»   » ಸುದೀಪ್-ಪ್ರಿಯಾ ವಿಚ್ಛೇದನ ಪ್ರಕರಣಕ್ಕೆ ಟ್ವಿಸ್ಟ್! ಜೂನ್ 14 ರಂದು ಕಾದಿದೆಯಾ ಸಿಹಿ ಸುದ್ದಿ!

ಸುದೀಪ್-ಪ್ರಿಯಾ ವಿಚ್ಛೇದನ ಪ್ರಕರಣಕ್ಕೆ ಟ್ವಿಸ್ಟ್! ಜೂನ್ 14 ರಂದು ಕಾದಿದೆಯಾ ಸಿಹಿ ಸುದ್ದಿ!

Posted By:
Subscribe to Filmibeat Kannada

ಕಿಚ್ಚ ಸುದೀಪ್ ಮತ್ತು ಪ್ರಿಯಾ ದಂಪತಿಯ ವಿಚ್ಛೇದನ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕೌಟುಂಬಿಕ ನ್ಯಾಯಾಲಯ ಇಬ್ಬರಿಗೂ ಖಡಕ್ ಸೂಚನೆ ಕೊಟ್ಟಿದೆ. ಇಂದು (ಮಾರ್ಚ್ 9) ಸುದೀಪ್ ದಂಪತಿಯ ವಿಚ್ಛೇದನ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್, ರಾಜಿ ಸಂಧಾನವಾಗಿದ್ರೆ, ಕೋರ್ಟ್ ಗೆ ಸೂಚಿಸಿ, ಅರ್ಜಿ ವಾಪಸ್ ಪಡೆಯಿರಿ ಎಂದು ಕೊನೆಯ ಅವಕಾಶ ನೀಡಿದೆ.[ಕಿಚ್ಚ ಸುದೀಪ್ ದಂಪತಿ ವಿರುದ್ಧ ಗರಂ ಆದ ಕೌಟುಂಬಿಕ ಕೋರ್ಟ್!]

ಅರ್ಜಿ ಸಲ್ಲಿಸಿದ ನಂತರ ಇದುವರೆಗೂ ಇಬ್ಬರು ಕೂಡ ಕೋರ್ಟ್ ಗೆ ಹಾಜರಾಗಿಲ್ಲ. ಹೀಗಾಗಿ, ಸುದೀಪ್ ಮತ್ತು ಪ್ರಿಯಾ ಮತ್ತೆ ಒಟ್ಟಾಗಿ ಜೀವನ ನಡೆಸುವ ಆಸಕ್ತಿ ಹೊಂದಿರಬಹುದು ಎಂದು ಹೇಳಲಾಗ್ತಿದೆ. ಇದಕ್ಕೆ ಪುಷ್ಠಿ ಕೊಡುವಂತಹ ಕೆಲವು ಘಟನೆಗಳು ಸಾಕ್ಷಿಯಾಗಿದೆ.

'ಕೋರ್ಟ್'ನಿಂದ ಕೊನೆಯ ಅವಕಾಶ!

ಇಂದು ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯದಲ್ಲಿ ಸುದೀಪ್ ದಂಪತಿಯ ಅರ್ಜಿ ವಿಚಾರಣೆ ನಡೆಸಿದ ನ್ಯಾಯಧೀಶರು, ಸುದೀಪ್ ದಂಪತಿಗೆ ಕೊನೆಯ ಅವಕಾಶ ನೀಡಿದೆ. ರಾಜಿ ಆಗಿದ್ರೆ, ಕೋರ್ಟ್ ಗೆ ತಿಳಿಸಿ ಅಥವಾ ವಿಚಾರಣೆಗೆ ಹಾಜರಾಗಿ ಎಂದು ಖಡಕ್ ಆಗಿ ಸೂಚಿಸಿದೆ.

ಜೂನ್ 14 ರಂದು ನಿರ್ಧಾರ!

ಮುಂದಿನ ವಿಚಾರಣೆಯನ್ನ ಜೂನ್ 14ಕ್ಕೆ ಮುಂದೂಡಿದ್ದು, ಇದು ಸುದೀಪ್ ಮತ್ತು ಪ್ರಿಯಾ ಅವರಿಗೆ ಕೊನೆಯ ಅವಕಾಶವಾಗಿದೆ. ಅಂದು ಇಬ್ಬರು ರಾಜಿ ಮಾಡಿಕೊಳ್ಳಬಹುದು ಅಥವಾ ನ್ಯಾಯಾಲಯಕ್ಕೆ ಹಾಜರಾಗಿ ವಿಚಾರಣೆಗೆ ಸಹಕರಿಸಬೇಕಾಗಿದೆ.

