twitter
    For Quick Alerts
    ALLOW NOTIFICATIONS  
    For Daily Alerts

    ಹಿರಿಯ ನಟಿ ಲಕ್ಷ್ಮಿದೇವಿ ಭೇಟಿ ಮಾಡಿದ ಖ್ಯಾತ ನಟಿಮಣಿಯರು

    |

    7 ದಶಕ, 1000ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸುವ ಮೂಲಕ ಕನ್ನಡ ಕಲಾಭಿಮಾನಿಗಳನ್ನು ರಂಜಿಸಿರುವ ಹಿರಿಯ ನಟಿ ಎಂಎನ್ ಲಕ್ಷ್ಮಿದೇವಿ ಅವರನ್ನು ಶ್ರುತಿ, ಸುಧಾರಾಣಿ ಹಾಗು ಮಾಳವಿಕಾ ಅವಿನಾಶ್ ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು.

    ಒಂದು ಕಾಲದಲ್ಲಿ ಚಿತ್ರರಂಗವನ್ನು ಅಳಿದ ಹಿರಿಯ ಕಲಾವಿದರೆಲ್ಲರೂ ಈಗ ವಿಶ್ರಾಂತಿ ಜೀವನ ಕಳೆಯುತ್ತಿದ್ದಾರೆ. ಬಹಳಷ್ಟು ಜನ ಹಿರಿಯ ನಟ-ನಟಿಯರು ಏನು ಮಾಡ್ತಿದ್ದಾರೆ, ಅವರ ಆರೋಗ್ಯ ಹೇಗಿದೆ ಎನ್ನುವುದರ ಬಗ್ಗೆ ಮಾಹಿತಿಯೇ ಇರುವುದಿಲ್ಲ. ಆದರೆ ಇತ್ತೀಚಿನ ಕೆಲವು ದಿನಗಳಲ್ಲಿ ಶ್ರುತಿ, ಸುಧಾರಾಣಿ, ಮಾಳವಿಕಾ ಅವರ ತಂಡವೂ ಹಿರಿಯ ಕಲಾವಿದರನ್ನು ಭೇಟಿ ಮಾಡಿ ಅವರ ಆರೋಗ್ಯ ವಿಚಾರಿಸುತ್ತಿರುವುದು ಗಮನ ಸೆಳೆದಿದೆ.

    ಹಿರಿಯ ನಟಿ ಲೀಲಾವತಿ ಆರೋಗ್ಯ ವಿಚಾರಿಸಿ ಧೈರ್ಯ ತುಂಬಿದ ಸುಧಾರಾಣಿ, ಶ್ರುತಿ, ಮಾಳವಿಕಾಹಿರಿಯ ನಟಿ ಲೀಲಾವತಿ ಆರೋಗ್ಯ ವಿಚಾರಿಸಿ ಧೈರ್ಯ ತುಂಬಿದ ಸುಧಾರಾಣಿ, ಶ್ರುತಿ, ಮಾಳವಿಕಾ

    ಕಳೆದ ಕೆಲವು ದಿನದ ಹಿಂದೆ ಹಿರಿಯ ನಟಿ ಲೀಲಾವತಿ ಅವರನ್ನು ಭೇಟಿ ಮಾಡಿದ್ದ ಶ್ರುತಿ, ಸುಧಾರಾಣಿ ಹಾಗೂ ಮಾಳವಿಕಾ ತಂಡ, ಅವರ ಮನೆಯಲ್ಲಿ ಕಾಳ ಕಳೆದಿದ್ದರು, ಅಲ್ಲಿಯೇ ಊಟ ಮಾಡಿ ಹಳೆಯ ನೆನಪುಗಳನ್ನು ಮೆಲುಕು ಹಾಕಿದ್ದರು. ಆಗಸ್ಟ್ ತಿಂಗಳಲ್ಲಿ ಲೀಲಾವತಿ ಅವರ ನೆಲಮಂಗಲ ನಿವಾಸಕ್ಕೆ ಭೇಟಿ ನೀಡಿ ಅವರಿಗೆ ಧೈರ್ಯ ತುಂಬಿದ್ದರು.

    ಲೀಲಾವತಿ ಯೋಗಕ್ಷೇಮ ವಿಚಾರಿಸಿ, ಸಹ ಭೋಜನ ಮಾಡಿದ ಶ್ರುತಿ, ಭಾರತಿಲೀಲಾವತಿ ಯೋಗಕ್ಷೇಮ ವಿಚಾರಿಸಿ, ಸಹ ಭೋಜನ ಮಾಡಿದ ಶ್ರುತಿ, ಭಾರತಿ

    ಈಗ ಎಂಎನ್ ಲಕ್ಷ್ಮಿದೇವಿ ಅವರ ನಿವಾಸಕ್ಕೆ ಭೇಟಿ ನೀಡಿ ಅವರ ಜೊತೆ ಸಮಯ ಕಳೆದಿದ್ದಾರೆ. ಈ ವೇಳೆ ತಮ್ಮ ಕಾಲದ ನೆನಪುಗಳನ್ನು ಮೆಲುಕು ಹಾಕಿ ಸಂತಸ ಪಟ್ಟಿದ್ದಾರೆ. ಈ ಬಗ್ಗೆ ನಟಿ ಸುಧಾರಾಣಿ ತಮ್ಮ ಇನ್ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದು, ಹರ್ಷ ವ್ಯಕ್ತಪಡಿಸಿದ್ದಾರೆ. ಮುಂದೆ ಓದಿ...

    ಸರಸ್ವತಿಯ ವರಪುತ್ರಿ

    ಸರಸ್ವತಿಯ ವರಪುತ್ರಿ

    ''ಯಾರು ಯಾರು ನೀ ಯಾರು ಎಂದರೆ, ನಾನು ಸಾಕ್ಷಾತ್ ಕಲಾದೇವತೆ ಸರಸ್ವತಿಯ ವರಪುತ್ರಿ ಎಂದವರೆ ಎಂ.ಎನ್.ಲಕ್ಷ್ಮೀದೇವಿ ಅಮ್ಮನವರು.. ಚಿತ್ರರಂಗದಲ್ಲಿ ಇವರು ಮಾಡಿರುವ ಸಾಧನೆ ಅಸಮಾನ್ಯವಾದದ್ದು.. ಪೋಷಕ ಪಾತ್ರಗಳಿಗೆ ಒಂದು ವಿಭಿನ್ನ ರೀತಿಯ ಮೆರುಗು, ವೈಭವ, ಗೌರವ ತಂದುಕೊಟ್ಟ ಕಲಾವಿದರ ಪೈಕಿ ಇವರ ಕೊಡುಗೆ ಬಹಳ ದೊಡ್ಡದು. ಪೋಷಕ ಕಲಾವಿದರು ಅಥವಾ ಪೋಷಕ ಪಾತ್ರಗಳು ಅಂದಾಗ ನನ್ನ ಮನಸ್ಸಿಗೆ ಬರುವುದು 'ಪೋಷಕ' ಎನ್ನುವ ಪದದ ಅರ್ಥ, ಅದರ ಅರ್ಥ ನಿಮಗೆಲ್ಲ ಗೊತ್ತೇ ಇದೆ.. ಇಂಗ್ಲಿಷ್‌ನಲ್ಲಿ ಈ ಪದಕ್ಕೆ 'Guardian' ಎಂದು ಅರ್ಥ, Guardian ಎನ್ನುವ ಪದವನ್ನು Guardian Angels ಎಂದು ಸಹ ಕರೆಯುತ್ತಾರೆ.

    ಗೌರವ, ಮರಿಯಾದೆ, ಸ್ಥಾನ ಮಾನ ಕೊಡಬೇಕಿದೆ

    ಗೌರವ, ಮರಿಯಾದೆ, ಸ್ಥಾನ ಮಾನ ಕೊಡಬೇಕಿದೆ

    ಇವರುಗಳು ನಮ್ಮ ಚಿತ್ರಗಳಿಗೆ ಅಥವಾ ಮುಖ್ಯ ಭೂಮಿಕೆ ನಿಭಾಯಿಸುವಂತಹ ನಟ ನಟಿಯರಿಗೆ ನಿಜವಾಗಲೂ Guardian Angels ಗಳ ಹಾಗೆಯೇ ಇರುತ್ತಾರೆ. ಯಾಕಂದ್ರೆ ಪೋಷಕ ಕಲಾವಿದರು ತಮ್ಮ ಸರ್ವಸ್ವವನ್ನು ಅರ್ಪಿಸಿ, ಮುಖ್ಯ ಭೂಮಿಕೆ ನಿರ್ವಹಿಸುವ ಪಾತ್ರಗಳಿಗೆ ಅಥವಾ ಇಡೀ ಚಿತ್ರಕ್ಕೆ ಒಂದು ಬೆನ್ನೆಲುಬಾಗಿರುತ್ತಾರೆ ಅಥವಾ ಚಿತ್ರದ ಆಧಾರ ಸ್ತಂಭದಂತೆ ಇರುತ್ತಾರೆ. ಆದರೆ ಇತ್ತೀಚಿನ ಕೆಲವು ವರ್ಷಗಳಲ್ಲಿ ಈ ಸತ್ಯವನ್ನು ಮರೆತು, ಪೋಷಕ ಪಾತ್ರದ ಮಹತ್ವವನ್ನು ಸರಿಯಾಗಿ ಅರಿಯದೆ, ಆ ಪಾತ್ರಗಳನ್ನು ಹಿಂದಕ್ಕೆ ತಳ್ಳಿ, ಪೋಷಕ ಕಲಾವಿದರಿಗೆ ಸಲ್ಲಬೇಕಾದ ಗೌರವ, ಮರಿಯಾದೆ, ಸ್ಥಾನ ಮಾನ ಇದೆಲ್ಲವನ್ನು ಅವರಿಗೆ ಸಂಪೂರ್ಣವಾಗಿ ಕೊಡುವುದನ್ನು ಮರೆತಿದ್ದೇವೆ ಎಂದು ಹೇಳಬಹುದು.

