For Quick Alerts
  ALLOW NOTIFICATIONS  
  For Daily Alerts

  ಆತ್ಮಹತ್ಯೆಗೆ ಯತ್ನ; ನಿರ್ಮಾಪಕ ಶಶಿಕುಮಾರ್ ಹೇಳಿದ ಸತ್ಯ ಏನು?

  By Harshitha
  |

  ಬೆಟ್ಟದಷ್ಟು ಕನಸು ಹೊತ್ತು ಗಾಂಧಿನಗರಕ್ಕೆ ಕಾಲಿಟ್ಟ ಶಶಿಕುಮಾರ್ ಒಂದೊಳ್ಳೆ ಕನ್ನಡ ಸಿನಿಮಾ ನಿರ್ಮಾಣ ಮಾಡಲು ಮುಂದಾದರು. ಆಗ ಅವರಿಗೆ ಸಿಕ್ಕ ಕಥೆ 'ಹಾಫ್ ಮೆಂಟ್ಲು'.

  'ಹಾಫ್ ಮೆಂಟ್ಲು' ಚಿತ್ರದ ಮೂಲಕ ಆಪ್ತ ಗೆಳೆಯ ಸಂದೀಪ್ ಗೆ ಹೀರೋ ಪಟ್ಟ ನೀಡಿ, ಯುವ ಪ್ರತಿಭೆ ಲಕ್ಷ್ಮಿ ದಿನೇಶ್ ರಿಗೆ ಡೈರೆಕ್ಟರ್ ಕ್ಯಾಪ್ ತೊಡಿಸಿದವರು ನಿರ್ಮಾಪಕ ಶಶಿಕುಮಾರ್.

  'ಹಾಫ್ ಮೆಂಟ್ಲು' ಚಿತ್ರ ಸೆಟ್ಟೇರಿದ ಕೆಲವು ತಿಂಗಳುಗಳ ಅಂತರದಲ್ಲೇ ಕುಂಬಳಕಾಯಿ ಹೊಡೆದದ್ದೂ ಆಯ್ತು. ಚಿತ್ರ ರಿಲೀಸ್ ಗೆ ರೆಡಿಯಾಗಿ ವರ್ಷ ಕಳೆದಿದೆ. ಆದರೂ, 'ಹಾಫ್ ಮೆಂಟ್ಲು' ಚಿತ್ರಕ್ಕೆ ಇನ್ನೂ ಬಿಡುಗಡೆ ಭಾಗ್ಯ ದೊರಕ್ಕಿಲ್ಲ. [ಕನ್ನಡ ಚಿತ್ರ ನಿರ್ಮಾಪಕ ಆತ್ಮಹತ್ಯೆಗೆ ಯತ್ನ; ಅಸಲಿ ಕಾರಣವೇನು?]

  ಬರೋಬ್ಬರಿ ಮೂರು ಮುಕ್ಕಾಲು ಕೋಟಿ ಬಂಡವಾಳ ಹಾಕಿ ಚಿತ್ರ ಬಿಡುಗಡೆ ಮಾಡಲು ಆಗದೆ ಮಾನಸಿಕ ಖಿನ್ನತೆಗೆ ಒಳಗಾದ ನಿರ್ಮಾಪಕ ಶಶಿಕುಮಾರ್ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಮುಂದೆ ಓದಿ....

  ಮಾಧ್ಯಮಗಳ ಮುಂದೆ ಕಷ್ಟ ಹೇಳಿಕೊಂಡ ಶಶಿಕುಮಾರ್!

  ಮಾಧ್ಯಮಗಳ ಮುಂದೆ ಕಷ್ಟ ಹೇಳಿಕೊಂಡ ಶಶಿಕುಮಾರ್!

  ಇಲಿ ಪಾಷಾಣ ಸೇವಿಸಿ, ಸೂಸೈಡ್ ಅಟೆಂಪ್ಟ್ ಮಾಡಿರುವ ಶಶಿಕುಮಾರ್, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸುಂಕದಕಟ್ಟೆಯಲ್ಲಿರುವ ಲಕ್ಷ್ಮಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶಶಿಕುಮಾರ್, ಮಾಧ್ಯಮಗಳ ಜೊತೆ ತಮಗಾದ ಕಷ್ಟವನ್ನ ಹಂಚಿಕೊಂಡರು.

  ಶಶಿಕುಮಾರ್ ಏನಂತಾರೆ?

  ಶಶಿಕುಮಾರ್ ಏನಂತಾರೆ?

  ''ನಾನು ಬದುಕುತ್ತೇನೆ ಅಂತ ಅಂದುಕೊಂಡಿರಲಿಲ್ಲ. ನನ್ನ ಸಾವಿನಿಂದ ಆದರೂ, ಚಿತ್ರ ಬಿಡುಗಡೆ ಆಗಲಿ ಅಂತ ಭಾವಿಸಿದ್ದೆ'' - ಶಶಿಕುಮಾರ್, ನಿರ್ಮಾಪಕ

  ಬೇರೆ ದಾರಿ ಕಾಣಲಿಲ್ಲ!

  ಬೇರೆ ದಾರಿ ಕಾಣಲಿಲ್ಲ!

  ''ನನ್ನ ಫ್ಯಾಮಿಲಿ, ಮಕ್ಕಳು, ಚಿತ್ರದ ಹೀರೋ, ನಿರ್ದೇಶಕರು ಎಲ್ಲರೂ ಕನಸು ಕಟ್ಟಿಕೊಂಡಿದ್ದಾರೆ. ಎಷ್ಟೇ ಪ್ರಯತ್ನ ಪಟ್ಟರೂ, ಚಿತ್ರ ಬಿಡುಗಡೆ ಆಗ್ತಿರ್ಲಿಲ್ಲ. ಹೀಗಾಗಿ ಬೇರೆ ದಾರಿ ಕಾಣದೆ ಹೀಗೆ ಮಾಡಿಕೊಂಡೆ'' - ಶಶಿಕುಮಾರ್, ನಿರ್ಮಾಪಕ

  ಎಲ್ಲರಿಗೂ ಲೈಫ್ ಸಿಗಬೇಕು!

  ಎಲ್ಲರಿಗೂ ಲೈಫ್ ಸಿಗಬೇಕು!

  ''ನನ್ನ ಸಾವಿನಿಂದ ಆದರೂ, ಎಲ್ಲರಿಗೂ ಒಳ್ಳೆಯದ್ದು ಆಗಲಿ, ಎಲ್ಲರಿಗೂ ಲೈಫ್ ಸಿಗಲಿ ಅಂತ ಮನಸ್ಸಿಗೆ ಬಂದುಬಿಡ್ತು'' - ಶಶಿಕುಮಾರ್, ನಿರ್ಮಾಪಕ

  ಕಿಚ್ಚ ಸುದೀಪ್ ಗೆ ಮನವಿ!

  ಕಿಚ್ಚ ಸುದೀಪ್ ಗೆ ಮನವಿ!

  ''ನಾನು ಕಿಚ್ಚ ಸುದೀಪ್ ಅವರ ಬಳಿ ಮನವಿ ಮಾಡಿಕೊಂಡಿದ್ದೆ. ಅವರು ಮುಂದೆ ಬಂದ್ರೆ ಸಿನಿಮಾ ರಿಲೀಸ್ ಆಗಬಹುದು'' - ಶಶಿಕುಮಾರ್, ನಿರ್ಮಾಪಕ

  ಪ್ರಯತ್ನ ಪಟ್ಟರೂ ಆಗ್ತಿಲ್ಲ!

  ಪ್ರಯತ್ನ ಪಟ್ಟರೂ ಆಗ್ತಿಲ್ಲ!

  ''ತುಂಬಾ ಪ್ರಯತ್ನ ಮಾಡಿದರೂ, ಚಿತ್ರ ಬಿಡುಗಡೆ ಕಷ್ಟ ಆಯ್ತು. ದಿನಾ ಸಾಯೋಕ್ಕಿಂತ ಒಮ್ಮೆ ಸತ್ತು ಹೋಗೋಣ ಅಂತ ಯೋಚನೆ ಮಾಡಿದೆ'' - ಶಶಿಕುಮಾರ್, ನಿರ್ಮಾಪಕ

  80 ಲಕ್ಷ ಬೇಕು!

  80 ಲಕ್ಷ ಬೇಕು!

  ''ಡಿಸ್ಟ್ರಿಬ್ಯೂಟರ್ ಜೊತೆ ಮಾತನಾಡಿದೆ. ಪಬ್ಲಿಸಿಟಿ ಮಾಡಬೇಕು, ಥಿಯೇಟರ್ ಬಾಡಿಗೆ ಕಟ್ಟಬೇಕು. ಎಲ್ಲಾ ಸೇರಿ 50-80 ಲಕ್ಷ ಆಗುತ್ತೆ ಅಂದಿದ್ದರು. ನಾನು ಆಗಲೇ ಮೂರು ಮುಕ್ಕಾಲು ಕೋಟಿ ಹಾಕ್ಬಿಟ್ಟಿದೆ. ಇನ್ನೂ 80 ಲಕ್ಷ ಅಂದ್ರೆ ಎಲ್ಲಿಂದ ತರಲಿ. ನನ್ನ ಕೈಯಲ್ಲಿ ಏನೂ ಇರ್ಲಿಲ್ಲ. ನನ್ನ ಫ್ರೆಂಡ್ಸ್ ಎಲ್ಲಾ ತುಂಬಾ ಹೆಲ್ಪ್ ಮಾಡಿದ್ರು. ಎಲ್ಲರೂ ಕಷ್ಟದಲ್ಲೇ ಇರೋರು. ಎಲ್ಲರ ಕಷ್ಟ ನೋಡಿ, ನೋಡಿ ನನಗೆ ಹುಚ್ಚು ಹಿಡಿದ ಹಾಗೆ ಆಗಿತ್ತು. ಒಂದು ವರೆ ತಿಂಗಳಿಂದ ಚಿಂತೆ ಕಾಡ್ತಿತ್ತು' - ಶಶಿಕುಮಾರ್, ನಿರ್ಮಾಪಕ

  ಐ ಆಮ್ ಸಾರಿ!

  ಐ ಆಮ್ ಸಾರಿ!

  ''ನಮ್ಮ ಮನೆಯವರಿಗೆ ಕ್ಷಮೆ ಕೇಳ್ತೀನಿ. ಐ ಆಮ್ ಸಾರಿ'' - ಶಶಿಕುಮಾರ್, ನಿರ್ಮಾಪಕ

  ನಿರ್ದೇಶಕರು ಏನಂತಾರೆ?

  ನಿರ್ದೇಶಕರು ಏನಂತಾರೆ?

  ''ಪ್ರಯತ್ನ ಪಟ್ಟು ಒಳ್ಳೆ ಸಿನಿಮಾ ಮಾಡಿದ್ರೂ, ರಿಲೀಸ್ ಮಾಡಲು ಆಗ್ತಿಲ್ಲ. ಹೊಸಬರ ಸಿನಿಮಾ ಬಿಡುಗಡೆಗೆ ಯಾರೂ ಮುಂದೆ ಬರ್ತಿಲ್ವಲ್ಲಾ ಅನ್ನೋ ಬೇಜಾರು ಅವರಿಗೆ ಕಾಡ್ತಿದೆ'' - ಲಕ್ಷ್ಮಿ ದಿನೇಶ್, ನಿರ್ದೇಶಕ

  ದುಡ್ಡು ಪ್ರಾಬ್ಲಂ!

  ದುಡ್ಡು ಪ್ರಾಬ್ಲಂ!

  ''ಒಳ್ಳೆ ಸಿನಿಮಾ ಮಾಡಿದ್ರೂ, ಪಬ್ಲಿಸಿಟಿ ಮಾಡಬೇಕು. ಇಲ್ಲಾಂದ್ರೆ, ಸಿನಿಮಾ ಓಡಲ್ಲ. ಅವರಿಗೆ ಸ್ವಲ್ಪ ದುಡ್ಡು ಪ್ರಾಬ್ಲಂ ಆಗಿದೆ. ಪಬ್ಲಿಸಿಟಿಗೆ ದುಡ್ಡು ಆಗ್ತಿಲ್ಲ. ಒಳ್ಳೆ ಸಿನಿಮಾ ಮಾಡಿ ಚೆನ್ನಾಗಿ ಬಿಡುಗಡೆ ಮಾಡೋಕೆ ಆಗ್ತಿಲ್ಲ ಅನ್ನೋ ಬೇಜಾರು. ನಮಗೆ ಅವರೇ ಧೈರ್ಯ ಹೇಳ್ತಿದ್ರು. ಈಗ ರೀತಿ ಆಗಿರುವುದು ತುಂಬೇ ಬೇಸರ - ಲಕ್ಷ್ಮಿ ದಿನೇಶ್, ನಿರ್ದೇಶಕ

  ಸಿನಿಮಾ ಚೆನ್ನಾಗಿ ಬಂದಿದೆ!

  ಸಿನಿಮಾ ಚೆನ್ನಾಗಿ ಬಂದಿದೆ!

  ''ಸಿನಿಮಾ ಚೆನ್ನಾಗಿ ಬಂದಿರುವುದನ್ನ ನೋಡಿ, ಅವರು ನನ್ನ ತಬ್ಬಿಕೊಂಡರು. ಚೆನ್ನಾಗಿ ಬಂದಿರುವುದರಿಂದ ಗ್ರ್ಯಾಂಡ್ ಆಗಿ ರಿಲೀಸ್ ಮಾಡಬೇಕು ಅನ್ನೋದು ಅವರ ಕನಸು. ಅದು ಸಾಧ್ಯವಾಗ್ತಿಲ್ಲ. ಕೆಲ ತಿಂಗಳಿನಿಂದ ತುಂಬಾ ಒದ್ದಾಡುತ್ತಿದ್ದಾರೆ. ಅವರು ತುಂಬಾ ಸ್ವಾಭಿಮಾನಿ. ಸಾಲ ಮಾಡಿದರೂ, ಕರೆಕ್ಟ್ ಟೈಮ್ ಗೆ ತೀರಿಸಬೇಕು ಅನ್ನೋದು ಅವರ ಗುಣ. ಅದು ಆಗ್ತಿಲ್ಲ. ಎಲ್ಲದರಿಂದ ಅವರು ಖಿನ್ನತೆಗೆ ಒಳಗಾಗಿದ್ದಾರೆ'' - ಲಕ್ಷ್ಮಿ ದಿನೇಶ್, ನಿರ್ದೇಶಕ

  ಅನ್ನ ಹಾಕಿದ್ದಾರೆ!

  ಅನ್ನ ಹಾಕಿದ್ದಾರೆ!

  ''ನಾನು ಚಿತ್ರ ನಿರ್ದೇಶಕ ಆಗಿ ನಮಗೆಲ್ಲಾ ಅವರು ಅನ್ನ ಹಾಕಿದ್ದಾರೆ. ನಮ್ಮನ್ನ ಸಾಕಿದ್ದಾರೆ. ಅವರನ್ನ ಈ ಪರಿಸ್ಥಿತಿಯಲ್ಲಿ ನೋಡಿದ್ರೆ ಅಳು ಬರುತ್ತೆ. ದೇವರು ಅವರ ಪರಿಸ್ಥಿತಿಯನ್ನ ಸುಧಾರಿಸಲಿ ಅಂತ ಬೇಡಿಕೊಳ್ಳುತ್ತೇನೆ'' - ಲಕ್ಷ್ಮಿ ದಿನೇಶ್, ನಿರ್ದೇಶಕ

   ಹೀರೋ ಸಂದೀಪ್ ಹೇಳುವುದೇನು?

  ಹೀರೋ ಸಂದೀಪ್ ಹೇಳುವುದೇನು?

  ''ನನಗೆ ಅವರು ತುಂಬಾ ಒಳ್ಳೆ ಕ್ಲೋಸ್ ಫ್ರೆಂಡ್. ಸಿನಿಮಾ ಬಗ್ಗೆ ತುಂಬಾ ಪ್ಯಾಶನ್ ಇಟ್ಟುಕೊಂಡಿದ್ದಾರೆ. ಅವರನ್ನ ಈ ಪರಿಸ್ಥಿತಿಯಲ್ಲಿ ನೋಡಿ ತುಂಬಾ ಬೇಸರ ಆಗ್ತಿದೆ. ಸಿನಿಮಾಗಾಗಿ ಎಲ್ಲಾ ಪ್ರಯತ್ನ ಮಾಡಿದ್ರೂ, ಸತ್ತಾದರೂ ಸರಿ ಸಿನಿಮಾ ರಿಲೀಸ್ ಮಾಡ್ತೀನಿ ಅನ್ನೋ ಲೆವೆಲ್ ಗೆ ಹೋಗಿದ್ದಾರೆ ಅಂದ್ರೆ ಅವರ ಪರಿಸ್ಥಿತಿ ಬಗ್ಗೆ ಎಲ್ಲರೂ ಯೋಚನೆ ಮಾಡಬೇಕು'' - ಸಂದೀಪ್, ನಾಯಕ ನಟ

  ಸಾಲ ಇದೆ!

  ಸಾಲ ಇದೆ!

  ''ಸಿನಿಮಾಗಾಗಿ ಸಾಲ ಇದ್ದೇ ಇದೆ. ಸಿನಿಮಾ ಚೆನ್ನಾಗಿ ಬರಲಿ ಅಂತ ಇರೋಬರೋದೆಲ್ಲಾ ತೆಗೆದು ಹಾಕಿದರು. ಹಗಲು ರಾತ್ರಿ ಕಷ್ಟ ಪಟ್ಟು ಸಿನಿಮಾ ಮಾಡಿದ್ದೀವಿ. ಕೊನೆ ಟೈಮ್ ನಲ್ಲಿ ರಿಲೀಸ್ ಕಷ್ಟ ಆಗ್ತಿದೆ. ಹೇಳಿಕೊಳ್ಳುವುದಕ್ಕೆ ಬೇಜಾರು ಆಗುತ್ತೆ'' - ಸಂದೀಪ್, ನಾಯಕ ನಟ

  ಯಾರೂ ಸಹಾಯ ಮಾಡ್ತಿಲ್ಲ!

  ಯಾರೂ ಸಹಾಯ ಮಾಡ್ತಿಲ್ಲ!

  ''ಆಡಿಯೋ ರಿಲೀಸ್ ಮತ್ತು ಟ್ರೈಲರ್ ಲಾಂಚ್ ಕೂಡ ಗ್ರ್ಯಾಂಡ್ ಆಗಿ ಥಿಯೇಟರ್ ನಲ್ಲಿ ಮಾಡಿದ್ವಿ. ಎಲ್ಲವೂ ಚೆನ್ನಾಗಿತ್ತು. ವಿತರಕರಿಗೂ ಸಿನಿಮಾ ತೋರಿಸಿದ್ವಿ. ಇವರಿಗೂ ದುಡ್ಡು ಟೈಟ್ ಆಗಿದೆ. ಯಾರು ಸಹಾಯ ಮಾಡ್ತಿಲ್ಲ ಅಂತ ಸ್ವಲ್ಪ ಖಿನ್ನತೆಗೆ ಒಳಗಾಗಿದ್ದಾರೆ'' - ಸಂದೀಪ್, ನಾಯಕ ನಟ

  English summary
  Kannada Film 1/2 Mentlu (Half Mentlu) producer Shashi Kumar attempted to commit suicide on Thursday (February 18th) in Kamakshipalya, Bengaluru. Shashi Kumar has reacted to the media regarding this incident. Take a look.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X