For Quick Alerts
  ALLOW NOTIFICATIONS  
  For Daily Alerts

  ಇಬ್ಬಿಬ್ಬರು 'ಡೈಲಾಗ್ ಕಿಂಗ್' ಮಧ್ಯೆ ಸುಂದರ ಸುಧಾರಾಣಿಗೆ ಏನು ಕೆಲಸ.?

  By Harshitha
  |

  ಧ್ರುವ ಸರ್ಜಾ ರನ್ನ 'ಬಹದ್ದೂರ್' ಚೇತನ್ 'ಡೈಲಾಗ್ ಕಿಂಗ್' ಮಾಡಿರುವ ಸುದ್ದಿ ಇದೇ 'ಫಿಲ್ಮಿಬೀಟ್ ಕನ್ನಡ' ಪುಟದಲ್ಲಿ ನಿನ್ನೆಯಷ್ಟೇ ಓದಿದ್ರಿ. ಈಗ ಅದೇ ಧ್ರುವ ಸರ್ಜಾ ಅಭಿನಯದ 'ಭರ್ಜರಿ' ಅಡ್ಡದಿಂದ ಮತ್ತೊಂದು ಭರ್ಜರಿ ಸುದ್ದಿ ಹೊತ್ತು ತಂದಿದ್ದೀವಿ.

  ಅದೇನಪ್ಪಾ ಅಂದ್ರೆ, 'ಭರ್ಜರಿ' ಚಿತ್ರದಲ್ಲಿ ಧ್ರುವ ಸರ್ಜಾರನ್ನ 'ಡೈಲಾಗ್ ಕಿಂಗ್' ಮಾಡುವುದರ ಜೊತೆಗೆ ಸ್ವತಃ 'ಡೈಲಾಗ್ ಕಿಂಗ್' ಸಾಯಿ ಕುಮಾರ್ ರನ್ನು ಕರೆ ತಂದಿದ್ದಾರೆ ಚೇತನ್ ಕುಮಾರ್. [ಧ್ರುವ ಸರ್ಜಾರನ್ನು ಡೈಲಾಗ್ ಕಿಂಗ್ ಮಾಡ್ತಿದ್ದಾರೆ ಚೇತನ್]

  ಹೌದು, 'ಭರ್ಜರಿ' ಚಿತ್ರದಲ್ಲಿ ಧ್ರುವ ಸರ್ಜಾ ತಂದೆ ಪಾತ್ರದಲ್ಲಿ ಸಾಯಿ ಕುಮಾರ್ ಅಭಿನಯಿಸುತ್ತಿದ್ದಾರೆ. ಅವರಿಗೆ ಜೋಡಿಯಾಗಿ ಅಂದ್ರೆ ಧ್ರುವ ಸರ್ಜಾ ಅಮ್ಮನ ಪಾತ್ರದಲ್ಲಿ ಸುಧಾರಾಣಿ ಮಿಂಚಲಿದ್ದಾರೆ.

  ಹೇಳಿ ಕೇಳಿ, ಸಾಯಿ ಕುಮಾರ್ 'ಡೈಲಾಗ್ ಕಿಂಗ್'. ಧ್ರುವ ಸರ್ಜಾ ಬಾಯಲ್ಲೇ ಬಾಂಬ್ ಸಿಡಿಯುವಂತೆ ಡೈಲಾಗ್ ಬರೆಯುವ ಚೇತನ್ ಗೆ ಸಾಯಿಕುಮಾರ್ ಸಿಕ್ಕಿದ್ದಾರೆ ಅಂದ್ರೆ ಸುಮ್ನೆನಾ.? ವಿಲನ್ ಗಳನ್ನ ಸದೆ ಬಡಿಯುವುದಕ್ಕೆ ಸ್ಟಂಟ್ ಗಳ ಅವಶ್ಯಕತೆಯೇ ಇರಲ್ಲ ಬಿಡಿ.

  ಇಬ್ಬಿಬ್ಬರು 'ಡೈಲಾಗ್ ಕಿಂಗ್' ಮಧ್ಯೆ ಸುಧಾರಾಣಿ ಸೈಲೆಂಟ್ ಆಗಿರ್ತಾರೋ, ವೈಲೆಂಟ್ ಆಗ್ತಾರೋ ಸದ್ಯಕ್ಕೆ ಬಹಿರಂಗವಾಗಿಲ್ಲ. 'ಡಿಂಪಲ್ ಬ್ಯೂಟಿ' ರಚಿತಾ ರಾಮ್ ಗೆ ಮಾತ್ರ ಧ್ರುವ ಸರ್ಜಾ ಜೊತೆ ಡ್ಯುಯೆಟ್ ಹಾಡುವ ಕೆಲಸ. 'ಭರ್ಜರಿ' ಚಿತ್ರದ ಬಗ್ಗೆ ಹೆಚ್ಚಿನ ಅಪ್ ಡೇಟ್ಸ್ ಗಾಗಿ 'ಫಿಲ್ಮಿಬೀಟ್ ಕನ್ನಡ' ಓದುತ್ತಿರಿ....

  English summary
  Kannada Actress Sudharani and Sai Kumar has paired up for Kannada Movie 'Bharjari', which features Dhruva Sarja, Rachita Ram. The movie is directed by Chethan Kumar.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X