For Quick Alerts
  ALLOW NOTIFICATIONS  
  For Daily Alerts

  ಪೈಸಾಗಾಗಿ ಚಿತ್ರ ಮಾಡುತ್ತಿರುವ ಸುಮಲತಾ ಅಂಬರೀಶ್

  By ಜೀವನರಸಿಕ
  |

  ಅದು ರವೀನ್ ಅನ್ನೋ ಹೊಸಬರ ನಿರ್ದೇಶನದ ಚಿತ್ರ. 'ಮಂದಹಾಸ' ಹಾಗೂ 'ದ್ಯಾವ್ರೇ' ಚಿತ್ರಗಳಲ್ಲಿ ಮುಖ್ಯಪಾತ್ರ ಮಾಡಿರೋ ಚೇತನ್ ಗಂಧರ್ವ ಇಲ್ಲಿ ಮೊದಲ ಬಾರಿಗೆ ಸೋಲೋ ಹೀರೋ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರ ಡಿಸೆಂಬರ್ 18ರಿಂದ ಚಿತ್ರೀಕರಣ ಆರಂಭಿಸಲಿದೆ. [ದ್ಯಾವ್ರೇ ಚಿತ್ರ ವಿಮರ್ಶೆ]

  ರೋಮ್ಯಾಂಟಿಕ್ ಥ್ರಿಲ್ಲರ್ ಕಥೆಯಾಗಿರೋ 'ಪೈಸಾ'ಗೆ ಪ್ರಿಯಾ ಅನ್ನೋ ಗುಜರಾತಿ ಮೂಲದ ಹುಡುಗಿ ಹೀರೋಯಿನ್ನಾಗಿ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಚಿತ್ರದಲ್ಲಿ 'ರಾಜಾಹುಲಿ' ಚಿತ್ರದಲ್ಲಿ ನಟಿಸಿದ್ದ ಚಿಕ್ಕಣ್ಣ, ವಶಿಷ್ಠ, ಮಂಜುಮಾಂಡವ್ಯ ಮುಖ್ಯ ತಾರಾಗಣದಲ್ಲಿ ಮಿಂಚಲಿದ್ದಾರೆ.

  'ರಾಜಾಹುಲಿ'ಯಲ್ಲಿ ಭರ್ಜರಿ ಸಂಭಾಷಣೆ ಬರೆದಿದ್ದ ಮಂಜುಮಾಂಡವ್ಯ ಸಂಬಾಷಣೆಯೇ 'ಪೈಸಾ' ಚಿತ್ರದಲ್ಲೂ ಇರಲಿದೆ. ಸಂತೋಷ್ ರೈ ಪಾತಾಜೆ ಕ್ಯಾಮೆರಾ ಕಮಾಲ್ ಮಾಡಲಿದ್ದು, ಪದೇ ಪದೇ ಚಿತ್ರವನ್ನ ನಿರ್ಮಿಸಿದ್ದ ನಿಹಾಲ್ ಬ್ಯಾನರ್ ಈಗ 'ಪೈಸಾ' ಚಿತ್ರ ನಿರ್ಮಿಸ್ತಿದೆ.

  ಅಂದಹಾಗೆ ಇಲ್ಲಿ ಸುಮಲತಾ ಅಂಬರೀಶ್ ಒಂದು ಮುಖ್ಯಪಾತ್ರ ಮಾಡಲಿದ್ದಾರೆ. ಆ ಪಾತ್ರ ಯಾವ್ದು ಅನ್ನೋದು ಸದ್ಯದಲ್ಲೇ ಗೊತ್ತಾಗಲಿದೆ. ಇನ್ನು ಸುಮಲತಾ ಅವರು ಕನ್ನಡ, ತೆಲುಗು, ಮಲಯಾಳಂ, ತಮಿಳು ಹಾಗೂ ಹಿಂದಿಯಲ್ಲಿ ಇದುವರೆಗೂ 200ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಸುದೀರ್ಘ ಸಮಯದ ಬಳಿಕ ಇದೀಗ ಮತ್ತೆ ಬಣ್ಣ ಹಚ್ಚುತ್ತಿದ್ದಾರೆ.

  English summary
  After a long break actress Sumalatha Ambarish back to Kannada silver screen. Sulatha is doing a cameo role in Kannada movie 'Paisa', directed by newcomer Raveen. Sumalatha character not revealed the film.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X