ಒಂದು ಬಾರಿಯೂ ಕೋರ್ಟಿಗೆ ಹಾಜರಾಗಿಲ್ಲ ಯಾಕೆ?

ಅರ್ಜಿ ಸಲ್ಲಿಸಿದ ಬಳಿಕ, ಇದುವರೆಗೂ ಒಂದು ಬಾರಿಯೂ ಸುದೀಪ್ ಮತ್ತು ಪ್ರಿಯಾ ದಂಪತಿ ಕೌಟೂಂಬಿಕ ನ್ಯಾಯಾಲಯಕ್ಕೆ ಹಾಜರಾಗದೆ ಇರುವುದು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ. ಇಷ್ಟು ದಿನ ಸುದೀಪ್ ಪರವಾಗಿ ಅವರ ಸಹೋದರಿ ಹಾಗೂ ಪ್ರಿಯಾ ಪರವಾಗಿ ವಕೀಲರು ಮಾತ್ರ ಕೋರ್ಟಿಗೆ ಹಾಜರಾಗಿದ್ದರು.[ವಿಚ್ಛೇದನ ಅರ್ಜಿ ವಿಚಾರಣೆ: ಕೋರ್ಟ್ ಗೆ ಸುದೀಪ್ ದಂಪತಿ ಗೈರು]

ಒಟ್ಟಾಗಿ ಕಾರ್ಯಕ್ರಮಗಳಲ್ಲಿ ಭಾಗಿ!

ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ ಬಳಿಕವೂ ಸುದೀಪ್ ಮತ್ತು ಪ್ರಿಯಾ ದಂಪತಿ ಒಟ್ಟಾಗಿ ಕೆಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದರು. 'ಜಿಗರಥಂಡಾ' ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮ ಸೇರಿದಂತೆ ಮತ್ತೆ ಕೆಲವು ಕಡೆ ಒಟ್ಟಾಗಿ ಕಾಣಿಸಿಕೊಂಡಿದ್ದರು.

ಮಗಳ ಹುಟ್ಟುಹಬ್ಬವನ್ನ ಒಟ್ಟಾಗಿ ಆಚರಿಸಿದ್ದ ದಂಪತಿ!

ಈ ಮಧ್ಯೆ ಸುದೀಪ್ ಅವರ ಮಗಳ ಹುಟ್ಟುಹಬ್ಬವನ್ನ ಸುದೀಪ್ ಮತ್ತು ಪ್ರಿಯಾ ಇಬ್ಬರು ಸೇರಿ ಆಚರಿಸಿದ್ದು ಇಬ್ಬರ ಸಂಬಂಧದ ಬಗ್ಗೆ ಮತ್ತಷ್ಟು ಕುತೂಹಲ ಮೂಡಿಸಿತ್ತು.

'ಹೆಬ್ಬುಲಿ' ಚಿತ್ರದ ಬಗ್ಗೆ ಸಂತಸ ವ್ಯಕ್ತಪಡಿಸಿದ್ದ ಪ್ರಿಯಾ!

ಇತ್ತೀಚೆಗಷ್ಟೇ ಸುದೀಪ್ ಅಭಿನಯದ 'ಹೆಬ್ಬುಲಿ' ಚಿತ್ರದ ಬಗ್ಗೆ ಪ್ರಿಯಾ ಅವರು ಮೆಚ್ಚುಗೆ ಮಾತುಗಳನ್ನಾಡಿದ್ದರು. ಈ ಕುರಿತು ಫೆಬ್ರವರಿ 25 ರಂದು ಟ್ವೀಟ್ ಕೂಡ ಮಾಡಿದ್ದರು. ''ಸುದೀಪ್ ಕ್ಲಾಸ್ ಮತ್ತು ಮಾಸ್ ಆಡಿಯೆನ್ಸ್ ಗಾಗಿ ಒಳ್ಳೆ ಸಿನಿಮಾ ಮಾಡಿದ್ದಾರೆ. 'ಹೆಬ್ಬುಲಿ' ಒಂದು ಪರಿಪೂರ್ಣ ಮನರಂಜನಾತ್ಮಕ ಸಿನಿಮಾ'' ಎಂದು ವಿಮರ್ಶೆ ಮಾಡಿದ್ದರು.

ಪ್ರಿಯಾ ಟ್ವೀಟ್ ಗೆ ಕಿಚ್ಚ ಫುಲ್ ಖುಷ್!