    ಕರ್ತವ್ಯ ಮರೆಯಬಾರದು

    ಕರ್ತವ್ಯ ಮರೆಯಬಾರದು

    ನಮ್ಮ ಚಿತ್ರರಂಗದ ಈ Guardian Angels ಅಥವಾ ನಮ್ಮ ಪೋಷಕರನ್ನ ಎಂದಿಗೂ ಮರೆಯದೆ ಅವರನ್ನು ಗೌರವದಿಂದ ನಡೆಸಿಕೊಂಡು ಹೋಗುವುದು ನಮ್ಮೆಲ್ಲರ ಕರ್ತವ್ಯ ಹಾಗೂ ಧರ್ಮ ಎಂದು ನಟಿ ಸುಧಾರಾಣಿ ಅಭಿಪ್ರಾಯಪಟ್ಟಿದ್ದಾರೆ.

    ಕಲಾಸೇವೆಯಲ್ಲಿ ಮುಂದುವರೆಯಲಿ

    ಕಲಾಸೇವೆಯಲ್ಲಿ ಮುಂದುವರೆಯಲಿ

    ಈ ಬಗ್ಗೆ ಹಿರಿಯ ನಟಿ ಶ್ರುತಿ ಸಹ ತಮ್ಮ ಇನ್ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದು, ''ಕನ್ನಡ ಚಿತ್ರರಂಗ ಕಂಡ ಅಪರೂಪದ ಕಲಾವಿದೆಯಲ್ಲಿ ಎಂಎನ್ ಲಕ್ಷ್ಮೀದೇವಮ್ಮ ಅವರು ಕೂಡ ಒಬ್ಬರು, ಅವರಿಗಿರುವ ಹಾಸ್ಯಪ್ರಜ್ಞೆ. ನನ್ನ ತಂದೆ ಹಾಗೂ ತಾಯಿಯಂದಿರು ಗುಬ್ಬಿ ಕಂಪನಿಯಲ್ಲಿ ಇದ್ದಾಗ ಅವರೊಂದಿಗೆ ನಟಿಸಿ ಹಲವಾರು ವರ್ಷಗಳ ಅವರೊಂದಿಗೆ ಇದ್ದಂತಹ ಅನುಭವ ನನ್ನ ಪೋಷಕರಿಗೆ ಇದೆ ಹಾಗೆ ನಾನು ಕೂಡ ಅವರೊಂದಿಗೆ ಹಲವಾರು ಚಿತ್ರಗಳಲ್ಲಿ ಅಭಿನಯಿಸಿದ್ದೇನೆ. ಇಂದಿಗೆ ಅವರನ್ನು ನೋಡುವಾಗ ಬಹಳ ಹೆಮ್ಮೆ ಅನಿಸುತ್ತದೆ, ಜೀವನದ ಎಲ್ಲಾ ಏಳುಬೀಳುಗಳನ್ನು ಅತ್ಯಂತ ಧೈರ್ಯವಾಗಿ ನಿಭಾಯಿಸಿ ಗಟ್ಟಿಯಾಗಿ ನಿಂತ ಕಲಾವಿದೆ ಇವರು. ಈ ಕಲಾ ಕುಟುಂಬ ಹೀಗೆ ಕಲಾಸೇವೆಯಲ್ಲಿ ಮುಂದುವರೆಯಲಿ ಲಕ್ಷ್ಮಿ ಅಮ್ಮನಿಗೆ ದೇವರು ಇನ್ನಷ್ಟು ಆಯಸ್ಸು ಆರೋಗ್ಯವನ್ನು ಕೊಟ್ಟು ಕಾಪಾಡಲಿ ಎನ್ನುವುದೇ ನಮ್ಮೆಲ್ಲರ ಆಶಯ' ಎಂದಿದ್ದಾರೆ.

    English summary
    Actress Sudharani, Shruthi and Malavika met Veteran actress MN Lakshmi Devi and inquired about her health.
    Friday, September 24, 2021, 9:42
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X