For Quick Alerts
  ALLOW NOTIFICATIONS  
  For Daily Alerts

  ಜಯಶ್ರೀ ದೇವಿ ನಿಧನಕ್ಕೆ ಸಂತಾಪ ಸೂಚಿಸಿದ ಸುಮಲತಾ, ಮೇಘನಾ

  |

  ಕನ್ನಡ ಚಿತ್ರರಂಗಕ್ಕೆ ಅನೇಕ ಸಿನಿಮಾಗಳನ್ನು ನೀಡಿದ್ದ ನಿರ್ಮಾಪಕಿ ಜಯಶ್ರೀ ದೇವಿ ಇಂದು ಬೆಳಗ್ಗೆ ನಿಧನ ಹೊಂದಿದ್ದಾರೆ. ಹೃದಯಘಾತದಿಂದ ಹೈದರಾಬಾದ್ ನ ಅಪೋಲೋ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

  ಕನ್ನಡ ಚಿತ್ರರಂಗದ ಪ್ರಖ್ಯಾತ ನಿರ್ಮಾಪಕಿ ಜಯಶ್ರೀದೇವಿ ಇನ್ನಿಲ್ಲ

  ಜಯಶ್ರೀಯವರ ನಿಧನಕ್ಕೆ ಕನ್ನಡ ಚಿತ್ರರಂಗದ ನಟಿಯರಾದ ಸುಮಲತಾ ಅಂಬರೀಶ್ ಹಾಗೂ ಮೇಘನಾ ರಾಜ್ ಕಂಪನಿ ಮಿಡಿದಿದ್ದಾರೆ. ಟ್ವಿಟ್ಟರ್ ಖಾತೆಯ ಮೂಲಕ ಈ ಇಬ್ಬರು ನಟಿಯರು ಸಂತಾಪ ಸೂಚಿಸಿದ್ದಾರೆ.

  ''ಜಯಶ್ರೀ ದೇವಿ ಅಮ್ಮನವರ ಅಕಾಲಿಕ ಮರಣದ ಸುದ್ದಿ ಕೇಳಿ ನನಗೆ ಆಘಾತ ಮತ್ತು ತುಂಬ ದುಃಖ ಆಗಿದೆ. 'ಕುರುಕ್ಷೇತ್ರ' ಸಿನಿಮಾದಲ್ಲಿ ನನಗೆ ಭಾಗಿ ಆಗುವಂತೆ ಮಾಡಿದ್ದಕ್ಕೆ ಧನ್ಯವಾದ. ಇದು ನನ್ನ ಇಡೀ ಜೀವನದಲ್ಲಿ ನೆನಪಿನಲ್ಲಿ ಇಟ್ಟುಕೊಳ್ಳುವಂತದ್ದು. ಅವರ ಆತ್ಮಕ್ಕೆ ಶಾಂತಿ ಸಿಗಲಿ.'' ಎಂದು ಮೇಘನಾ ರಾಜ್ ಟ್ವೀಟ್ ಮಾಡಿದ್ದಾರೆ.

  ''ಇದು ಆಘಾತ ಹಾಗೂ ದುಃಖದ ವಿಷಯ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ನಾನು ಹಾಗೂ ಅಂಬರೀಶ್ ಜಯಶ್ರೀ ಅವರ ಬ್ಯಾನರ್ ನಲ್ಲಿ ಬಂದ ಶ್ರೀ ಮಂಜುನಾಥ ಚಿತ್ರದಲ್ಲಿ ನಟಿಸಿದೆವು. 'ಹಬ್ಬ' ಹಾಗೂ 'ವಂದೇ ಮಾತರಂ' ಸಿನಿಮಾಗಳಲ್ಲಿ ಅಂಬರೀಶ್ ಅಭಿನಯಿಸಿದ್ದರು.'' ಎಂದು ಟ್ವಿಟ್ಟರ್ ನ ಮೂಲಕ ಸುಮಲತಾ ಸಂತಾಪ ಸೂಚಿಸಿದ್ದಾರೆ.

  'ಭವಾನಿ', 'ನಮ್ಮೂರ ಮಂದಾರ ಹೂವೆ', 'ಅಮೃತ ವರ್ಷಿಣಿ', 'ಶ್ರೀ ಮಂಜುನಾಥ', 'ನಿಶ್ಯಬ್ದ', 'ಕೋಣ ಈದೈತೆ' ಮುಂತಾದ ಚಿತ್ರಗಳನ್ನು ಜಯಶ್ರೀ ಅವರ ನಿರ್ಮಾಣ ಮಾಡಿದ್ದರು. ಮುಕುಂದ ಮುರಾರಿ ಅವರು ಕಾರ್ಯಕರಿ ನಿರ್ಮಾಪಕಿಯಾಗಿ ಕೆಲಸ ಮಾಡಿದ ಕೊನೆಯ ಸಿನಿಮಾವಾಗಿದೆ.

  English summary
  Kannada actress Sumalatha Ambarish and Meghana Raj condolences for producer Jayashree Devi death.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X