For Quick Alerts
  ALLOW NOTIFICATIONS  
  For Daily Alerts

  ಲಾಕ್ ಡೌನ್ ನಲ್ಲಿ ಸುದೀಪ್ ಅಭಿಮಾನಿಗಳಿಗೆ ಸಿಕ್ಕಿದೆ ಸಿಹಿ ಸುದ್ದಿ

  |

  ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಭರ್ಜರಿ ಸುದ್ದಿಯೊಂದು ಸಿಕ್ಕಿದೆ. ಲಾಕ್ ಡೌನ್ ನಡುವೆಯೂ ಕಿಚ್ಚನ ಅಭಿಮಾನಿಗಳು ಸಂತೋಷ ಪಡುತ್ತಿದ್ದಾರೆ. ಕಾರಣ ಬಹುನಿರೀಕ್ಷೆಯ ಕೋಟಿಗೊಬ್ಬ-3 ಸಿನಿಮಾದ ಟೈಟಲ್ ಟ್ರ್ಯಾಕ್ ರಿಲೀಸ್ ಮಾಡಲು ಚಿತ್ರತಂಡ ಸಜ್ಜಾಗಿದೆ.

  ಚಿತ್ರರಂಗದ ಹಿರಿಯ ಕಲಾವಿದರ ಹೊಟ್ಟೆ ತುಂಬಿಸುತ್ತಿದ್ದಾರೆ ಕಿಚ್ಚ ಸುದೀಪ್ | Sudeep | Dingri Nagraj | Helping

  ಪೈಲ್ವಾನ್ ಸಿನಿಮಾದ ನಂತರ ಸುದೀಪ್ ತೆರೆಮೇಲೆ ಬಂದಿಲ್ಲ. ಕಿಚ್ಚನ ಸಿನಿಮಾ ಯಾವಾಗ ಬರುತ್ತೆ ಎಂದು ಅಭಿಮಾನಿಗಳು ಕಾದು ಕುಳಿತ್ತಿದ್ದರು. ಆದರೆ ಅಷ್ಟರಲ್ಲೇ ಕೊರೊನಾ ಒಕ್ಕರಿಸಿಕೊಂಡು ಎಲ್ಲರ ಆಸೆಗೂ ತಣ್ಣೀರೆರೆಚಿದೆ. ರಿಲೀಸ್ ಆಗಬೇಕಿದ್ದ ಸಿನಿಮಾಗಳೆಲ್ಲ ಮುಂದಕ್ಕೆ ಹೋಗಿವೆ. ಆದರೆ ಲಾಕ್ ಡೌನ್ ನಡುವೆಯೂ ಕೋಟಿಗೊಬ್ಬ-3 ಚಿತ್ರತಂಡ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದೆ. ಮುಂದೆ ಓದಿ..

  ಲಾಕ್ ಡೌನ್ ನಲ್ಲಿ ಬರ್ತಿದೆ ಕೋಟಿಗೊಬ್ಬ-3 ಹಾಡು

  ಲಾಕ್ ಡೌನ್ ನಲ್ಲಿ ಬರ್ತಿದೆ ಕೋಟಿಗೊಬ್ಬ-3 ಹಾಡು

  ಕೋಟಿಗೊಬ್ಬ-3 ಸಿನಿಮಾತಂಡ ಲಾಕ್ ಡೌನ್ ನಡುವೆಯೂ ಚಿತ್ರದ ಹಾಡನ್ನು ರಿಲೀಸ್ ಮಾಡುತ್ತಿದೆ. ಇದೆ ತಿಂಗಳು ಏಪ್ರಿಲ್ 27ಕ್ಕೆ ಚಿತ್ರದ ಮೊದಲ ಲಿರಿಕಲ್ ವಿಡಿಯೋ ರಿಲೀಸ್ ಆಗುತ್ತಿದೆ. ಬೆಳಗ್ಗೆ 10 ಗಂಟೆಗೆ ಆನಂದ್ ಆಡಿಯೋ ಯೂಟ್ಯೂಬ್ ಚಾನಲ್ ನಲ್ಲಿ ಹಾಡು ಬಿಡುಗಡೆಯಾಗುತ್ತಿದೆ.

  'ಆಕಾಶವೇ ಆರಾಧಿಸುವ.....' ಟೈಟಲ್ ಟ್ರ್ಯಾಕ್

  'ಆಕಾಶವೇ ಆರಾಧಿಸುವ.....' ಟೈಟಲ್ ಟ್ರ್ಯಾಕ್

  'ಆಕಾಶವೇ ಆರಾಧಿಸುವ.....' ಎಂಬ ಸಾಲುಗಳಿಂದ ಪ್ರಾರಂಭವಾಗುವ ಹಾಡನ್ನು ವಿ.ನಾಗೇಂದ್ರ ಪ್ರಸಾದ್ ರಚಿಸಿದ್ದಾರೆ. ಮ್ಯಾಜಿಕಲ್ ಕಂಪೋಸರ್ ಎಂದೇ ಖ್ಯಾತಿ ಗಳಿಸಿರುವ ಅರ್ಜುನ್ ಜನ್ಯ ಈ ಹಾಡಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ.

  ಸುದೀಪ್ ಟ್ವೀಟ್

  ಸುದೀಪ್ ಟ್ವೀಟ್

  ಹಾಡು ರಿಲೀಸ್ ಆಗುತ್ತಿರುವ ಬಗ್ಗೆ ಕಿಚ್ಚ ಸುದೀಪ್ ಟ್ವಿಟ್ಟರ್ ನಲ್ಲಿ ಬಹಿರಂಗ ಪಡಿಸಿದ್ದಾರೆ. ವಿಡಿಯೋದ ಪುಟ್ಟ ಝಲಕ್ ಶೇರ್ ಮಾಡುವ ಮೂಲಕ 27ಕ್ಕೆ ಲಿರಿಕಲ್ ವಿಡಿಯೋ ಸಾಂಗ್ ರಿಲೀಸ್ ಆಗುತ್ತಿದೆ ಎಂದಿದ್ದಾರೆ.

  ಮಡೊನ್ನಾ ಸೆಬಾಸ್ಟಿಯನ್ ನಾಯಕಿ

  ಮಡೊನ್ನಾ ಸೆಬಾಸ್ಟಿಯನ್ ನಾಯಕಿ

  ಚಿತ್ರದಲ್ಲಿ ಸುದೀಪ್ ಗೆ ನಾಯಕಿಯಾಗಿ ಮಲಯಾಳಂ ನಟಿ ಮಡೊನ್ನಾ ಸೆಬಾಸ್ಟಿನ್ ಕಾಣಿಸಿಕೊಂಡಿದ್ದಾರೆ. ಮಡೊನ್ನಾ ಮೊದಲ ಬಾರಿಗೆ ಕನ್ನಡ ಚಿತ್ರದಲ್ಲಿ ಮಿಂಚಿದ್ದಾರೆ. ಅಫ್ತಾಬ್ ಶಿವದಾಸನಿ, ರವಿಶಂಕರ್ ಸೇರಿದಂತೆ ಸಾಕಷ್ಟು ಕಲಾವಿದರು ಬಣ್ಣ ಹಚ್ಚಿದ್ದಾರೆ.

  ಮೇ 1ಕ್ಕೆ ರಿಲೀಸ್ ಆಗಬೇಕಿತ್ತು ಸಿನಿಮಾ

  ಮೇ 1ಕ್ಕೆ ರಿಲೀಸ್ ಆಗಬೇಕಿತ್ತು ಸಿನಿಮಾ

  ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಕೋಟಿಗೊಬ್ಬ-3 ಮೇ 1ಕ್ಕೆ ತೆರೆಗೆ ಬರಬೇಕಿತ್ತು. ಆದಕೆ ಕೊರೊನಾ ಲಾಕ್ ಡೌನ್ ಪರಿಣಾಮ ಸಿನಿಮಾ ರಿಲೀಸ್ ಮುಂದಕ್ಕೆ ಹೋಗಿದೆ. ಸಿನಿಮಾ ರಿಲೀಸ್ ತಡವಾದರು ಅಭಿಮಾನಿಗಳಿಗೆ ಲಾಕ್ ಡೌನ್ ನಲ್ಲಿ ಹಾಡನ್ನು ಕೇಳಿ ಸಂಭ್ರಮಿಸುವ ಭಾಗ್ಯ ಸಿಕ್ಕಿದೆ.

  English summary
  Kannada Actor Sudeep starrer Kotigobba-3 song will release on April 27th.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X