರಗೆ ಕೂತು ಪ್ರೋತ್ಸಾಹ ನೀಡಿದ್ದಾರೆ. ಹಾಗಿದ್ರೆ, ಕೆಸಿಸಿ ಲೀಗ್ ನಲ್ಲಿ ಯಾರೆಲ್ಲ ಕಾಣಿಸಿಕೊಂಡರು ಎಂಬುದನ್ನ ಚಿತ್ರಗಳ ಸಮೇತ ನೋಡಿ....ಮುಂದೆ ಓದಿ....

ಮಾಲಾಶ್ರೀ ಮಿಂಚಿಂಗ್

ಕೆಸಿಸಿ ಲೀಗ್ ನಲ್ಲಿ ಎಲ್ಲರಿಗೂ ಬೂಸ್ಟ್ ನೀಡಿದ್ದು ನಟಿ ಮಾಲಾಶ್ರೀ. ಯಾವುದೇ ಒಂದು ಟೀಮ್ ಪರವಾಗಿ ಇರದ ಮಾಲಾಶ್ರೀ, ಎಲ್ಲ ತಂಡಗಳಿಗೂ ಜೋಶ್ ತುಂಬಿದರು. ಶಿವಣ್ಣ ಮತ್ತು ಸುದೀಪ್ ಅವರ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡು ತಾವು ಕೂಡ ಎಂಜಾಯ್ ಮಾಡಿದ್ರು.

ಶ್ರೀಮುರಳಿ ಪವರ್

ರೋರಿಂಗ್ ಸ್ಟಾರ್ ಶ್ರೀಮುರಳಿ ಕೂಡ ಕ್ರಿಕೆಟ್ ಆಡಲಿಲ್ಲ. ಆದ್ರೆ, ಸ್ಯಾಂಡಲ್ ವುಡ್ ಸ್ಟಾರ್ ಗಳಿಗೆ ಪವರ್ ಕೊಡಲು ಕ್ರೀಡಾಂಗಣಕ್ಕೆ ಬಂದಿದ್ದರು. ತಂಡಗಳಿಗೆ ಕಿಕ್ ನೀಡಿ ಕೆಸಿಸಿ ಟೂರ್ನಿಯನ್ನ ರಂಗೇರಿಸಿದರು.

ರೆಬೆಲ್ ಸ್ಟಾರ್ ಅಂಬಿ

ಇನ್ನು ಕನ್ನಡ ಚಿತ್ರರಂಗದ ಹಿರಿಯ ನಟ, ಕಲಾವಿದರ ಸಂಘದ ಅಧ್ಯಕ್ಷ ರೆಬೆಲ್ ಸ್ಟಾರ್ ಅಂಬರೀಶ್ ಕೂಡ ಕೆಸಿಸಿ ಲೀಗ್ ನೋಡಲು ಬಂದಿದ್ದರು. ಕರ್ನಾಟಕ ವಿಧಾನಸಭೆ ಚುನಾವಣೆಯ ಬೆಳವಣಿಗೆಗಳ ಮಧ್ಯೆಯೂ ಅಂಬಿ ನೆಲಮಂಗಲಕ್ಕೆ ಬಂದಿದ್ದು, ಸಿನಿತಾರೆಯರಿಗೆ ಮತ್ತಷ್ಟು ಜೋಶ್ ಹೆಚ್ಚಿಸಿತ್ತು.

ಜಗ್ಗೇಶ್ ಸ್ಪೆಷಲ್ ಎಂಟ್ರಿ

ಕೆಸಿಸಿ ಅರಂಭವಾದ ಮೊದಲ ದಿನ ಅಂದ್ರೆ ಶನಿವಾರ ನವರಸಕ ನಾಯಕ ಜಗ್ಗೇಶ್ ಅವರು ಕ್ರಿಕೆಟ್ ನೋಡಲು ಹೋಗಿದ್ರು. ಆಟಗಾರರಿಗೆ ತಮ್ಮದೇ ಆದ ಸ್ಟೈಲ್ ನಲ್ಲಿ ವಿಶ್ ಮಾಡಿ ಗಮನ ಸೆಳೆದ್ರು.

ಚಿಕ್ಕಣ್ಣ-ಕೆ ಮಂಜು

ಇನ್ನು ಕೆಸಿಸಿ ಲೀಗ್ ನಲ್ಲಿ ಹಲವು ನಿರ್ಮಾಪಕರು ಕೂಡ ಆಟವಾಡುತ್ತಿದ್ದಾರೆ. ಈ ಮಧ್ಯೆ ಗಂಡುಗಲಿ ನಿರ್ಮಾಪಕ ಕೆ ಮಂಜು ಮತ್ತು ಹಾಸ್ಯ ನಟ ಚಿಕ್ಕಣ್ಣ ಕೂಡ ಆಟಗಾರರ ಡಗ್ ಔಟ್ ನಲ್ಲಿ ಕಾಣಿಸಿಕೊಂಡರು.

ಪ್ರಿಯಾ ಮತ್ತು ಗೀತಾ ಶಿವರಾಜ್ ಕುಮಾರ್

ಸ್ಟಾರ್ ಆಟಗಾರರ ಜೊತೆ ಸ್ಟಾರ್ ನಟರ ಪತ್ನಿಯರು ಕೂಡ ಕ್ರಿಕೆಟ್ ಲೀಗ್ ಗೆ ಸಾಥ್ ನೀಡಿದರು. ಸುದೀಪ್ ಅವರ ಪತ್ನಿ ಪ್ರಿಯಾ ಸುದೀಪ್, ಶಿವರಾಜ್ ಕುಮಾರ್ ಅವರ ಮಡದಿ ಗೀತಾ ಶಿವರಾಜ್ ಕುಮಾರ್ ಕೂಡ ಕ್ರಿಕೆಟ್ ಹಬ್ಬಕ್ಕೆ ಮೆರಗು ನೀಡಿದರು.

'ಡಿ ಬ್ರದರ್ಸ್' ಪ್ರೀಮಿಯರ್ ಲೀಗ್ ನ ಉದ್ದೇಶವೇನು?

ಯಶ್-ಸುದೀಪ್-ಪುನೀತ್-ಶಿವಣ್ಣ

ಇನ್ನು ಇವರೆಲ್ಲರನ್ನು ಹೊರತು ಪಡಿಸಿದ್ರೆ, ಪ್ರತ್ಯೇಕ ತಂಡಗಳಲ್ಲಿ ಆಟವಾಡಿದ ಶಿವರಾಜ್ ಕುಮಾರ್, ಸುದೀಪ್, ಪುನೀತ್ ರಾಜ್ ಕುಮಾರ್, ಯಶ್, ರಕ್ಷಿತ್ ಶೆಟ್ಟಿ ಎಲ್ಲವರೂ ಮೈದಾನದಲ್ಲಿ ಬ್ಯಾಟ್-ಬಾಲ್ ಹಿಡಿದು ಮಿಂಚಿದರು.

English summary
Kiccha Sudeep, yash, srimurali, puneeth rajkumar, shiva rajkumar, malashree, ambarish, rakshith shetty participated in Kcc Cricket Tournaments. check out in pics.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X