ಪ್ರಿಯಾ ಅವರ ಈ ಟ್ವೀಟ್ ಗೆ ಕಿಚ್ಚ ಸುದೀಪ್ ಫುಲ್ ಖುಷಿಯಾಗಿದ್ದರು. ತಕ್ಷಣವೇ ಪ್ರಿಯಾ ಅವರ ಟ್ವೀಟ್ ಗೆ ರೀ ಟ್ವೀಟ್ ಮಾಡಿದ್ದರು. ''ಥ್ಯಾಂಕ್ ಯೂ. ಈ ಸಂದೇಶ ನಿನ್ನ ಕಡೆಯಿಂದ ಬಂದಿದೆ ಅಂದ್ರೆ, ಅದು ನನಗೆ ಮತ್ತು ನನ್ನ ತಂಡಕ್ಕೆ ಒಂದು 'ಟನ್' ಇದ್ದಾಗೆ'' ಎಂದು ಪ್ರತಿಕ್ರಿಯಿಸಿದ್ದರು.[ಟ್ವಿಟ್ಟರ್ ನಲ್ಲಿ ಮನದಾಳ ಬಿಚ್ಚಿಟ್ಟ ಕಿಚ್ಚ ಸುದೀಪ್.!]

ಸ್ಟಾರ್ಸ್ ಸವಿರುಚಿಗೆ ಕಿಚ್ಚನ ವಿಶ್!

ಇನ್ನೂ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಸ್ಟಾರ್ಸ್ ಸವಿರುಚಿ ಕಾರ್ಯಕ್ರಮಕ್ಕೆ ಸುದೀಪ್ ವಿಶ್ ಮಾಡಿದ್ದರು. ಈ ಕಾರ್ಯಕ್ರಮ ಪ್ರಿಯಾ ಅವರ ನಿರ್ಮಾಣದಲ್ಲಿ ಮೂಡಿಬರುತ್ತಿದೆ.

ಒಂದಾಗುವ ಮುನ್ಸೂಚನೆ!

ಹೀಗೆ, ಪ್ರತಿಯೊಂದು ಕೆಲಸಗಳನ್ನ ಒಬ್ಬರಿಗೊಬ್ಬರು ಕಾಮೆಂಟ್ ಮಾಡುತ್ತಾ. ವಿಶ್ ಮಾಡುತ್ತಾ ಖುಷಿ ಖುಷಿಯಿಂದ ಮಾಡುತ್ತಿದ್ದಾರೆ. ಹೀಗಾಗಿ, ಇಬ್ಬರ ನಡುವೆ ಸಂಬಂಧ ಮತ್ತೆ ಚಿಗುರಿದೆ ಎನ್ನಲಾಗುತ್ತಿದೆ. ಈ ಎಲ್ಲವೂ ಇವರಿಬ್ಬರು ಒಂದಾಗುವುದರ ಮುನ್ಸೂಚನೆ ಇರಬಹುದಾ ಎಂಬ ಲೆಕ್ಕಾಚಾರವೂ ಮಾಡಲಾಗುತ್ತಿದೆ.[ಅಚ್ಚರಿ.! ಮನಸ್ತಾಪ ಮರೆತು ಒಂದಾದ್ರಾ ಸುದೀಪ್ ಮತ್ತು ಪತ್ನಿ ಪ್ರಿಯಾ?]

ಒಂದಾಗಲಿ ಎಂಬ ಆಶಯ!

ಇದು ಇವರಿಬ್ಬರಲ್ಲಿ ಮಾತ್ರವಲ್ಲ ಅವರ ಅಭಿಮಾನಿ ಬಳಗದಲ್ಲೂ ಅದೇ ಆಸೆ ಇದೆ. ಇವರಿಬ್ಬರು ಒಂದಾಗಬೇಕು ಎಂದು. ಸೋ, ನೋಡೋಣ. ಜೂನ್ 14 ರಂದು ಕೋರ್ಟ್ ಗೆ ಹಾಜರಾಗ್ತಾರಾ. ಒಂದು ವೇಳೆ ಹಾಜರಾದ್ರೂ, ಸಂಧಾನಕ್ಕೆ ಮುಂದಾಗ್ತಾರ ಎಂದು ಕಾದು ನೋಡೋಣ.[ಪತ್ನಿ ಪ್ರಿಯಾ ಬಗ್ಗೆ 'ವೀಕೆಂಡ್' ನಲ್ಲಿ ಕಿಚ್ಚ ಸುದೀಪ್ ಏನಂದ್ರು ಗೊತ್ತಾ?]

English summary
Actor Kichcha Sudeepa and his wife Priya did not turn up at the family court today (March 09) for a hearing on their divorce. The case is adjourned to June 14 for the final hearing and both have appear before court in person.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada