For Quick Alerts
  ALLOW NOTIFICATIONS  
  For Daily Alerts

  ರಾಘಣ್ಣನ ಪತ್ನಿಯಾಗಿ ಸುಧಾರಾಣಿ ನಟನೆ: ರಾಜ್ ಕುಟುಂಬದ ಐವರ ಜೊತೆ ತೆರೆ ಹಂಚಿಕೊಂಡ ನಟಿ

  |

  ಸ್ಯಾಂಡಲ್ ವುಡ್ ನ ಹಿರಿಯ ನಟಿ ಸುಧಾರಾಣಿ ಚಿತ್ರರಂಗದಲ್ಲಿ ಸಕ್ರೀಯರಾಗಿದ್ದಾರೆ. ಸದ್ಯ ಪೋಷಕ ಪಾತ್ರಗಳ ಮೂಲಕ ಗಮನ ಸೆಳೆಯುತ್ತಿರುವ ನಟಿ ಸುಧಾರಾಣಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನಟನೆಯ ಮೊದಲ ಸಿನಿಮಾ ಆನಂದ್ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದಾರೆ.

  ಸುಮಾರು 35 ವರ್ಷದ ಸುದೀರ್ಘ ಸಿನಿ ಜೀವನದಲ್ಲಿ ಸುಧಾರಾಣಿ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇಂದಿಗೂ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ. ವಿಶೇಷ ಎಂದರೆ ಡಾ.ರಾಜ್ ಕುಮಾರ್ ಕುಟುಂಬದ ಐವರ ಜೊತೆ ತೆರೆಹಂಚಿಕೊಂಡಿರುವ ಖ್ಯಾತಿ ಕೂಡ ಅವರದ್ದಾಗಿದೆ. ಹೌದು, ಡಾ. ರಾಜ್ ಕುಮಾರ್ ಸೇರಿದಂತೆ, ಶಿವರಾಜ್ ಕುಮಾರ್, ಪುನೀತ್, ವಿನಯ್ ರಾಜ್ ಕುಮಾರ್ ಜೊತೆ ಸುಧಾರಾಣಿ ನಟಿಸಿದ್ದಾರೆ.

  ಆದರೆ ರಾಘವೇಂದ್ರ ರಾಜ್ ಕುಮಾರ್ ಜೊತೆ ನಟಿಸುವ ಅವಕಾಶ ಸಿಕ್ಕಿರಲಿಲ್ಲ. ಇದೀಗ ರಾಘಣ್ಣ ಜೊತೆ ನಟಿಸುವ ಅವಕಾಶ ಸಹ ಒದಗಿಬಂದಿದೆ. ಮೊದಲ ಬಾರಿಗೆ ರಾಘಣ್ಣ ಜೊತೆ ತೆರೆಹಂಚಿಕೊಳ್ಳುತ್ತಿದ್ದಾರೆ ನಟಿ ಸುಧಾರಾಣಿ. ಈ ಮೂಲಕ ರಾಜ್ ಕುಟುಂಬದ ಐವರ ಜೊತೆ ನಟಿಸಿದ ಖ್ಯಾತಿ ಅವರದ್ದಾಗಿದೆ.

  ರಾಘಣ್ಣ ನಟನೆಯ ಹೊಸ ಸಿನಿಮಾ ಬೆಳಕು ಚಿತ್ರದಲ್ಲಿ ಸುಧಾರಾಣಿ, ರಾಘಣ್ಣ ಪತ್ನಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಚಿತ್ರೀಕರಣ ಪ್ರಾರಂಭವಾಗಿದ್ದು, ಚಿತ್ರದ ಕೆಲವು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

  ಈ ಬಗ್ಗೆ ಮಾತನಾಡಿರುವ ಸುಧಾರಾಣಿ ಚಿತ್ರರಂಗದ ಹಿನ್ನಲೆ ಇಲ್ಲದಿದ್ದರೂ ಪಾರ್ವತಮ್ಮನವರು ಅವಕಾಶ ನೀಡಿದರು. ಯಾವ ಧೈರ್ಯದ ಮೇಲೆ ಅವಕಾಶ ನೀಡಿದರೋ ಗೊತ್ತಿಲ್ಲ ಎನ್ನುತ್ತಾರೆ. ಚಿಕ್ಕ ವಯಸ್ಸಿಗೆ ಬಣ್ಣದ ಲೋಕಕ್ಕೆ ಕಾಲಿಟ್ಟ ನಟಿ ಸುಧಾರಾಣಿ ನಾಯಕಿಯಾಗಿ, ಪೋಷಕ ನಟಿಯಾಗಿ ದಿಗ್ಗಜ ಕಲಾವಿದರ ಜೊತೆ ತೆರೆಹಂಚಿಕೊಂಡಿದ್ದಾರೆ. ಅದ್ಭುತ ಪಾತ್ರಗಳ ಮೂಲಕ ಇಂದಿಗೂ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ.

  Recommended Video

  ಬಿಡುಗಡೆಯಾದ 6 ಗಂಟೆಯಲ್ಲೇ ಪೊಗರುಗೆ ಟಾಂಗ್ ಕೊಟ್ಟ ರಾಬರ್ಟ್ | Filmibeat Kannada

  ಸಾಕಷ್ಟು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿರುವ ಸುಧಾರಾಣಿ ಅವರ ಬೆಳಕು ಸಿನಿಮಾ ಹೇಗಿರಲಿದೆ, ರಾಘಣ್ಣ ಮತ್ತು ಸುಧಾರಾಣಿ ಅವರ ಕಾಂಬಿನೇಷನ್ ವರ್ಕೌಟ್ ಆಗುತ್ತಾ? ಕಾದುನೋಡಬೇಕು.

  English summary
  Actress Sudharani playing Raghavendra Rajkumar's wife role in Belaku movie.
  Wednesday, February 17, 2021, 11:32
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X