»   » ನಟಿ ಸುಮಲತಾ ಅಂಬರೀಶ್ 'ವಿರಾಟ್' ದರ್ಶನ

ನಟಿ ಸುಮಲತಾ ಅಂಬರೀಶ್ 'ವಿರಾಟ್' ದರ್ಶನ

Posted By:
Subscribe to Filmibeat Kannada

ಅಂತೂ ಚಾಲೆಂಜಿಂಗ್ ಸ್ಟಾರ್ ದರ್ಶನ್ 'ವಿರಾಟ್' ದರ್ಶನಕ್ಕೆ ಕಾಲ ಕೂಡಿ ಬಂದಿದೆ. 'ಸಾರಥಿ' ಚಿತ್ರದ ನಂತರ ತೆರೆಗೆ ಬರಬೇಕಿದ್ದ 'ವಿರಾಟ್' ಸಿನಿಮಾ ಅನಿವಾರ್ಯ ಕಾರಣಗಳಿಂದ ಇನ್ನೂ ಶೂಟಿಂಗ್ ಹಂತದಲ್ಲೇ ಇದೆ.

ವರ್ಷಗಳಿಂದ ಚಿತ್ರೀಕರಣ ನಡೆಸದ 'ವಿರಾಟ್' ಚಿತ್ರ ಮೊನ್ನೆ ಸೋಮವಾರದಿಂದ ಶೂಟಿಂಗ್ ಗೆ ಚಾಲನೆ ನೀಡಿದೆ. ಇಂದು ಬೆಂಗಳೂರಿನ ಮೂವೆನ್ ಪಿಕ್ ಹೊಟೇಲ್ ನಲ್ಲಿ ಚಿತ್ರೀಕರಣ ಭರದಿಂದ ಸಾಗುತ್ತಿದೆ.

Sumalatha Ambareesh plays special role in Darshan's Viraat

ವಿಶೇಷ ಅಂದ್ರೆ, ಇಂದು ಶೂಟಿಂಗ್ ನಲ್ಲಿ ಪಾಲ್ಗೊಂಡಿರುವುದು ನಟಿ ಸುಮಲತಾ ಅಂಬರೀಶ್. 'ವಿರಾಟ್' ಚಿತ್ರದ ಬಹುಮುಖ್ಯ ಪಾತ್ರವೊಂದರಲ್ಲಿ ಸುಮಲತಾ ನಟಿಸುತ್ತಿದ್ದಾರೆ. ಅವರ ಭಾಗದ ಚಿತ್ರೀಕರಣ ಇಂದು ಅದ್ದೂರಿಯಾಗಿ ನಡೆಯುತ್ತಿದೆ. [ದರ್ಶನ್ 'ವಿರಾಟ್' ಚಿತ್ರಕ್ಕೆ ಕಡೆಗೂ ಕೂಡಿಬಂತು ಗಳಿಗೆ]

ದರ್ಶನ್ ಅಭಿನಯದ 'ಅಂಬರೀಶ' ಚಿತ್ರದಲ್ಲಿ ನಟಿ ಸುಮಲತಾ ನಟಿಸಬೇಕಿತ್ತು. ಆದ್ರೆ, ಅಂಬಿ ಆರೋಗ್ಯದಲ್ಲಿ ಏರುಪೇರಾದ ಕಾರಣ ಅಂದು ನಟಿಸಿದ ಸುಮಲತಾ ಇಂದು ಅದೇ ದರ್ಶನ್ ಚಿತ್ರದಲ್ಲಿ ನಟಿಸುತ್ತಿದ್ದಾರೆ.

Sumalatha Ambareesh plays special role in Darshan's Viraat

ಸುಮಲತಾ ಅಂಬರೀಶ್ ನಿರ್ವಹಿಸುತ್ತಿರುವ ಪಾತ್ರದ ಬಗ್ಗೆ ನಿರ್ದೇಶಕರು 'ಸಸ್ಪೆನ್ಸ್' ಅಂತಷ್ಟೇ ಹೇಳಿದ್ದಾರೆ. ಎಚ್.ವಾಸು 'ವಿರಾಟ್' ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಚೈತ್ರಾ ಚಂದ್ರನಾಥ್, ವಿದಿಷಾ ಶ್ರೀವಾತ್ಸವ್ ಮತ್ತು ಇಷಾ ಚಾವ್ಲಾ ದರ್ಶನ್ ಗೆ ನಾಯಕಿಯರಾಗಿ ಕಾಣಿಸಿಕೊಳ್ಳುತ್ತಿದ್ದಾರೆ.[ಚಾಲೆಂಜಿಂಗ್ ಸ್ಟಾರ್ ದರ್ಶನ್ ಚಿತ್ರದ ನಿರ್ಮಾಪಕರು ನಾಪತ್ತೆ?]

ಇನ್ನು ಕೆಲವೇ ದಿನಗಳಲ್ಲಿ 'ವಿರಾಟ್' ಸಿನಿಮಾದ ಶೂಟಿಂಗ್ ಕಂಪ್ಲೀಟ್ ಆಗುವುದರಿಂದ, ಇದೇ ವರ್ಷ ದರ್ಶನ್ ಅಭಿನಯದ ಎರಡು ಚಿತ್ರಗಳು ತೆರೆಗೆ ಬಂದ್ರೂ ಅಚ್ಚರಿಯಿಲ್ಲ. (ಫಿಲ್ಮಿಬೀಟ್ ಕನ್ನಡ)

English summary
Actress Sumalatha Ambareesh is roped into play special role in Challenging Star Darshan starrer 'Viraat'. The shooting of 'Viraat' resumed on Monday, after two years gap. The movie is directed by H.Vasu.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada