For Quick Alerts
  ALLOW NOTIFICATIONS  
  For Daily Alerts

  ಅಂದು ತಂದೆಗೆ ನಾಯಕಿ, ಇಂದು ಮಗನಿಗೆ ತಾಯಿ: ಸುಮಲತಾ ದಿಲ್ ಖುಷ್!

  By Harshitha
  |

  ಸುಂದರ ವದನದ ಸುಕೋಮಲ ಚೆಲುವೆ ನಟಿ ಸುಮಲತಾ ಬಣ್ಣ ಹಚ್ಚಲು ಶುರು ಮಾಡಿದ್ದು ಹದಿ ಹರೆಯದ ಹದಿನೈದನೇ ವಯಸ್ಸಿನಲ್ಲಿ. ಟಾಲಿವುಡ್ ಮೂಲಕ ಸಿನಿ ಲೋಕಕ್ಕೆ ಕಾಲಿಟ್ಟಿದ್ದರೂ, ಕನ್ನಡ ಚಿತ್ರರಂಗದಲ್ಲಿ ಸುಮಲತಾ ಹೆಸರುವಾಸಿ.

  ನಟಸಾರ್ವಭೌಮ ಡಾ.ರಾಜ್ ಕುಮಾರ್ ರವರಿಗೆ 'ರವಿ ಚಂದ್ರ' ಚಿತ್ರದಲ್ಲಿ ನಾಯಕಿ ಆಗುವ ಮೂಲಕ ಸುಮಲತಾ ಸ್ಯಾಂಡಲ್ ವುಡ್ ಗೆ ಪದಾರ್ಪಣೆ ಮಾಡಿದರು.

  ಅಂದು ಅಪ್ಪಾಜಿ ಡಾ.ರಾಜ್ ಗೆ ಜೋಡಿ ಆಗಿದ್ದ ನಟಿ ಸುಮಲತಾ, ಇದೀಗ 35 ವರ್ಷಗಳ ಬಳಿಕ, ಮೊಟ್ಟ ಮೊದಲ ಬಾರಿಗೆ ಅಣ್ಣಾವ್ರ ಮಗ ಪುನೀತ್ ರಾಜ್ ಕುಮಾರ್ ಗೆ 'ದೊಡ್ಮನೆ ಹುಡ್ಗ' ಚಿತ್ರದಲ್ಲಿ ತಾಯಿ ಆಗಿ ಅಭಿನಯಿಸಿದ್ದಾರೆ. ['ದೊಡ್ಮನೆ ಹುಡ್ಗ' ಟ್ರೈಲರ್ ನಲ್ಲಿ ಅದೆಷ್ಟು ವಿಶೇಷತೆಗಳಿವೆ ಗೊತ್ತಾ.?]

  ಈ ಬಗ್ಗೆ 'ದೊಡ್ಮನೆ ಹುಡ್ಗ' ಚಿತ್ರದ ಪತ್ರಿಕಾಗೋಷ್ಟಿಯಲ್ಲಿ ನಟಿ ಸುಮಲತಾ ಸಂತಸ ವ್ಯಕ್ತ ಪಡಿಸಿದರು. ಓವರ್ ಟು ನಟಿ ಸುಮಲತಾ ಅಂಬರೀಶ್.....[ರಿಲಯನ್ಸ್ ನಿಂದ ಕಾರಿನ ವಿಮೆ ಮಾಡಿಸಿ, ನಿರಾಳವಾಗಿರಿ]

  35 ವರ್ಷಗಳ ಹಿಂದೆ....

  35 ವರ್ಷಗಳ ಹಿಂದೆ....

  ''ಕನ್ನಡ ಚಿತ್ರರಂಗದಲ್ಲಿ ನನ್ನ ಜರ್ನಿ ಶುರು ಆಗಿದ್ದು ಮೂವತ್ತೈದು ವರ್ಷಗಳ ಹಿಂದೆ ದಿ ಗ್ರೇಟ್ ಲೆಜೆಂಡ್ ಡಾ.ರಾಜ್ ಕುಮಾರ್ ಜೊತೆ, 'ರವಿಚಂದ್ರ' ಸಿನಿಮಾದ ಮೂಲಕ. ಆಗ ನನಗೆ ಹದಿನೈದು ವರ್ಷ. ಪುನೀತ್ ಆಗಿನ್ನೂ ಐದು ವರ್ಷದ ಪುಟ್ಟ ಹುಡುಗ'' - ನಟಿ ಸುಮಲತಾ ಅಂಬರೀಶ್

  35 ವರ್ಷಗಳ ಬಳಿಕ...

  35 ವರ್ಷಗಳ ಬಳಿಕ...

  ''ಈಗ ಮೂವತ್ತೈದು ವರ್ಷದ ಬಳಿಕ ಪುನೀತ್ ಗೆ ತಾಯಿ ಆಗಿ ಆಕ್ಟ್ ಮಾಡಿದ್ದೀನಿ. ನಿಜವಾಗ್ಲೂ ಪುನೀತ್ ಜೊತೆ ವರ್ಕ್ ಮಾಡಿ ತುಂಬಾ ಖುಷಿ ಆಯ್ತು'' - ನಟಿ ಸುಮಲತಾ ಅಂಬರೀಶ್

  ಪುನೀತ್ ತುಂಬಾ ಸಿಂಪಲ್

  ಪುನೀತ್ ತುಂಬಾ ಸಿಂಪಲ್

  ''ಪುನೀತ್ ತುಂಬಾ ಸಿಂಪಲ್. ಗಾಸಿಪ್ ಮಾಡುವ ಅಭ್ಯಾಸ ಇಲ್ಲ. ಸಿನಿಮಾ ಅಂದ್ರೆ ತುಂಬಾ ಆಸೆ ಅವರಿಗೆ. ಒಳ್ಳೊಳ್ಳೆ ಸಿನಿಮಾಗಳನ್ನ ಮಿಸ್ ಮಾಡದೆ ನೋಡ್ತಾರೆ. ಅಪ್ಪು ಯು ಆರ್ ವೆರಿ ಸ್ವೀಟ್'' - ನಟಿ ಸುಮಲತಾ ಅಂಬರೀಶ್

  ಭಾರತಿ ವಿಷ್ಣುವರ್ಧನ್ ಜೊತೆ ಮೊದಲ ಬಾರಿ ನಟನೆ

  ಭಾರತಿ ವಿಷ್ಣುವರ್ಧನ್ ಜೊತೆ ಮೊದಲ ಬಾರಿ ನಟನೆ

  ''ಗೆಳೆತನ ಇದ್ದರೂ ಭಾರತಿ ವಿಷ್ಣುವರ್ಧನ್ ರವರ ಜೊತೆಗೂ ನಾನು ಇದೇ ಮೊದಲ ಬಾರಿ ತೆರೆ ಹಂಚಿಕೊಂಡಿದ್ದು. ರಾಧಿಕಾ ಪಂಡಿತ್ ತುಂಬಾ ಫೋಕಸ್ಡ್ ಆಗಿರುವ ನಟಿ'' - ನಟಿ ಸುಮಲತಾ ಅಂಬರೀಶ್ ['ದೊಡ್ಮನೆ ಹುಡ್ಗಿ' ರಾಧಿಕಾ ಪಂಡಿತ್ ಜೊತೆ ಎಕ್ಸ್ ಕ್ಲೂಸಿವ್ ಚಿಟ್ ಚಾಟ್]

  'ದೊಡ್ಮನೆ'ಯಲ್ಲಿ ಭಾಗಿಯಾಗಿರುವುದಕ್ಕೆ ಖುಷಿ ಇದೆ

  'ದೊಡ್ಮನೆ'ಯಲ್ಲಿ ಭಾಗಿಯಾಗಿರುವುದಕ್ಕೆ ಖುಷಿ ಇದೆ

  ''ದೊಡ್ಮನೆ ಹುಡ್ಗ' ಚಿತ್ರದಲ್ಲಿ ನನ್ನದು ಸಣ್ಣ ಪಾತ್ರ. ಆದರೂ, ಈ ಸಿನಿಮಾದಲ್ಲಿ ಭಾಗಿಯಾಗಿರುವುದು ನನಗೆ ಖುಷಿ ಕೊಟ್ಟಿದೆ. ತುಂಬಿದ ಮನೆ ಹಾಗೆ ಪ್ರತಿ ದಿನ ಶೂಟಿಂಗ್ ನಡೆಯುತ್ತಿತ್ತು'' - ನಟಿ ಸುಮಲತಾ ಅಂಬರೀಶ್

  ನಮಗೆ ಹೊಸ ಚಾಲೆಂಜ್!

  ನಮಗೆ ಹೊಸ ಚಾಲೆಂಜ್!

  ''ಸೂರಿ ಯಾವುದಕ್ಕೂ ರಿಸ್ಟ್ರಿಕ್ಟ್ ಮಾಡುತ್ತಿರಲಿಲ್ಲ. ಒಂದು ಸೀನ್ ಕೊಟ್ಟು ಹೇಗೆ ಮಾಡ್ತೀರಾ ಅಂತ ಕೇಳ್ತಿದ್ರು. ಹೀಗಾಗಿ ಇದು ನಮಗೆ ಹೊಸ ಚಾಲೆಂಜ್'' - ನಟಿ ಸುಮಲತಾ ಅಂಬರೀಶ್

  ಟ್ರೈಲರ್ ನೋಡಿ ಖುಷಿ ಆಗಿದೆ!

  ಟ್ರೈಲರ್ ನೋಡಿ ಖುಷಿ ಆಗಿದೆ!

  ''ದೊಡ್ಮನೆ ಹುಡ್ಗ' ಚಿತ್ರದ ಟೀಸರ್, ಟ್ರೈಲರ್ ನೋಡಿ ನನಗೆ ತುಂಬಾ ಖುಷಿ ಆಗಿದೆ'' - ನಟಿ ಸುಮಲತಾ ಅಂಬರೀಶ್

  English summary
  'Puneeth Rajkumar is very sweet and down to earth', says Kannada Actress Sumalatha Ambareesh. During the Press meet of 'Doddmane Hudga' held at Hotel Citadel on August 25th, Sumalatha Ambareesh shared her experience working with Puneet Rajkumar, Bharathi Vishnuvardhan, Radhika Pandit in Kannada Movie 'Doddmane Hudga'.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X