»   » ಅಂದು ಸೊಸೆ! ಇಂದು ಅನಂತ್ ಗೆ ಸುಧಾರಾಣಿ ಜೋಡಿ

ಅಂದು ಸೊಸೆ! ಇಂದು ಅನಂತ್ ಗೆ ಸುಧಾರಾಣಿ ಜೋಡಿ

Posted By:
Subscribe to Filmibeat Kannada

ಒಂದು ಕಾಲದಲ್ಲಿ, ಅಂದರೆ 11 ವರ್ಷಗಳ ಹಿಂದೆ, 'ಪ್ರೀತಿ ಪ್ರೇಮ ಪ್ರಣಯ' ಚಿತ್ರದಲ್ಲಿ ಅನಂತ್ ನಾಗ್ ಗೆ ಸೊಸೆಯಾಗಿ ನಟಿಸಿದ್ದ ಸುಧಾರಾಣಿ, ಇದೀಗ ಅದೇ ಅನಂತ್ ಗೆ ಹೆಂಡತಿಯಾಗಿ ಪ್ರಮೋಟ್ ಆಗಿದ್ದಾರೆ.

ಹಾಗಂತ ಸುಧಾರಾಣಿಗೆ ವಯಸ್ಸಾಗಿದೆ, ಇನ್ನೇನಿದ್ದರೂ ಅಮ್ಮನ ಪಾತ್ರಕ್ಕೆ ಫಿಕ್ಸ್ ಆಗ್ಬಹುದು ಅಂತಲ್ಲ. ಅನಂತ್ ಗೆ ಜೋಡಿಯಾಗಿ ಸುಧಾರಾಣಿ ಕಾಣಿಸಿಕೊಳ್ತಾರೆ ಅಂದ್ರೆ, ಅನಂತ್ ಮತ್ತಷ್ಟು ಯಂಗ್ ಆಗಿದ್ದಾರೆ ಅಂತರ್ಥ.

ನಿನ್ನೆಯಷ್ಟೇ 'ಫಿಲ್ಮಿಬೀಟ್ ಕನ್ನಡ'ದಲ್ಲಿ ಅನಂತ್ ರ ಹೊಸ ಅವತಾರವನ್ನ ನೋಡಿದ್ರಿ, 'ಪ್ಲಸ್' ಸಿನಿಮಾದಲ್ಲಿ ಅನಂತ್ ನಾಗ್ ಸಖತ್ ಸ್ಟೈಲಿಶ್ ಆಗಿ ಕಾಣಿಸಿಕೊಂಡ ಮೇಲೆ, ಅವರ ಜೋಡಿ ಕೂಡ ಅಷ್ಟೇ ಸ್ಮಾರ್ಟ್ ಆಗಿರ್ಬೇಕಲ್ವಾ. ಅದಕ್ಕೆ ನಿರ್ದೇಶಕ ಗಡ್ಡಾ ವಿಜಿ, ಅನಂತ್ ಗೆ ಜೋಡಿಯಾಗೋದಕ್ಕೆ ಸುಧಾರಾಣಿ ಪರ್ಫೆಕ್ಟ್ ಅಂತ ನಿರ್ಧರಿಸಿದ್ದಾರೆ. [ವಾವ್, ಅನಂತನಾಗ್ ಹೀರೋ ಅಟ್ ಅರುವತ್ತಾರು!]

ಅನಂತ್ ನಾಗ್ ರನ್ನ ಇಷ್ಟು ರಾಯಲ್ ಆಗಿ ತೋರಿಸಿದ್ಮೇಲೆ, ಸುಧಾರಾಣಿ ಇನ್ಹೇಗೆ ಕಾಣಬಹುದು ಅಂತ ನಿಮಗೂ ಕುತೂಹಲ ಇರಬಹುದು. ಅದಕ್ಕೆ ತಕ್ಕಂತೆ ಹಿಂದೆಂದೂ ಕಾಣದಷ್ಟು ಗ್ಲಾಮರಸ್ ಆಗಿ ಸುಧಾರಾಣಿಯನ್ನ ತೆರೆಮೇಲೆ ತೋರಿಸೋಕೆ ನಿರ್ದೇಶಕ ಗಡ್ಡಾವಿಜಿ ಪ್ಲಾನ್ ಮಾಡಿದ್ದಾರೆ.

Sudharani heroine to Ananth Nag in Plus2

ಅನಂತ್ ನಾಗ್ ಜೊತೆ 'ನಾನೇನು ಮಾಡ್ಲಿಲ್ಲ' ಚಿತ್ರದ ಬಳಿಕ ವರ್ಷಗಳ ನಂತ್ರ ಜೋಡಿಯಾಗುತ್ತಿರುವುದಕ್ಕೆ ಸುಧಾರಾಣಿ ಫುಲ್ ಖುಷ್ ಆಗಿದ್ದಾರಂತೆ. ಜೊತೆಗೆ ಪ್ಲಸ್ ಚಿತ್ರದ 'ಪ್ಲಸ್' ಪಾಯಿಂಟ್ಸ್ ಕೇಳಿದ್ಮೇಲಂತೂ ಹಿಂದುಮುಂದು ನೋಡದೇ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಇನ್ನು ಉಡುಗೆ-ತೊಡುಗೆ ತೊಟ್ಟು ಶೂಟಿಂಗ್ ಅಡ್ಡಕ್ಕೆ ಹಾಜರಾಗಬೇಕಷ್ಟೆ. ಅಲ್ಲಿಗೆ ಸ್ಯಾಂಡಲ್ ವುಡ್ ಮಟ್ಟಿಗೆ ಎಲ್ಡೆಸ್ಟ್ ಹೀರೋ ಮತ್ತು ಹೀರೋಯಿನ್, ಅನಂತ್ ನಾಗ್ ಮತ್ತು ಸುಧಾರಾಣಿ ಅಂತಾಯ್ತು..! (ಫಿಲ್ಮಿಬೀಟ್ ಕನ್ನಡ)

English summary
Sudha Rani, at the age of 40 playing heroine opposite Anant Nag in Kannada movie plus. It is speculated that Sudha Rani will be seen in a glam-new look.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada