»   »  ಕನ್ನಡ ಚಿತ್ರ ನಿರ್ದೇಶನಕ್ಕೆ ಸುಹಾಸಿನಿ ಮಣಿರತ್ನಂ

ಕನ್ನಡ ಚಿತ್ರ ನಿರ್ದೇಶನಕ್ಕೆ ಸುಹಾಸಿನಿ ಮಣಿರತ್ನಂ

Subscribe to Filmibeat Kannada
Suhasini to direct Kannda film
ಇಷ್ಟು ಕಾಲ ಕನ್ನಡ ಚಿತ್ರರಂಗದಲ್ಲಿ ನಟನೆಗೆ ಮಾತ್ರ ಸೀಮಿತವಾಗಿದ್ದ ಸುಹಾಸಿನಿ ಮಣಿರತ್ನಂ ಸದ್ಯದಲ್ಲೇ ಕನ್ನಡ ಚಿತ್ರವನ್ನು ನಿರ್ದೇಶಿಸಲಿದ್ದಾರೆ. ಸುಹಾಸಿನಿ ಮತ್ತು ಅನಂತನಾಗ್ ಮುಖ್ಯ ಭೂಮಿಕೆಯಲ್ಲಿರುವ 'ಎರಡನೇ ಮದುವೆ' ಚಿತ್ರದ ಡಬ್ಬಿಂಗ್ ಕೆಲಸ ಮುಗಿಸಿದ ನಂತರ ಸಿನಿಪತ್ರಕರ್ತರಿಗೆ ಈ ವಿಷಯವನ್ನು ಸುಹಾಸಿನಿ ದೃಢ ಪಡಿಸಿದ್ದಾರೆ.

ಕನ್ನಡ ಚಿತ್ರವನ್ನು ನಿರ್ದೇಶಿಸಬೇಕೆನ್ನುವುದು ನನ್ನ ಬಹುದಿನದ ಆಸೆ. ಮಗನ ವಿದ್ಯಾಭ್ಯಾಸಕ್ಕೆ ತೊಂದರೆಯಾಗಬಾರದೆಂದು ಈ ಬಗ್ಗೆ ನಿರ್ಧಾರ ತೆಗೆದುಕೊಂಡಿರಲಿಲ್ಲ. ಬರುವ ವರ್ಷ ಕನ್ನಡ ಚಿತ್ರವನ್ನು ನಿರ್ದೇಶಿಸಬೇಕೆಂದು ಯೋಜನೆ ಹಾಕಿಕೊಂಡಿದ್ದೇನೆ. ವಿಷ್ಣುವರ್ಧನ್ ಕೂಡಾ ಚಿತ್ರ ನಿರ್ದೇಶಿಸಬೇಕೆಂದು ಬಹಳದಿನದಿಂದ ಒತ್ತಾಯ ಮಾಡುತ್ತಿದ್ದಾರೆ ಎಂದು ಹೇಳಿದರು.

ನಾನು ಚೆನ್ನೈ ನಲ್ಲಿ ನೆಲೆಸಿದ್ದರೂ, ಕನ್ನಡ ಚಿತ್ರಗಳ ಬಗ್ಗೆ ಹೆಚ್ಚಿನ ಕಾಳಜಿಯನ್ನು ಹೊಂದಿದ್ದೇನೆ. ಕನ್ನಡಿಗರು ಮತ್ತು ತಮಿಳರು ಸಹೋದರ, ಸಹೋದರಿಯರಿದ್ದಂತೆ. ಬರುವ ವರ್ಷದ ಹೊತ್ತಿಗೆ ಖಂಡಿತಾ ನನ್ನಿಂದ ಕನ್ನಡ ನಿರ್ದೇಶನದ ನಿರೀಕ್ಷೆ ಇಟ್ಟುಕೊಳ್ಳಬಹುದು ಎಂದು ಸುಹಾಸಿನಿ ತಿಳಿಸಿದ್ದಾರೆ. 1984 ನಲ್ಲಿ 'ಬೆಂಕಿಯಲ್ಲಿ ಅರಳಿದ ಹೂವು' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಅಡಿಯಿಟ್ಟ ಸುಹಾಸಿನಿ ಬಹಳಷ್ಟು ಹಿಟ್ ಚಿತ್ರಗಳಲ್ಲಿ ನಟಿಸಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada